ಜನವರಿ ೧೬ ಶುಕ್ರವಾರ ರಾತ್ರಿ ೮ ಗಂಟೆಗೆ ದಿವ್ಯ ರಥೋತ್ಸವದೊಂದಿಗೆ ಶ್ರೀ ಅಮ್ಮನವರ ಭವ್ಯ ಮೆರವಣಿಗೆ ನಡೆಯಲಿದ್ದು, ಕೀಲು ಕುಣಿತ, ವೀರಭದ್ರ ಕುಣಿತ ಹಾಗೂ ಪೂಜಾ ಕುಣಿತಗಳು ಭಕ್ತರನ್ನು ಮಂತ್ರಮುಗ್ಧಗೊಳಿಸಲಿವೆ. ಈ ಉತ್ಸವವನ್ನು ಹಾಸನ ಕ್ಷೇತ್ರದ ಶಾಸಕರಾದ ಸ್ವರೂಪ್ ಪ್ರಕಾಶ್ ಅವರು ಉದ್ಘಾಟಿಸಲಿದ್ದಾರೆ. ಜನವರಿ ೧೭ ಶನಿವಾರ ಸಂಜೆ ೭ ಗಂಟೆಗೆ ಗಂಗಾಮತಸ್ಥರ ಬೀದಿಯಲ್ಲಿರುವ ದೇವಮ್ಮ ದೇವಸ್ಥಾನದ ಸುತ್ತಲು ಬೇವಿನ ಉಡಿಗೆ ಉತ್ಸವ ನಡೆಯಲಿದೆ. ಜನವರಿ ೨೦ ಮಂಗಳವಾರ ಬೆಳಿಗ್ಗೆ ೯ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ವಸಂತ ಓಕಳಿ ಕಾರ್ಯಕ್ರಮ ಭಗವದ್ಭಕ್ತರ ಸಾನ್ನಿಧ್ಯದಲ್ಲಿ ನೆರವೇರಲಿದೆ.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಬಿ.ಎಂ.ರಸ್ತೆ ಭಾನು ಚಿತ್ರಮಂದಿರದ ಬಳಿಯ ಶ್ರೀ ಮಾರಿಕಾಂಬ (ಉಡುಸಲಮ್ಮ), ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಕರಿಬೀರೇಶ್ವರ ದೇವಾಲಯದಲ್ಲಿ 48ನೇ ವರ್ಷದ ಜಾತ್ರಾ ಮಹೋತ್ಸವವನ್ನು ಅತ್ಯಂತ ಭಕ್ತಿ, ಶ್ರದ್ಧೆ ಹಾಗೂ ಸಂಪ್ರದಾಯಬದ್ಧವಾಗಿ ಜರುಗಿತು.

