ಕನ್ನಡಪ್ರಭ ವಾರ್ತೆ ಶಿಕಾರಿಪುರ
ಅಂತರ ರಾಷ್ಟ್ರೀಯ ಲಯನ್ಸ್ ಕ್ಲಬ್ ಸೇವಾ ಕಾರ್ಯಕ್ಕೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ಸಾಮಾಜಿಕ ಸೇವಾ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಕ್ಲಬ್ ಮೂಲ ಉದ್ದೇಶಕ್ಕೆ ಪೂರಕವಾಗಿ ನೂತನ ಪದಾಧಿಕಾರಿಗಳು ಸೇವಾ ಕಾರ್ಯದಲ್ಲಿ ಹೊಸ ಮೈಲುಗಲ್ಲು ಮೂಲಕ ಎಲ್ಲ ಕ್ಲಬ್‌ಗೆ ಮಾದರಿಯಾಗುವ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಲಯನ್ಸ್ ಕ್ಲಬ್ ಪೂರ್ವ ಜಿಲ್ಲಾ ಗವರ್ನರ್ ಪಿಎಂಜೆಎಫ್ ಲ.ಸುರೇಶ್ ಪ್ರಭು ತಿಳಿಸಿದರು.ಪಟ್ಟಣದ ಬನಸಿರಿ ಲಯನ್ಸ್ ವಿದ್ಯಾ ಸಂಸ್ಥೆ ಆವರಣದಲ್ಲಿ ಪ್ರತಿಷ್ಠಿತ ಎಂ.ಜೆ.ಎಫ್. ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ವತಿಯಿಂದ 2026–27ನೇ ಸಾಲಿನ 54ನೇ ನೂತನ ಪದಾಧಿಕಾರಿಗಳ ಪದಗ್ರಹಣ ಅನುಸ್ಥಾಪನಾ ಅಧಿಕಾರಿಯಾಗಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಅವರು ಮಾತನಾಡಿದರು.
ಸೇವಾ ಕಾರ್ಯದಲ್ಲಿ ಲಯನ್ಸ್ ಕ್ಲಬ್ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಲಯನಿಸಂ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಸಮಾಜ ಸೇವೆಗೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಲಯನ್ಸ್ ಸಂಸ್ಥೆ ಕೊಡುಗೆ ಬಹು ಮಹತ್ವದ್ದಾಗಿದೆ ಎಂದು ತಿಳಿಸಿದರು.ಸಮಾಜ ಸೇವೆ ಮೂಲಕ ನಾಯಕತ್ವ ಗುಣವನ್ನು ಕ್ಲಬ್ ಮೂಲಕ ಅಳವಡಿಸಿಕೊಳ್ಳುವ ಸದಾವಕಾಶವಿದೆ. ಸದೃಢ ಸಮಾಜ ನಿರ್ಮಾಣದಲ್ಲಿ ಬಹು ಮಹತ್ವದ ಪಾತ್ರ ವಹಿಸುವ ಯುವ ಪೀಳಿಗೆಯನ್ನು ಕೇಂದ್ರೀಕರಿಸಿಕೊಂಡು ಕಾರ್ಯನಿರ್ವಹಿಸುವ ಕ್ಲಬ್ ಸೇವಾ ಕಾರ್ಯ ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ತಲುಪುವ ಕಡೆ ಹೆಚ್ಚಿನ ಗಮನಹರಿಸಬೇಕಾಗಿದೆ. ಪದಾಧಿಕಾರಿಗಳ ನೂತನ ತಂಡಕ್ಕೆ ಶುಭ ಹಾರೈಸಿ, ಸೇವಾ ಕಾರ್ಯಗಳಲ್ಲಿ ಹೆಚ್ಚು ಕ್ರಿಯಾಶೀಲರಾಗುವಂತೆ ಸಲಹೆ ನೀಡಿದರು.
