ಅಜ್ಞಾನ ಕಳೆದು ಜ್ಞಾನ ತೋರಿದ ಸಿದ್ದೇಶ್ವರ ಶ್ರೀಗಳು: ಶಾಸಕ ಕಟಕದೋಂಡ

| Published : Nov 05 2024, 12:44 AM IST

ಅಜ್ಞಾನ ಕಳೆದು ಜ್ಞಾನ ತೋರಿದ ಸಿದ್ದೇಶ್ವರ ಶ್ರೀಗಳು: ಶಾಸಕ ಕಟಕದೋಂಡ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಚಡಚಣ ಸಿದ್ದೇಶ್ವರ ಶ್ರೀಗಳು ತಮ್ಮ ಆಧ್ಯಾತ್ಮಿಕ ಪ್ರವಚನಗಳ ಮೂಲಕ ನಮ್ಮ ಅಜ್ಞಾನವನ್ನು ಕಳೆದು ಸನ್ಮಾರ್ಗ ತೋರಿಸಿದ ಮಹಾನ ಸಂತರು. ಶ್ರೀಗಳ ಜ್ಞಾನದಾಸೋಹ ಮುಂದುವರಿಯಲಿ ಎಂದು ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕದೋಂಡ ಹೇಳಿದರು.

ಕನ್ನಡಪ್ರಭ ವಾರ್ತೆ ಚಡಚಣ

ಸಿದ್ದೇಶ್ವರ ಶ್ರೀಗಳು ತಮ್ಮ ಆಧ್ಯಾತ್ಮಿಕ ಪ್ರವಚನಗಳ ಮೂಲಕ ನಮ್ಮ ಅಜ್ಞಾನವನ್ನು ಕಳೆದು ಸನ್ಮಾರ್ಗ ತೋರಿಸಿದ ಮಹಾನ ಸಂತರು. ಶ್ರೀಗಳ ಜ್ಞಾನದಾಸೋಹ ಮುಂದುವರಿಯಲಿ ಎಂದು ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕದೋಂಡ ಹೇಳಿದರು.

ಪಟ್ಟಣದ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ನ.3ರಿಂದ ನ.17 ರವರೆಗೆ ನಡೆಯಲಿರುವ ಅಮೃತಾನಂದ ಶ್ರೀಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಿದ್ದೇಶ್ವರ ಶ್ರೀಗಳ ಜ್ಞಾನ ದಾಸೋಹದ ಪಥವನ್ನು ಅಮೃತಾನಂದ ಶ್ರೀಗಳು ಮುಂದುವರಿಸಿಕೊಂಡು ಹೋಗುತ್ತಿರುವದು ಸ್ತುತ್ಯಾರ್ಹ. ನಡೆದಾಡುವ ದೇವರೆಂದು ಹೆಸರು ಪಡೆದಿದ್ದ ಸಿದ್ದೇಶ್ವರ ಶ್ರೀಗಳು ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಆಧ್ಯಾತ್ಮವನ್ನು ತಿಳಿಸಿ ಜನರ ಬದುಕನ್ನು ಬದಲಿಸಿದ ಮಹಾನ ಸಂತರು ಎಂದರು.

ಹತ್ತಳ್ಳಿಯ ಗುರು ಗುರುಪಾದೇಶ್ವರ ಶಿವಾಚಾರ್ಯರು ಮಾತನಾಡಿ, ಚಡಚಣ ಆಧ್ಯಾತ್ಮಿಕ ಒಲವನ್ನು ಹೊಂದಿರುವ ಪಟ್ಟಣವಾಗಿದ್ದು, ಸಿದ್ದೇಶ್ವರ ಶ್ರೀಗಳು ಶಾಲೆ ಕಲಿತ ಪುಣ್ಯ ಭೂಮಿಯಾಗಿದೆ. ಇಲ್ಲಿ ಅಮೃತಾನಂದ ಶ್ರೀಗಳಿಂದ ಆಧ್ಯಾತ್ಮಿಕ ಪ್ರವಚನ ಪ್ರಾರಂಭವಾಗಿದೆ. ಈ ಜ್ಞಾನ ದಾಸೋಹದ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು. ಭಾರತ ಆಧ್ಯಾತ್ಮಿಕತೆಯನ್ನು ಪ್ರೀತಿಸುವ, ಸಂಸ್ಕಾರಗಳು ನಶಿಸಿ ಹೋಗುತ್ತಿದ್ದರೂ ಭಾರತದಲ್ಲಿ ಮಾತ್ರ ಬೆಳೆಯುತ್ತಿದ್ದೆ. ಇದು ಈ ದೇಶದ ಮಣ್ಣಿನ ಗುಣ ಎಂದರು.

ಸಾನಿಧ್ಯವನ್ನು ಚಡಚಣ ಗುರುದೇವ ಆಶ್ರಮದ ಯೋಗಾನಂದ ಶ್ರೀಗಳು, ಹಾವಿನಾಳದ ಚಿರಂತಿ ಮಠದ ವಿಜಯ ಮಹಾಂತೇಶ ಶಿವಾಚಾರ್ಯರು, ಚಡಚಣದ ವಿರಕ್ತ ಮಠದ ಷಡಕ್ಷರ ಶ್ರೀಗಳು, ಘೋರ ಚಿಂಚೋಳ್ಳಿಯ ಸಿದ್ದರಾಮೇಶ್ವರ ಪಟ್ಟದೇವರು, ಬೆಳ್ಳೆರಿ ಶಿವಾನಂದ ಮಠದ ಬಸವಾನಂದ ಶ್ರೀಗಳು, ಪ್ರವಚನ ನೀಡಲಿರುವ ಅಮೃತಾನಂದ ಶ್ರೀಗಳು, ಪ್ರವಚನ ಸೇವಾ ಸಮಿತ ಸೇರಿದಂತ ಭಕ್ತರು ಇದ್ದರು.