- ಜಗಳೂರು ತಾಲೂಕು ಆಡಳಿತ ನೇತೃತ್ವದ ಕಾರ್ಯಕ್ರಮ - - -

ಜಗಳೂರು: ಜಗದ್ಗುರು ಶ್ರೀ ರೇಣುಕಾಚಾರ್ಯರು, ಪಂಚಾಚಾರ್ಯರನ್ನು ನೆನಪಿಸಿಕೊಂಡರೆ ನಮ್ಮಲ್ಲಿರುವ ಪಾಪಗಳು ನಾಶವಾಗುತ್ತವೆ. ಬದುಕು ನೆಮ್ಮದಿ ಕಾಣುತ್ತವೆ ಎಂದು ಬೇಡ ಜಂಗಮ ಸಮಾಜದ ತಾಲೂಕು ಅಧ್ಯಕ್ಷರಾದ ದೇವಿಕೆರೆ ಶಿವಕುಮಾರ ಸ್ವಾಮಿ ಅಭಿಪ್ರಾಯಪಟ್ಟರು.

ತಾಲೂಕು ಆಡಳಿತ ಮತ್ತು ವೀರಶೈವ ಜಂಗಮ ಹಾಗೂ ಬೇಡ ಜಂಗಮ ಸಮಾಜದ ಆಶ್ರಯದಲ್ಲಿ ಭಾನುವಾರ ತಾಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಮಾನವ ಕುಲಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಸಾರಿದವರು ಶ್ರೀ ರೇಣುಕಾಚಾರ್ಯರು. ನಂತರದ ದಿನಗಳಲ್ಲಿ ಬಸವಣ್ಣನವರು ಇದನ್ನು ನಡೆಸಿಕೊಂಡು ಹೋಗಿದ್ದಾರೆ. ಸಮಾಜ ಹಾಗೂ ಸನಾತನ ಧರ್ಮ ಚೆನ್ನಾಗಿರಲಿ ಎಂಬ ಉದ್ದೇಶದಿಂದ ಜಯಂತಿ ಆಚರಿಸಲಾಗುತ್ತಿದೆ ಎಂದರು.

ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಮಾತನಾಡಿ, ಅಗಸ್ತ್ಯ ಮುನಿಗಳಿಗೆ ಶ್ರೀ ರೇಣುಕಾಚಾರ್ಯರು ಶಿವಾದ್ವೈತ ಸಿದ್ಧಾಂತವನ್ನು ಉಪದೇಶಿಸುತ್ತಾರೆ. ಅದನ್ನೇ ಸಿದ್ಧಾಂತ ಶಿಖಾಮಣಿ ಎಂದು ಕರೆಯಲಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ಎಸ್.ಪಿ. ರಾಜೇಶ್ ಮಾತನಾಡಿ, ಮಹಾನ್‌ ವ್ಯಕ್ತಿಗಳು, ದಾರ್ಶನಿಕರ ಜಯಂತ್ಯುತ್ಸವಗಳನ್ನು ಆಚರಣೆ ಮಾಡಬೇಕೆಂದು ಸರ್ಕಾರಗಳು ಹೇಳಿವೆ. ಆದ್ದರಿಂದಲೇ ಎಲ್ಲ ಧರ್ಮಗಳಲ್ಲಿ ಜಯಂತಿಗಳನ್ನು ಆಚರಿಸಲಾಗುತ್ತಿದೆ ಎಂದರು.


ಮಾಜಿ ಜಿಪಂ ಸದಸ್ಯ ಕೆ.ಪಿ. ಪಾಲಯ್ಯ ಮಾತನಾಡಿ, ಮನುಕುಲಕ್ಕೆ ರೇಣುಕಾಚಾರ್ಯರು ಸಾರಿದ ಸಂದೇಶಗಳು ನಮಗೆ ಮುಖ್ಯ. ಪೂರ್ವಜರು ನಡೆಸಿಕೊಂಡ ಸಂಪ್ರದಾಯಗಳನ್ನು ನಾವು ಪಾಲಿಸಬೇಕು. ಅವನ್ನು ಮುಂದಿನ ಪೀಳಿಗೆಗೆ ತಪ್ಪದೇ ತಿಳಿಸುವ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಡಾ. ಹಾಲಸ್ವಾಮಿ ಕಂಬಾಳೆಮಠ, ಎನ್.ಎಂ.ಕೆ. ಶಾಲೆ ಮುಖ್ಯಸ್ಥರಾದ ಲೋಕೇಶ್, ದೇವಿಕರೆ ರುದ್ರಯ್ಯ, ಜಯವೀರ ಸ್ವಾಮಿ, ನಂಜುಂಡ ಸ್ವಾಮಿ, ಪಂಚಾಕ್ಷರಯ್ಯ, ಪತ್ರಕರ್ತ ಕೆ.ಎಂ. ಜಗದೀಶ್, ವಿರೂಪಾಕ್ಷಯ್ಯ, ವೇದಮೂರ್ತಿ, ಚನ್ನವೀರ ಸ್ವಾಮಿ, ಸುರೇಶ ಯ್ಯ, ರುದ್ರಯ್ಯ, ಚಂದ್ರಯ್ಯ, ಕೋಮಲ ಸೇರಿದಂತೆ ಸಮಾಜದ ಮುಖಂಡರು ಇತರೆ ಸಮಾಜದ ಮುಖಂಡರು ಹಾಜರಿದ್ದರು.

- - -

-೦೧ಜೆ.ಎಲ್.ಆರ್.1ಅ:

ಜಗಳೂರು ತಾಲೂಕು ಆಡಳಿತ, ವೀರಶೈವ ಜಂಗಮ, ಬೇಡ ಜಂಗಮ ಸಮಾಜಗಳ ಆಶ್ರ ಯದಲ್ಲಿ ಭಾನುವಾರ ತಾಲೂಕು ಕಚೇರಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಆಚರಿಸಲಾಯಿತು.