ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಮುಂಬರುವ ಲೋಕಸಭೆ ಚುನಾವಣೆಗೆ ಹಾಲಿ ಸಂಸದ ರಮೇಶ ಜಿಗಜಿಣಗಿ ಅವರಿಗೇ ಟಿಕೆಟ್ ನೀಡುವಂತೆ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಶೀಲವಂತ ಉಮರಾಣಿ ಮನವಿ ಮಾಡಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಿಗಜಿಣಗಿ ಜಿಲ್ಲೆಯ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ತಂದಿದ್ದಾರೆ. ಅವರು ಪ್ರಚಾರ ಪ್ರಿಯರಲ್ಲದ್ದರಿಂದ ಅವರು ಮಾಡಿರುವ ಕೆಲಸಗಳು ಪ್ರಚಾರ ಪಡೆದಿಲ್ಲ. ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಇಂತಹ ನಾಯಕರ ಅಗತ್ಯ ಇದೆ. ಆದ್ದರಿಂದ 2024ರ ಚುನಾವಣೆಯಲ್ಲಿ ಮತ್ತೇ ಇವರನ್ನೇ ಗೆಲ್ಲಿಸೋಣ. ಆದ್ದರಿಂದ ವರಿಷ್ಠರು ಜಿಗಜಿಣಗಿ ಅವರಿಗೆ ಟಿಕೆಟ್ ನೀಡಬೇಕು ಎಂದು ನಾನು ಮಾಡುವೆ ಎಂದರು.
ಜಿಲ್ಲೆಗೆ ಸಂಸದ ರಮೇಶ ಜಿಗಜಿಣಗಿ ಅವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸುವವರು, 9 ವರ್ಷದಲ್ಲಿ 7 ರಾಷ್ಟ್ರೀಯ ಹೆದ್ದಾರಿ ವಿಜಯಪುರಕ್ಕೆ, ರೈಲ್ವೆ ಓವರ್ ಬ್ರಿಡ್ಜ್, ವಿದ್ಯುತ್ ಚಾಲಿತ ರೈಲು, ಬ್ರಾಡ್ಜಗೇಜ್, ಕೆರೆ ತುಂಬುವ ಯೋಜನೆ, ನೀರಾವರಿ, ವಿದ್ಯುತ್ ಸಂಗ್ರಹ ಕೇಂದ್ರ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ನೋಡಿ ತಿಳಿದುಕೊಳ್ಳಬೇಕು ಎಂದು ಹೇಳಿದರು.ಅಭಿವೃದ್ಧಿ ಮಾಡುವ ಹಂಬಲ ಸಂಸದರಲ್ಲಿ ಇನ್ನೂ ಸಾಕಷ್ಟು ಇದೆ. ಜಿಲ್ಲೆಯ ಅಭಿವೃದ್ಧಿ ಹಿತದೃಷ್ಠಿಯಿಂದ ಅವರನ್ನು ಮತ್ತೇ ಗೆಲ್ಲಿಸಿ ಪ್ರಧಾನಿ ಮೋದಿ ಅವರ ಕೈ ಬಲಪಡಿಸೋಣ ಎಂದು ಹೇಳಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ಟಿಕೆಟ್ ರಾಷ್ಟ್ರೀಯ ನಾಯಕರು ನೀಡಬೇಕು. ಸಂಸದ ಜಿಗಜಿಣಗಿ ಅವರು ಸಜ್ಜನ ರಾಜಕಾರಣಿಯಾಗಿ, ಜಾತ್ಯಾತೀತ ಮನೋಭಾವ, ಗುರುಹಿರಿಯರ ಮೇಲೆ ಪ್ರೀತಿ, ಹಿರಿಯರ ಜೊತೆ ಹಿರಿಯರಾಗಿ,ಕಿ ರಿಯರ ಜೊತೆ ಕಿರಿಯರಾಗಿ ಬೆರೆತು, ಪಕ್ಷ ಸಂಘಟನೆಯ ಜೊತೆಗೆ ಸರ್ವರ ಹೃದಯದಲ್ಲಿ ಮನೆ ಮಾತಾಗಿದ್ದಾರೆ ಎಂದರು.
ಅಕ್ಕಲಕೋಟ - ಇಂಡಿ - ವಿಜಯಪುರ ಮಾರ್ಗವಾಗಿ ಸಂಕೇಶ್ವರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ ಐತಿಹಾಸಿಕ ಕಾಮಗಾರಿ ಆಗಿದೆ. ಈ ಹೆದ್ದಾರಿ ಪೂರ್ಣಗೊಂಡರೆ ಇಂಡಿ ಅಭಿವೃದ್ಧಿ ಜೊತೆಗೆ ಇಂಡಿ ಜಿಲ್ಲೆಯಾಗಲು ಮೆರಗು ಬರುತ್ತದೆ. ಸೌಮ್ಯ ಸ್ವಭಾವದ ರಾಜಕಾರಣಿಯಾಗಿರುವ ಸಂಸದ ರಮೇಶ ಜಿಗಜಿಣಗಿ, ಯಾವುದೇ ಜಾತಿಯನ್ನು ಎತ್ತಿಕಟ್ಟಿ ರಾಜಕಾರಣ ಮಾಡಿಲ್ಲ. ಸ್ವಜಾತಿಯವರನ್ನೇ ಬದಿಗಿಟ್ಟು ಅಭಿವೃದ್ಧಿಪರ ಸರ್ವರ ಪ್ರೀತಿಯ ಬೆಸುಗೆಯಾಗಿ ರಾಜಕಾರಣ ಮಾಡುತ್ತಿದ್ದಾರೆ. ಶೀಘ್ರದಲ್ಲಿಯೇ ಅಕ್ಕಲಕೋಟ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಭೂಮಿಪೂಜೆ ಮಾಡುವುದರೊಂದಿಗೆ ಶಿರಾಡೋಣ-ಲಿಂಗಸೂರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.