ಚನ್ನರಾಯಪಟ್ಟಣ: ನವೋದಯ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ ಲಾಯರ್ ಜಲೇಂದ್ರ ಕುಮಾರ್‌ ಹಾಗೂ ಖಜಾಂಚಿಯಾಗಿ ಸಂತೋಷ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಟ್ಟಣದ ನವೋದಯ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಈ ಹಿಂದೆ ಇದ್ದಂತಹ ಕಾರ್ಯದರ್ಶಿ ಶರತ್ ಹಾಗೂ ಖಜಾಂಚಿ ಇವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಅವಿರೋಧ ಪ್ರಕ್ರಿಯೆಯನ್ನು ನಡೆಸಲಾಯಿತು. ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ನಿಂಗರಾಜು ಮಾತನಾಡಿ ನವೋದಯ ವಿದ್ಯಾಸಂಸ್ಥೆಯು ತಾಲೂಕಿನಲ್ಲಿ ಒಳ್ಳೆ ಹೆಸರು ಗಳಿಸಿರುವ ವಿದ್ಯಾಸಂಸ್ಥೆಯಾಗಿದೆ. ಈ ವಿದ್ಯಾ ಸಂಸ್ಥೆಯ ಅಧ್ಯಕ್ಷರಾಗಿ ವಕೀಲರಾದ ಜಲೇಂದ್ರ ಕುಮಾರ್‌ ಅವರು ಅವಿರೋಧವಾಗಿ ಆಯ್ಕೆ ಆಗಿರುವುದು ಸಂತೋಷದ ವಿಚಾರ ಇವರು ಸಮಾಜ ಸೇವಕರು ಹಾಗೂ ವಿಶೇಷ ಚಿಂತಕರು ಇಂತಹ ಅಭ್ಯರ್ಥಿಯನ್ನು ಇಂದು ಕಾರ್ಯದರ್ಶಿಯಾಗಿ ಆಯ್ಕೆ ಮಾಡಿರುವುದು ಸಂತೋಷದ ವಿಚಾರ ಈ ವಿದ್ಯಾ ಸಂಸ್ಥೆಯನ್ನು ಇನ್ನು ಉನ್ನತ ಮಟ್ಟಕ್ಕೆ ಬೆಳೆಸಲಿ ಮತ್ತು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಎಲ್ಲಾ ನಿರ್ದೇಶಕರು ಮತ್ತು ಆಡಳಿತ ಮಂಡಳಿಯ ಸಹಕಾರ ಸದಾ ಹೀಗೆ ಇರಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ವಕೀಲ ಸಂಘದ ಕಾರ್ಯದರ್ಶಿ ಅನಿಲ್ ಕುಮಾರ್‌, ಉಪಾಧ್ಯಕ್ಷರಾದ ಪ್ರದೀಪ್ ವಕೀಲರಾದ ವಿಶ್ವನಾಥ್, ಜಗದೀಶ್, ಅಶ್ವಥ್, ನಟರಾಜ್ ಇನ್ನು ಮುಂತಾದವರು ಹಾಜರಿದ್ದರು.