ಸಾರಾಂಶ
ಸಾಹಿತ್ಯದ ಒಲವು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಅತ್ಯಂತ ಸಹಕಾರಿಯಾಗಿದೆ. ಕನ್ನಡ ವಚನ ಚಳವಳಿಯಲ್ಲಿ ಬಸವಣ್ಣ ಅವರಂಥ ಅನೇಕ ಮಹಾನೀಯರು ಸಮನತೆಗಾಗಿ ಹೋರಾಟ ನಡೆಸಿ, ಅನೇಕ ಬದಲಾವಣೆ ಮೂಲಕ ಉತ್ತಮ ಸಮಾಜ ಕಟ್ಟಲು ಶ್ರಮಿಸಿದ್ದಾರೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.
- ಕೃತಿ ಲೋಕರ್ಪಣೆ, ಧ್ವನಿಸುರುಳಿ, ವಿಶೇಷ ಸಂಚಿಕೆ ಬಿಡುಗಡೆ
- - - ಕನ್ನಡಪ್ರಭ ವಾರ್ತೆ ಜಗಳೂರುಸಾಹಿತ್ಯದ ಒಲವು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಅತ್ಯಂತ ಸಹಕಾರಿಯಾಗಿದೆ. ಕನ್ನಡ ವಚನ ಚಳವಳಿಯಲ್ಲಿ ಬಸವಣ್ಣ ಅವರಂಥ ಅನೇಕ ಮಹಾನೀಯರು ಸಮನತೆಗಾಗಿ ಹೋರಾಟ ನಡೆಸಿ, ಅನೇಕ ಬದಲಾವಣೆ ಮೂಲಕ ಉತ್ತಮ ಸಮಾಜ ಕಟ್ಟಲು ಶ್ರಮಿಸಿದ್ದಾರೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರದೆಸೆ ನ್ಯೂಸ್ ಮೀಡಿಯಾ ಹಾಗೂ ಜನಶಕ್ತಿ ಸಾಂಸ್ಕೃತಿಕ ವೇದಿಕೆ ಮತ್ತು ಬಯಲುಸಿರಿ ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆ ಆಶ್ರಯದಲ್ಲಿ ವಿಶ್ವ ಮಹಿಳಾ ದಿನ ಅಂಗವಾಗಿ ರಾಜ್ಯಮಟ್ಟದ ಕವಿಗಳಿಂದ ಮಹಿಳಾ ಸಾಧಕರ ಕುರಿತು ದಾಖಲೆ ಬರಹ, ಬಸವರಾಜ ರಚಿಸಿರುವ ಸಿರಿಸಂಪಿಗೆ ಕೃತಿ ಲೋಕರ್ಪಣೆ ಮತ್ತು ಕನ್ನಡಮ್ಮ ಬರುವಳು ಧ್ವನಿಸುರುಳಿ ಮತ್ತು ಸಾಹಿತಿ ಪತ್ರಕರ್ತ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ರಚಿಸಿರುವ ಜಗಳೂರು ಜಗದಗಲ ಎನ್ನುವ ಧ್ವನಿಸುರುಳಿ, ಶುಕ್ರದೆಸೆ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಕನ್ನಡ ನಾಡು-ನುಡಿ ಅತ್ಯಂತ ಸಂಪತ್ಭರಿತ ನಾಡಿನಲ್ಲಿ ಅನೇಕ ಕವಿಗಳು ದಾರ್ಶನಿಕರು ತಮ್ಮದೇ ಆದ ವಿಶೇಷ ಛಾಪು ಮೂಡಿಸಿ, ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ್ದಾರೆ. ಆ ನಿಟ್ಡಿನಲ್ಲಿ ಬಯಲು ಸಿರಿಸಾಹಿತ್ಯ ವೇದಿಕೆ ಜಾತಿ ಮೀರಿದ ಭೇದವಿಲ್ಲದ ಸಂಘಟನೆಗಳು ಸಾಹಿತ್ಯ ಆಸಕ್ತರಿಗೆ ಸೂಕ್ತ ವೇದಿಕೆಯಾಗಿ ನಿರಂತರವಾಗಿ ನಡೆಯಲಿ ಎಂದರು.
