ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿರುವುದು ಪ್ರಜಾಪ್ರಭುತ್ವದ, ಸಂವಿಧಾನದ ಮೇಲಿನ ದಾಳಿ ಆಗಿದೆ ಎಂದು ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನ್ಯಾಯಮೂರ್ತಿಗಳನ್ನು ಮೈ ಲಾರ್ಡ್ ಎನ್ನುತ್ತೇವೆ, ಲಾರ್ಡ್ ಎಂದರೆ ದೇವರು.ಆದರೆ, ಇಂದುನ್ಯಾಯ ದೇವರ ಮೇಲೆಯೇ ಹಲ್ಲೆ ನಡೆಯುತ್ತಿದೆ. ಇದಕ್ಕೆಯಾರು ಹೊಣೆ? ರಕ್ಷಣೆ ನೀಡಬೇಕಾದವರೇ ಕುಮ್ಮಕ್ಕು ನೀಡುತ್ಯಿದ್ದಾರೆಯೇ? ಎಂಬ ಅನುಮಾನ ಮೂಡುತ್ತಿದೆ. ಇದಕ್ಕೆಮೋದಿ ಸರ್ಕಾರವೇ ಉತ್ತರಿಸಬೇಕು.
ಬಿಜೆಪಿ, ಆರ್‌ಎಸ್‌ಎಸ್ ಕುಮ್ಮಕ್ಕಿನಿಂದ ದೇಶದಲ್ಲಿ ಅಭದ್ರತೆ ಹೆಚ್ಚಾಗಿದೆ. ಜಾತಿ, ಧರ್ಮಗಳ ನಡುವೆ ಕೋಮು ದ್ವೇಷ ಹೆಚ್ಚಾಗಿದೆ.ಇದಕ್ಕೆ ಸುಪ್ರೀಂ ಕೋರ್ಟ್‌ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲಿನ ದಾಳಿಮತ್ತೊಂದು ನಿದರ್ಶನವಾಗಿದೆ.ಹಿಂದೂಗಳ ಪರವಾಗಿದ್ದೇವೆ ಎಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಿಜೆಪಿ ಹಿಡಿದಿದೆ. ಆದರೆ, ವಾಸ್ತವದಲ್ಲಿ ಎನ್‍ಡಿಎ ಮೈತ್ರಿಕೂಟದ ಸರ್ಕಾರದಲ್ಲಿ ದಲಿತರಿಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದ ವರ್ಗಗಳ ಜನರ ಮೇಲೆ ದಾಳಿ, ದೌರ್ಜನ್ಯ, ದಬ್ಬಾಳಿಕೆ, ಕೊಲೆ ನಡೆಯುತ್ತಲೇ ಇವೆ. ಇದು ಬಿಜೆಪಿಗರ ಮನಸ್ಥಿತಿಗೆ ಉದಾಹರಣೆಯಷ್ಟೆ.
ದೇಶದಲ್ಲಿ ದಲಿತರಿಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದವರ್ಗಗಳಿಗೆ ರಕ್ಷಣೆ ಇಲ್ಲ. ಯಾವಾಗ, ಯಾರ ಮೇಲೆ ದಾಳಿ, ಹಲ್ಲೆ ನಡೆಯುತ್ತದೆಯೋ ಎಂಬ ಆತಂಕ ಕಾಡುತ್ತಿದೆ. ಮುಖ್ಯನ್ಯಾಯಮೂರ್ತಿ ಮೇಲೆ ದಾಳಿಯ ಪ್ರಕರಣ ದೇಶದಲ್ಲಿ ದಲಿತರಿಗೆ ರಕ್ಷಣೆ ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.ಕೂಡಲೇ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ದೇಶದಲ್ಲಿ ಸನಾತನಿಗಳನ್ನು, ಮನುವಾದಿಗಳನ್ನು, ಸಂಘಿಗಳನ್ನು ಹಿಮ್ಮೆಟ್ಟಿಸಬೇಕು. ದೇಶದ ಸಂವಿಧಾನ, ಪ್ರಜಾಪ್ರಭುತ್ವದ ವ್ಯವಸ್ಥೆ ಉಳಿಸಲು ಎಲ್ಲರೂ ಒಂದಾಗಬೇಕು ಎಂದು ಅವರು ಕರೆ ನೀಡಿದ್ದಾರೆ.