ನೂತನ ಅಧ್ಯಕ್ಷ ಎಂ.ಜೆ.ಎಫ್.ಲ. ಮಹೇಶ್ ಚಂದ್ರ ಪ್ರಸಾದ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಯುವಜನ ಸಬಲೀಕರಣ ಹಾಗೂ ಸಮಾಜದ ಅಗತ್ಯವಿರುವ ವರ್ಗಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿ, ಎಲ್ಲ ಸದಸ್ಯರ ಸಹಕಾರದೊಂದಿಗೆ ಅರ್ಥಪೂರ್ಣ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಕ್ಲಬ್‌ನ ಪ್ರತಿಯೊಬ್ಬ ಸದಸ್ಯರ ಸಹಕಾರದಿಂದ ಉತ್ತಮ ಸೇವಾ ವರ್ಷವನ್ನು ರೂಪಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಸೇವಾ ಚಟುವಟಿಕೆಗಳ ಅಂಗವಾಗಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಛತ್ರಿ ಹಾಗೂ ಬೈಸಿಕಲ್‌ಗಳನ್ನು ವಿತರಿಸಲಾಯಿತು. ದಾಸೋಹ ಸೇವೆಗಾಗಿ ಸ್ಟೀಲ್ ಕಂಟೈನರ್‌ಗಳನ್ನು ದಾನವಾಗಿ ನೀಡಲಾಯಿತು. ವಿದ್ಯಾರ್ಥಿಗಳ ಓದುವ ಹವ್ಯಾಸವನ್ನು ಹೆಚ್ಚಿಸುವ ಸದುದ್ದೇಶದಿಂದ ಶಾಲೆಯ ಗ್ರಂಥಾಲಯಕ್ಕೆ ಉಪಯುಕ್ತ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.
ಲಯನ್ಸ್ ಜಿಲ್ಲೆ 317 H ಪ್ರಥಮ ಉಪ ಜಿಲ್ಲಾ ಗವರ್ನರ್ ಡಾ. ಎಸ್.ಐ. ಬಿರಾದರ್, ದ್ವಿತೀಯ ಉಪ ಜಿಲ್ಲಾ ಗವರ್ನರ್ ಅಶ್ವಿನಿ ಕುಮಾರ್, ವಲಯ ಅಧ್ಯಕ್ಷ ಲ.ರಾಘವೇಂದ್ರ ಸಾನು ಹಾಗೂ ಲಯನ್ಸ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಲ.ಶಿವಾನಂದ ಶಾಸ್ತ್ರಿ ಸಹಿತ ಗಣ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ನೂತನ ಆಡಳಿತ ಮಂಡಳಿಗೆ ಶುಭ ಹಾರೈಸಿದರು. * ಅಧಿಕಾರ ಸ್ವೀಕಾರನೂತನ ಅಧ್ಯಕ್ಷರಾಗಿ ಲ.ಮಹೇಶ್ ಚಂದ್ ಪ್ರಸಾದ್, ಕಾರ್ಯದರ್ಶಿಯಾಗಿ ಲ.ಸಂಜಿತ್ ಎಚ್.ಬಿ. ಖಜಾಂಚಿಯಾಗಿ ಲ.ರಾಘವೇಂದ್ರ ಪಿ.ರಾಯ್ಕರ್ ನಿರ್ದೇಶಕರಾಗಿ ಲ.ಎಸ್.ಶಿವಾನಂದ ಶಾಸ್ತ್ರಿ,ಲ.ಡಿ.ಕೆ.ಮಲ್ಲಿಕಾರ್ಜುನ್, ಲ.ಕರಿಬಸಪ್ಪ,ಲ.ವಿಶ್ವನಾಥ ಶಾಸ್ತ್ರಿ,ಲ.ಪಾಂಡುರಂಗ ಜಿ.ಶೇಟ್,ಲ.ಮೋಹನ್ ಪಿ.ಸಾನು,ಲ.ಎಂ.ಗಣೇಶ್ ರಾವ್, ಲ.ಎಚ್.ಎಸ್.ಗಜೇಂದ್ರ,ಲ.ವೀರಣ್ಣ ಶಾಸ್ತ್ರಿ,ಲ.ಮಮತಾ ಬಾಲಚಂದ್ರ,ಲ.ಸಪ್ನಾ ರಾಘವೇಂದ್ರ ಸಾನು,ಲ.ಶಿಲ್ಪಾ ಅನಿಲ್ ಪ್ರಸಾದ್ ಹಾಗೂ ಲ.ಪೂಜಾ ಎಸ್.ಶಾಸ್ತ್ರಿ ಅಧಿಕಾರ ವಹಿಸಿಕೊಂಡರು.