ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ತಾಲ್ಲೂಕಿನ ದೊಡ್ಡಶಿವಾರ ಗ್ರಾಮದ ಪ್ರೌಡಶಾಲೆಯ ಮೂಲಭೂತ ಸೌಕರ್ಯವನ್ನು ಸುಧಾರಿಸುವ ಮೂಲಕ ಉತ್ತಮ ಶಾಲಾ ವಾತಾವರಣ ರಚಿಸುವುದು ಎಸ್.ಎಂ. ಸೆಹಗಲ್ ಫೌಂಡೇಶನ್ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ಸಂಸ್ಥೆಯ ಸಹಾಯಕ ಕಾರ್ಯಕ್ರಮ ಅಧಿಕಾರಿ ಕೆ.ಎಸ್. ಚೇತನ್ ತಿಳಿಸಿದರು.ತಾಲೂಕಿನ ದೊಡ್ಡಶಿವಾರ ಗ್ರಾಮದ ಪ್ರೌಢಶಾಲೆಯನ್ನು ಕರ್ನಾಟಕದ ಗ್ರಾಮೀಣ ಶಾಲಾ ರೂಪಾಂತರ ಕಾರ್ಯಕ್ರಮದ ಅಡಿಯಲ್ಲಿ ಎಸ್.ಎಂ. ಸೆಹಗಲ್ ಫೌಂಡೇಶನ್ ಸಂಸ್ಥೆ, ತಾಲ್ಲೂಕು ಶಿಕ್ಷಣ ಅಧಿಕಾರಿಗಳು, ಶಾಲಾ ಅಡಳಿತ ಹಾಗು ಗ್ರಾಮಸ್ಥರೊಡನೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಶಾಲೆಗೆ ಅಗತ್ಯ ಸೌಲಭ್ಯ
ಸೆಹಗಲ್ ಫೌಂಡೇಶನ್ ಸಂಸ್ಥೆಯು ಶಾಲೆಯ ಮೂಲಭೂತ ಸೌಕರ್ಯವನ್ನು ಸುಧಾರಿಸುವ ಮೂಲಕ ಉತ್ತಮ ಶಾಲಾ ವಾತಾವರಣ ರಚಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಈ ಅಭಿವೃದ್ಧಿ ಕಾಮಗಾರಿಯಲ್ಲಿ ಬಾಲಕ, ಬಾಲಕಿಯರ ಶೌಚಾಲಯ ನಿರ್ಮಾಣ, ಅಡುಗೆಮನೆ ನವೀಕರಣ, ಪಾತ್ ವೇ, ಕುಡಿಯುವ ನೀರಿನ ಘಟಕ ನವೀಕರಣ, ಕೈತೊಳೆಯುವ ಘಟಕನಿರ್ಮಾಣ, ನೆಲಹಾಸು ದುರಸ್ತಿ, ಕೊಠಡಿಗಳಿಗೆ ಬಣ್ಣ ಬಳಿಯುವುದು, ಚಿತ್ರಕಲೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುವುದು ಎಂದ ಚೇತನ್ಗ್ರಾ ಅವರು ನಮ್ಮ ಕಾರ್ಯಕ್ಕೆ ಶಾಲಾಭಿವೃಧಿ ಸಮಿತಿ , ಶಾಲಾ ಅಡಳಿತ ಹಾಗೂ ಗ್ರಾಮಸ್ಥರು ಸಹಕಾರ ನೀಡಬೇಕೆಂದು ತಿಳಿಸಿದರು. ಸಂಸ್ಥೆಯ ನೆರವಿಗೆ ಶ್ಲಾಘನೆಬಿಇಒ ಎಚ್.ಎಸ್. ಚಂದ್ರಕಲಾ ಅವರು ಮಾತನಾಡಿ ಶಾಲೆಯಲ್ಲಿ ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಮೂಲಭೂತ ಸೌಕರ್ಯಗಳ ನಿರ್ಮಾಣದಿಂದ ಮಕ್ಕಳಿಗೆ ಕಲಿಕೆಯಲ್ಲಿ ಉತ್ಸಾಹ ಹೆಚ್ಚಾಗಿ ಉತ್ತಮ ಫಲಿತಾಂಶ ಪಡೆಯಲು ಸಹಕಾರಿ ಯಾಗಲಿದೆ. ಈಗಾಗಲೇ ಸೆಹಗಲ್ ಫೌಂಡೇಶನ್ ಸಂಸ್ಥೆಯವರು ಮಾಲೂರು ಪಟ್ಟಣದ ಬಾಲಕರ ಪ್ರೌಢಶಾಲೆ, ಅರಳೇರಿಯ ಗ್ರಾಮದ ಪ್ರೌಢಶಾಲೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇನ್ನು ತಾಲೂಕಿನಲ್ಲಿ ಇರುವಂತಹ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುತ್ತಿರುವ ಸೆಹಗಲ್ ಫೌಂಡೇಶನ್ ಅವರಿಗೆ ಧನ್ಯವಾದಗಳನ್ನು ತಿಳಿಸುವುದಾಗಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಎಸ್.ಎನ್.ರಘುನಾಥ್, ಉಪಾಧ್ಯಕ್ಷ ರಾಮಸ್ವಾಮಿರೆಡ್ಡಿ, ಸಮಿತಿಯ ಸದಸ್ಯರಾದ ಶ್ರೀನಾಥ್(ಬುಜ್ಜಿ), ರವೀಂದ್ರರೆಡ್ಡಿ, ನಾರಾಯಣಸ್ವಾಮಿ(ನಾಣಿ), ನಾಗರಾಜ್, ರಮೇಶ್, ಸರೋಜಮ್ಮ, ಪೌಂಡೇಶನ್‌ಸಂಸ್ಥೆಯ ಪ್ರೋಗ್ರಾಮ್ ಲೀಡ್ ಮನೋಜ್ ಸೂರ್ಯವಂಶಿ, ವಿಜಯ್‌ಪುಲಿ, ವಿಜಯ್ ಕುಮಾರ್, ಮುಖ್ಯೋಪಾಧ್ಯಾಯಿನಿ ಎನ್. ಮಮತ ಶಿಕ್ಷಕರಾದ ದೇವದತ್‌ನಾಯಕ್, ಗುಲ್ಜರ್, ಶಶಿಧರ್, ಸೌಜನ್ಯ, ಗಿರಿಜಮ್ಮ, ಸರಿತಾ, ಗೋಪಿ, ಪುನೀತ್, ನಾಜಿಯಾ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.