ಸಾರಾಂಶ
ಪ್ರತಿದಿನ ಧಾರ್ಮಿಕ ಕಾರ್ಯಕ್ರಮ, ಭಕ್ತರ ಸೇವಾ ರೂಪದ ಜೋಡಿ ಚಂಡಿಕಾಯಾಗ, ಶ್ರೀ ದುರ್ಗಾ ನಮಸ್ಕಾರ ಪೂಜೆ, ಸಹಸ್ರನಾಮ ಅರ್ಚನೆ, ರಂಗಪೂಜೆ, ದೀಪಾರಾಧನೆ ತುಲಾಭಾರ ಸೇವೆ, ವಿದ್ಯಾರಂಭಗಳು ನೆರವೇರಲಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ದೊಡ್ಡಣ್ಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಸೆ.22ರಿಂದ ಅ.2ರ ವರೆಗೆ ಶರನ್ನವರಾತ್ರಿ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಸಭಾ ಕಾರ್ಯಕ್ರಮಗಳು ಹಾಗೂ ನಿರಂತರ ಅನ್ನಸಂತರ್ಪಣೆಯೊಂದಿಗೆ ಬಹು ವಿಜೃಂಭಣೆಯಿಂದ ನೆರವೇರಲಿದೆ.ಪ್ರತಿದಿನ ಧಾರ್ಮಿಕ ಕಾರ್ಯಕ್ರಮ, ಭಕ್ತರ ಸೇವಾ ರೂಪದ ಜೋಡಿ ಚಂಡಿಕಾಯಾಗ, ಶ್ರೀ ದುರ್ಗಾ ನಮಸ್ಕಾರ ಪೂಜೆ, ಸಹಸ್ರನಾಮ ಅರ್ಚನೆ, ರಂಗಪೂಜೆ, ದೀಪಾರಾಧನೆ ತುಲಾಭಾರ ಸೇವೆ, ವಿದ್ಯಾರಂಭಗಳು ನೆರವೇರಲಿದೆ.
ಸೆ.24ರಂದು ಶ್ರೀ ಕುಬೇರ ಚಿತ್ರಲೇಖ ಸಹಿತ ಮಹಾಲಕ್ಷ್ಮೀ ಸನ್ನಿಧಾನದಲ್ಲಿ ಲಕ್ಷ್ಮೀ ಸಹಸ್ರನಾಮ ಮಹಾಯಾಗ, 27ರಂದು ಲಲಿತ ಪಂಚಮಿಯ ಪರ್ವಕಾಲದಲ್ಲಿ ಶ್ರೀ ಲಲಿತಾ ಸಹಸ್ರ ಕದಳಿ ಯಾಗ, ಅ.2ರಂದು ವಿಜಯ ದಶಮಿಯ ಪರ್ವಕಾಲದಲ್ಲಿ ಕ್ಷೇತ್ರದ ವತಿಯಿಂದ ಸಾಮೂಹಿಕವಾಗಿ ತ್ರಿಶಕ್ತಿ ಮಹಾಯಾಗಗಳು, ಸಂಜೆ ಬಲಿ ಉತ್ಸವ ಸಹಿತ ಆರಾಧನಾ ರಂಗ ಪೂಜಾ ಮಹೋತ್ಸವ, ಮಹಾ ಸಂಪ್ರೋಕ್ಷಣೆ, ಮಹಾ ಮಂತ್ರಾಕ್ಷತೆ ಸಂಪನ್ನಗೊಳ್ಳಲಿದೆ.ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಗಾನ ನಾಟ್ಯ ನಾದ ಪ್ರಿಯರಾದ ಶ್ರೀ ದುರ್ಗಾ ಆದಿಶಕ್ತಿ ದೇವಿಯ ಅಭಿಮುಖವಾಗಿ ನಾಟ್ಯ ಸೇವೆಗಳು, ಸಂಗೀತ ಸೇವೆಗಳು, ನಾದ ಸೇವೆಗಳು ವಿವಿಧ ಕಲಾವಿದರಿಂದ ಸಮರ್ಪಿತವಾಗಲಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದ್ದಾರೆ.