ಬಂದ ಭಕ್ತರಿಗೆಲ್ಲಾ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನೆರವೇರಿಸಲಾಯಿತು. ಇದೇ ವೇಳೆ ಸಮಿತಿ ಅಧ್ಯಕ್ಷ ಅಶೋಕ್ ಅವರು ಮಾಧ್ಯಮದೊಂದಿಗೆ ಮಾತನಾಡಿ, ಕಳೆದ ಒಂದು ದಿನಗಳ ಹಿಂಧೆ ಬುಧವಾರ ಬೆಳಿಗ್ಗೆ ೮ ಗಂಟೆಗೆ ಶ್ರೀ ಮಾರಿಕಾಂಬೆಯ ಮೂಲಸ್ಥಾನದಲ್ಲಿ ಅಭಿಷೇಕ ನಡೆದು ಮಧ್ಯಾಹ್ನ ೧ ಗಂಟೆಗೆ ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ನೆರವೇರಿದೆ. ಈ ಅನ್ನಸಂತರ್ಪಣೆಯನ್ನು ದಿವಂಗತ ಎಚ್.ಡಿ. ದೇವರಾಜು ಅವರ ಸ್ಮರಣಾರ್ಥವಾಗಿ ಅವರ ಮಕ್ಕಳು ಹಾಗೂ ಸಹೋದರರು (ರಂಗನಾಥ ಪ್ರಾವಿಜನ್ ಸ್ಟೋರ್, ಹಾಸನ) ಆಯೋಜಿಸಿದ್ದಾರೆ. ಸಂಜೆ ೬ ಗಂಟೆಗೆ ದೇವಿಗೆರೆಯಿಂದ ಗಂಗಾಕಳಸದೊಂದಿಗೆ ಗಂಗಾಮತಸ್ಥರ ಬೀದಿಯಲ್ಲಿರುವ ದೇವಾಲಯಕ್ಕೆ ಭಕ್ತಿಪೂರ್ಣ ಆಗಮನ ನಡೆದಿದೆ. ಜನವರಿ ೧೫ ಗುರುವಾರ ಬೆಳಿಗ್ಗೆ ೫ರಿಂದ ೭.೩೦ರ ವರೆಗೆ ದುರ್ಗಾ ಹೋಮ ಜರುಗಿತು. ಬೆಳಿಗ್ಗೆ ೯ ಗಂಟೆಗೆ ಗಂಗಾಮತಸ್ಥರ ಬೀದಿಯಿಂದ ಗಂಗಾಮತಸ್ಥರು, ಆಡುವಳ್ಳಿ ಗ್ರಾಮಸ್ಥರು ಹಾಗೂ ಸಕಲ ಭಕ್ತಾಧಿಗಳಿಂದ ತಂಬಿಟ್ಟಿನ ಆರತಿ ಮತ್ತು ನಿಂಬೇಹಣ್ಣಿನ ದೀಪಗಳ ಮೂಲಕ ಶ್ರೀ ಅಮ್ಮನವರ ಉತ್ಸವ ನಡೆಯಿತು. ಮಧ್ಯಾಹ್ನ ೧ ಗಂಟೆಯಿಂದ ಅನ್ನಸಂತರ್ಪಣೆ ಯಶಸ್ವಿಯಾಗಿ ನಡೆದಿದೆ ಎಂದರು.

ಇಂದು ರಥೋತ್ಸವ:

ಜನವರಿ ೧೬ ಶುಕ್ರವಾರ ರಾತ್ರಿ ೮ ಗಂಟೆಗೆ ದಿವ್ಯ ರಥೋತ್ಸವದೊಂದಿಗೆ ಶ್ರೀ ಅಮ್ಮನವರ ಭವ್ಯ ಮೆರವಣಿಗೆ ನಡೆಯಲಿದ್ದು, ಕೀಲು ಕುಣಿತ, ವೀರಭದ್ರ ಕುಣಿತ ಹಾಗೂ ಪೂಜಾ ಕುಣಿತಗಳು ಭಕ್ತರನ್ನು ಮಂತ್ರಮುಗ್ಧಗೊಳಿಸಲಿವೆ. ಈ ಉತ್ಸವವನ್ನು ಹಾಸನ ಕ್ಷೇತ್ರದ ಶಾಸಕರಾದ ಸ್ವರೂಪ್ ಪ್ರಕಾಶ್ ಅವರು ಉದ್ಘಾಟಿಸಲಿದ್ದಾರೆ. ಜನವರಿ ೧೭ ಶನಿವಾರ ಸಂಜೆ ೭ ಗಂಟೆಗೆ ಗಂಗಾಮತಸ್ಥರ ಬೀದಿಯಲ್ಲಿರುವ ದೇವಮ್ಮ ದೇವಸ್ಥಾನದ ಸುತ್ತಲು ಬೇವಿನ ಉಡಿಗೆ ಉತ್ಸವ ನಡೆಯಲಿದೆ. ಜನವರಿ ೨೦ ಮಂಗಳವಾರ ಬೆಳಿಗ್ಗೆ ೯ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ವಸಂತ ಓಕಳಿ ಕಾರ್ಯಕ್ರಮ ಭಗವದ್ಭಕ್ತರ ಸಾನ್ನಿಧ್ಯದಲ್ಲಿ ನೆರವೇರಲಿದೆ.ಈ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಉಡುಸಲಮ್ಮ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಗ್ರಾಮಸ್ಥರು ಹಾಗೂ ಉಡುಸಲಮ್ಮ ಮತ್ತು ಕರಿಬೀರೇಶ್ವರ ದೇವರ ಭಕ್ತ ಮಂಡಳಿ, ಹಾಸನದ ಭಕ್ತಾದಿಗಳ ಪರವಾಗಿ ವಿನಂತಿಸುವುದಾಗಿ ಹೇಳಿದರು.