ಮಡಿಕೇರಿ: ರೋಟರಿ ಸೇರಿದಂತೆ ಯಾವುದೇ ಸಾಮಾಜಿಕ ಸೇವಾ ಸಂಸ್ಥೆಗಳ ಭದ್ರ ಬುನಾದಿಯೇ ಆ ಸಂಸ್ಥೆಯ ಉತ್ಸಾಹಿ ಸದಸ್ಯರಾಗಿದ್ದು, ಈ ನಿಟ್ಟಿನಲ್ಲಿ ಸಮಾನಮನಸ್ಕ, ಸಮಾಜಮುಖಿ ಸದಸ್ಯರ ಸೇರ್ಪಡೆ ಅತ್ಯಗತ್ಯ ಎಂದು ಬೆಂಗಳೂರಿನ ರೋಟರಿ ಜಿಲ್ಲೆ 3191 ರ ಮಾಜಿ ಸಹಾಯಕ ಗವರ್ನರ್ ಪ್ರಕಾಶ್ ಬೆಳವಾಡಿ ಅಭಿಪ್ರಾಯಪಟ್ಟಿದ್ದಾರೆ.ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿತ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನೂತನ ಅಧ್ಯಕ್ಷ ಪೂಳಕಂಡ ರಾಜೇಶ್ ಮತ್ತು ಕಾರ್ಯದರ್ಶಿ ಡಾ. ಜಿ.ಡಿ. ಚೇತನ್ ಮತ್ತು ಆಡಳಿತ ಮಂಡಳಿ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.ರೋಟರಿ ವಲಯ 6 ರ ಸಹಾಯಕ ಗವರ್ನರ್ ಎಚ್.ಎಸ್. ವಸಂತ್ ಕುಮಾರ್ ಮಿಸ್ಟಿ ಹಿಲ್ಸ್ ನ ವಾತಾ೯ಸಂಚಿಕೆ ರೋಟೋ ಮಿಸ್ಟ್ ಲೋಕಾರ್ಪಣೆಗೊಳಿಸಿ ಮಾತನಾಡಿ, ರೋಟರಿ ಜಿಲ್ಲೆ 3181 ರಲ್ಲಿ ನಮ್ಮ ಹಬ್ಬ ನಮ್ಮ ಸೇವೆ ಎಂಬ ವಿನೂತನ ಯೋಜನೆ ಈ ವರ್ಷದಿಂದ ಜಾರಿಗೊಳಿಸಲಾಗಿದ್ದು, ಉತ್ಸವಗಳಲ್ಲಿ ರೋಟರಿಯು ಕೂಡ ವಿಭಿನ್ನ ರೀತಿಯ ಸೇವಾ ಕಾಯ೯ಗಳನ್ನು ಹಮ್ಮಿಕೊಳ್ಳಲಿದೆ ಎಂದರು.
ರೋಟರಿ ವಲಯ ಸೇನಾನಿ ಪೊನ್ನಚ್ಚನ ಮಧುಸೂದನ್ ಮಾತನಾಡಿ, ರೋಟರಿಗೆ ಹೊಸ ಸದಸ್ಯರ ಸೇರ್ಪಡೆ ನಿಟ್ಟಿನಲ್ಲಿ ಪ್ರತೀ ಕ್ಲಬ್ ಗಳೂ ಗಮನ ನೀಡಬೇಕೆಂದರು.ನೂತನ ಅಧ್ಯಕ್ಷ ಪಿ.ಆರ್.ರಾಜೇಶ್ ಮಾತನಾಡಿ, ಅಗತ್ಯ ಇರುವವರಿಗೆ ನೆರವು ನೀಡಲು ಮಿಸ್ಟಿ ಹಿಲ್ಸ್ ಬದ್ಧ ಎಂದರು.ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಜಿಲ್ಲಾ ಯೋಜನಾ ನಿರ್ದೇಶಕ ಅಂಕಾಚಾರಿ ಅವರನ್ನು ಗೌರವಿಸಲಾಯಿತು. ರೋಟರಿ ಮಿಸ್ಟಿ ಹಿಲ್ಸ್ ನೂತನ ಕಾರ್ಯದರ್ಶಿ ಡಾ. ಚೇತನ್ ಜಿ.ಡಿ. ವಂದಿಸಿದರು. ನಿರ್ಗಮಿತ ಅಧ್ಯಕ್ಷ ರತ್ನಾಕರ್ ರೈ, ನಿರ್ಗಮಿತ ಕಾರ್ಯದರ್ಶಿ ಕ್ಯಾರಿ ಕಾರ್ಯಪ್ಪ ಇದ್ದರು.ಮಿಸ್ಟಿ ಹಿಲ್ಸ್ ನಿರ್ದೇಶಕ ಬಿ.ಜಿ. ಅನಂತಶಯನ, ಡಾ.ಚೆರಿಯಮನೆ ಪ್ರಶಾಂತ್, ಅನಿಲ್ ಎಚ್.ಟಿ, ಜಿ.ಆರ್.ರವಿಶಂಕರ್, ಅನಿತಾ ಪೂವಯ್ಯ, ಗಾನಾ ಪ್ರಶಾಂತ್, ಶ್ರೀಹರಿರಾವ್, ಟಿ.ಕೆ.ಸುಧೀರ್, ದೀಪಾರಶ್ಮಿ, ಕಟ್ಟೆಮನೆ ಸೋನಜಿತ್, ನಿಶಾಂತ್ ಬೆಳ್ಯಪ್ಪ, ಸ್ನೇಹಿತ್, ಕಾಯ೯ಕ್ರಮ ನಿರ್ವಹಿಸಿದರು.ಸೇವಾ ಸಂಸ್ಥೆ ಭದ್ರ ಬುನಾದಿ ಉತ್ಸಾಹಿ ಸದಸ್ಯರು: ಪ್ರಕಾಶ್ ಬೆಳವಾಡಿ
ರೋಟರಿ ಸೇರಿದಂತೆ ಯಾವುದೇ ಸಾಮಾಜಿಕ ಸೇವಾ ಸಂಸ್ಥೆಗಳ ಭದ್ರ ಬುನಾದಿಯೇ ಆ ಸಂಸ್ಥೆಯ ಉತ್ಸಾಹಿ ಸದಸ್ಯರಾಗಿದ್ದು, ಈ ನಿಟ್ಟಿನಲ್ಲಿ ಸಮಾನಮನಸ್ಕ, ಸಮಾಜಮುಖಿ ಸದಸ್ಯರ ಸೇರ್ಪಡೆ ಅತ್ಯಗತ್ಯ ಎಂದು ಬೆಂಗಳೂರಿನ ರೋಟರಿ ಜಿಲ್ಲೆ 3191 ರ ಮಾಜಿ ಸಹಾಯಕ ಗವರ್ನರ್ ಪ್ರಕಾಶ್ ಬೆಳವಾಡಿ ಅಭಿಪ್ರಾಯಪಟ್ಟಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.