ದಾಳಿ ನಡೆದ ನಂತರವೂ ಶಾಂತಚಿತ್ತವನ್ನು ಕಾಪಾಡಿಕೊಂಡ ನ್ಯಾಯಮೂರ್ತಿ ಗವಾಯಿ ಅವರನಡೆ ಮೆಚ್ಚುವಂತದ್ದು. ಈ ಕೃತ್ಯವನ್ನು ಇಡೀ ದೇಶ ಖಂಡಿಸಬೇಕು. ಏಕೆಂದರೆ ಇದು ನ್ಯಾಯಮೂರ್ಯಿಗಳಮೇಲಿನ ದಾಳಿಯಲ್ಲ. ಸಂವಿಧಾನದ ಮೇಲಿನ ದಾಳಿ, ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಅವರು ತಿಳಿಸಿದ್ದಾರೆ.ಶೂ ಎಸೆದವನನ್ನು ಸಮರ್ಥಿಸುವವರು ಈ ದೇಶದಲ್ಲಿ ಇರುವುದೇ ದುರಂತ: ಎಂ.ಕೆ. ಸೋಮಶೇಖರ್
ಕನ್ನಡಪ್ರಭ ವಾರ್ತೆ ಮೈಸೂರುಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲಿನ ಶೂ ದಾಳಿ ಇಡೀ ದೇಶವೇ ತಲೆ ತಗ್ಗಿಸುವಂತಹ ಕೆಲಸ. ದೇಶದ ಅತ್ಯುನ್ನತ ಸಂವಿಧಾನ ಬದ್ಧ ಪೀಠದಲ್ಲಿರುವವರಿಗೆ ಈ ರೀತಿಯ ಅಗೌರವ ತೋರುವುದು ಮನುವಾದಿಗಳ ಅಸಹಿಷ್ಣುತೆಯನ್ನು ತೋರಿಸುತ್ತದೆ. ಆದರೆ, ಶೂ ಎಸೆದವನನ್ನು ಸಮರ್ಥನೆ ಮಾಡುವವರು ಈ ದೇಶದಲ್ಲಿ ಇರುವುದೇ ದುರಂತ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಕಿಡಿಕಾರಿದ್ದಾರೆ.
ಈ ಘಟನೆಯನ್ನು ದೇಶದ ಪ್ರತಿಯೊಬ್ಬರು ಒಕ್ಕೊರಲಿನಿಂದ ಖಂಡಿಸಬೇಕಿತ್ತು. ಆದರೆ, ದೇಶದೊಳಗಿನ ಕೆಲ ಆಂತರೀಕ ದೇಶದ್ರೋಹಿಗಳು ಇಂತಹ ಕೃತ್ಯಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ದೇಶದ ಸಂವಿಧಾನಬದ್ಧ ವ್ಯವಸ್ಥೆಗೆ ಮಾಡಿದಂತಹ ಅಪಚಾರ. ಅಗ್ರಗಣ್ಯ ಹುದ್ದೆಯಲ್ಲಿರುವ ವ್ಯಕ್ತಿ ದಲಿತ ಸಮುದಾಯ ಎಂಬುದನ್ನು ಸಹಿಸದ ಕಠೋರ ಹೀನ ಮನಃಸ್ಥಿತಿಯ ಜನ ಇಂತಹ ಕೆಲಸಗಳನ್ನು ಮಾಡುತ್ತಾರೆ ಎಂದು ಅವರು ಖಂಡಿಸಿದ್ದಾರೆ.ದೇಶದೊಳಗಿನ ದ್ರೋಹಿಗಳನ್ನು ಸಮರ್ಥನೆ ಮಾಡಿಕೊಂಡು ಹೋಗಿದ್ದೆ ಆದರೆ ಸಮರ್ಥನೆ ಮಾಡಿಕೊಳ್ಳುತ್ತಿರುವ ವ್ಯಕ್ತಿಗಳಿಗೂ ಇಂತಹ ಪರಿಸ್ಥಿತಿ ಎದುರಾಗುವ ದಿನಗಳು ದೂರ ಇಲ್ಲ. ಹೀಗಾಗಿ, ಪಕ್ಷ ಭೇದ, ಧರ್ಮ, ಜಾತಿ ಬದಿಗಿಟ್ಟು ಇಂತಹ ಕೃತ್ಯಗಳನ್ನು ವಿರೋಧಿಸಬೇಕು. ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.