ಹೊಸಕೋಟೆ: ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ಆರೋಗ್ಯ ಕಾಳಜಿ ವಹಿಸಬೇಕು ಎಂದು ಬಮೂಲ್ ನಿರ್ದೇಶಕ ಬಿವಿ.ಸತೀಶ್ ಗೌಡ ತಿಳಿಸಿದರು.
ತಾಲೂಕಿನ ಚಿಕ್ಕಹುಲ್ಲೂರು ಬಳಿ ಬಮೂಲ್ ಹೊಸಕೋಟೆ ಶಿಬಿರ ಕಚೇರಿ ಆವರಣದಲ್ಲಿ ಸಹಕಾರ ಸಪ್ತಾಹದ ಅಂಗವಾಗಿ ಬೆಂಗಳೂರು ಗ್ರಾಮಾಂತರ ಸಹಕಾರ ಯೂನಿಯನ್ ಹಾಗೂ ಎಂವಿಜೆ ಆಸ್ಪತ್ರೆ ಸಹಯೋಗದಲ್ಲು ತಾಲೂಕು ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿ ಹಾಗೂ ಹೊಸಕೋಟೆ ಡೇರಿ ಸಿಬ್ಬಂದಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.ಡಾ.ಪ್ರಮೋದ್ ಮಾತನಾಡಿ, ಪ್ರತಿಯೊಬ್ಬರು ನಿಯಮಿತ ಆರೋಗ್ಯ ತಪಾಸಣೆ, ಸಮತೋಲಿತ ಆಹಾರ ಸೇವನೆ ಹಾಗೂ ದೈನಂದಿನ ವ್ಯಾಯಾಮದ ಮೂಲಕ ಅನೇಕ ರೋಗಗಳನ್ನು ತಡೆಗಟ್ಟಬಹುದು ಎಂದು ಹೇಳಿದರು. ಶಿಬಿರದಲ್ಲಿ ಸಿಬ್ಬಂದಿಯ ಸಾಮಾನ್ಯ ಆರೋಗ್ಯ ತಪಾಸಣೆ, ರಕ್ತದೊತ್ತಡ, ಸಕ್ಕರೆ ಪ್ರಮಾಣ ಸೇರಿದಂತೆ ವಿವಿಧ ಆರೋಗ್ಯ ಪರೀಕ್ಷೆಗಳನ್ನು ನಡೆಸಲಾಯಿತು.
ಬೆಂಗಳೂರು ಗ್ರಾಮಾಂತರ ಸಹಕಾರ ಒಕ್ಕೂಟದ ನಿರ್ದೇಶಕ ಮಾಕನಹಳ್ಳಿ ರಮೇಶ್, ಡೇರಿ ವ್ಯವಸ್ಥಾಪಕ ಮಧುಸೂದನ್, ಶಿಬಿರ ಕಚೇರಿ ಮುಖ್ಯಸ್ಥ ವಿನಯ್ ಕುಮಾರ್, ಪಶು ವೈದ್ಯಕೀಯ ಮುಖ್ಯಸ್ಥ ಡಾ.ಸಂತೋಷ್, ವಿಸ್ತರಣಾಧಿಕಾರಿಗಳಾದ ರಮೇಶ್, ಆನಂದ್, ಪವಿತ್ರ ಹಾಗೂ ವಿದ್ಯಾಶ್ರೀ, ತಾಲೂಕು ಡೇರಿ ನೌಕರರ ಸಂಘದ ಅಧ್ಯಕ್ಷ ವಿಜಯ್ ಕುಮಾರ್ ತಾಲೂಕು ವ್ಯಾಪ್ತಿಯ ಡೇರಿಗಳ ಸಿಬ್ಬಂದಿ ಹಾಗೂ ಸಿಇಒಗಳು ಉಪಸ್ಥಿತರಿದ್ದರು.ಫೋಟೋ: 3 ಹೆಚ್‌ಎಸ್‌ಕೆ 3
ಹೊಸಕೋಟೆ ತಾಲುಕಿನ ಚಿಕ್ಕಹುಲ್ಲೂರು ಬಳಿ ಇರುವ ಬಮೂಲ್ ಶಿಬಿರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಬಮೂಲ್ ನಿರ್ದೇಶಕ ಬಿ.ವಿ.ಸತೀಶ್‌ಗೌಡ ಉದ್ಘಾಟಿಸಿದರು.