ಕ್ಷೇತ್ರದಲ್ಲಿನ ರಸ್ತೆಗಳ ಅಭಿವೃದ್ಧಿಗೆ ಬದ್ಧ: ರಾಘವೇಂದ್ರ ಹಿಟ್ನಾಳ

| Published : Jan 12 2025, 01:15 AM IST

ಸಾರಾಂಶ

ತಾಲೂಕಿನ ಹಲಗೇರಿ ಕ್ರಾಸ್‌ನಿಂದ ಬಿಸರಳ್ಳಿ ಕ್ರಾಸ್ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ₹6 ಕೋಟಿ ವೆಚ್ಚದಲ್ಲಿ ಭೂಮಿಪೂಜೆಯನ್ನು ಶಾಸಕ ರಾಘವೇಂದ್ರ ಹಿಟ್ನಾಳ ನೆರವೇರಿಸಿದರು.

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕಕನ್ನಡಪ್ರಭ ವಾರ್ತೆ ಕೊಪ್ಪಳ

ತಾಲೂಕಿನ ಹಲಗೇರಿ ಕ್ರಾಸ್‌ನಿಂದ ಬಿಸರಳ್ಳಿ ಕ್ರಾಸ್ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ₹6 ಕೋಟಿ ವೆಚ್ಚದಲ್ಲಿ ಭೂಮಿಪೂಜೆಯನ್ನು ಶಾಸಕ ರಾಘವೇಂದ್ರ ಹಿಟ್ನಾಳ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಕ್ಷೇತ್ರದಲ್ಲಿ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದು, ಅನುದಾನ ತರುವ ಕೆಲಸ ಮಾಡುತ್ತಿದ್ದೇವೆ. ಅಳವಂಡಿ ಮತ್ತು ಹಿರೇಸಿಂದೋಗಿ ಭಾಗದಲ್ಲಿಯೇ ಸುಮಾರು ₹100 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿ ಕೆಲಸವಾಗುತ್ತದೆ. ಹಲಗೇರಿ ಕ್ರಾಸ್‌ನಿಂದ ಹಿರೇಸಿಂದೋಗಿ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಬಹುಬೇಡಿಕೆ ಇದ್ದ ಕಾರಣ ಸುಮಾರು ₹6 ಕೋಟಿ ಅನುದಾನ ಮಂಜೂರು ಮಾಡಿಸಿ ಇಂದು ಅಡಿಗಲ್ಲು ನೆರವೇರಿಸಿದ್ದೇನೆ. ನಾಳೆಯಿಂದಲೇ ಕಾಮಗಾರಿ ಪ್ರಾರಂಭ ಮಾಡಿ ಗುಣಮಟ್ಟವಾದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಸಂಸದ ಕೆ. ರಾಜಶೇಖರ್ ಹಿಟ್ನಾಳ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರೆಡ್ಡಿ, ಜಿಪಂ ಮಾಜಿ ಸದಸ್ಯರಾದ ಪ್ರಸನ್ನ ಗಡಾದ್, ರಾಮಣ್ಣ ಚೌಡ್ಕಿ, ಜಿಲ್ಲಾ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಗಾಳೆಪ್ಪ ಪೂಜಾರ್, ಶಂಕ್ರಪ್ಪ ಅಂಗಡಿ, ಶಿವಣ್ಣ ಹಂದ್ರಾಳ, ಮಂಜುನಾಥ್ ಹಂದ್ರಾಳ ಹನುಮಂತ ಹಳ್ಳಿಕೇರಿ, ಮಂಜುನಾಥ್ ಆರ್.ಐ., ಶರಣಪ್ಪ ಸಜ್ಜನ್, ಹನುಮಂತ ಅಬ್ಬಿಗೇರಿ, ಸುರೇಶ್ ಹಳ್ಳಿಕೇರಿ, ಸೋಮಣ್ಣ ವದಗನಾಳ, ಅಶೋಕ ಹಲಗೇರಿ, ಕರಿಯಪ್ಪ ಹಳ್ಳಿಕೇರಿ, ಗುಡದಪ್ಪ ಹಲಗೇರಿ, ವಿನಯ್ ಅಗಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.