ಹಿರಿಯ ಸಾಹಿತಿ ಎನ್.ಟಿ. ಎರ್ರಿಸ್ವಾಮಿ ಮಾತನಾಡಿ. ಕಾವ್ಯ ಹುಟ್ಟುವುದು ನೋವಿನ ಒಡಲಲ್ಲಿ. ಯಾರು ನೋವುಂಡು ಬೆಳೆದಿರುತ್ತಾರೋ ಅವರಲ್ಲಿ ಸಾಹಿತ್ಯಾಸಕ್ತಿ ಬೆಳೆಯುತ್ತದೆ. ಬಸವರಾಜ ಮತ್ತು ವ್ಯಾಸಗೊಂಡನಹಳ್ಳಿ ರಾಜಪ್ಪ ಕ್ರಿಯಾಶೀಲ ವ್ಯಕ್ತಿತ್ವದಿಂದ ಇಂತಹ ಕಾರ್ಯಗಳು ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದರು.ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಹಾಗೂ ಜ್ಘಾನ ತರಂಗಿಣಿ ವಿದ್ಯಾ ಸಂಸ್ಥೆ ಸ್ಥಾಪಕ ಪಿ.ಎಸ್. ಅರವಿಂದನ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಎಲ್. ತಿಪ್ಪೇಸ್ವಾಮಿ ಮಾತನಾಡಿದರು.
ಸಿರಿ ಸಂಪಿಗೆ ಕೃತಿಕಾರ ಪಿ.ಎಚ್. ಬಸವರಾಜ, ಭದ್ರಾ ಮೇಲ್ದಂಡೆ ಹೋರಾಟ ಸಮಿತಿ ಸದಸ್ಯ, ವಕೀಲ ಆರ್.ಓಬಳೇಶ್, ಕಾಂಗ್ರೆಸ್ ಎಸ್‌ಸಿ ಅಧ್ಯಕ್ಷ ಬಿ.ಮಹೇಶ್ವರಪ್ಪ, ದಲಿತ ಮುಖಂಡ ಜಿ.ಎಚ್. ಶಂಭುಲಿಂಗಪ್ಪ, ಕಸಾಪ ಅಧ್ಯಕ್ಷೆ ಸುಜಾತಮ್ಮ ರಾಜು, ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಜಿ.ಎಸ್. ಬಸವರಾಜ, ಕಾರ್ಗಿಲ್ ಯೋಧ ಚನ್ನಪ್ಪ ಬಳಗಾರ, ಪ್ರಗತಿಪರ ಮುಖಂಡ ಆರ್. ಸತ್ಯಮೂರ್ತಿ ಗೌರಿಪುರ, ವಕೀಲರಾದ ಷಣ್ಮುಖಪ್ಪ, ಜನಪದ ಗಾಯಕಿ ರಾಜ್ಯ ಪ್ರಶಸ್ತಿ ಪುರಸ್ಕೃತೆ ಕಾಟಮ್ಮ, ಜನಪದ ಗಾಯಕಿ ಭೀಮಜ್ಜಿ. ಪ್ರಜಾ ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷೆ ಚೌಡಮ್ಮ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸತೀಶ್, ಬಯಲು ಸಿರಿ ವೇದಿಕೆ ಶಾಂತಕುಮಾರ, ನಿರೂಪಕಿ ಲಕ್ಷ್ಮೀ, ಇಂದ್ರಮ್ಮ ಚೈತ್ರಾ, ಕವಿಗಳು, ವಿವಿಧ ಕೇಂದ್ರಗಳಿಂದ ಆಗಮಿಸಿ ಕವಿ ದಾಖಲೆ ಬರಹದಲ್ಲಿ ಪಾಲ್ಗೊಂಡಿದ್ದರು. ಕವಿಗಳು ಹಾಜರಿದ್ದರು.- - - -24 ಜೆ.ಜಿ.ಎಲ್.1:
ಜಗಳೂರು ಜಗದಗಲ ಧ್ವನಿಸುರುಳಿ, ಶುಕ್ರದೆಸೆ ವಿಶೇಷ ಸಂಚಿಕೆಯನ್ನು ಶಾಸಕ ಬಿ.ದೇವೇಂದ್ರಪ್ಪ ಬಿಡುಗಡೆಗೊಳಿಸಿದರು.