ಸಾರಾಂಶ
ಸಿದ್ಧಸಿರಿ ಸೌಹಾರ್ದ ಬ್ಯಾಂಕ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ ಮಾತನಾಡಿ, ಸಿದ್ಧಸಿರಿ ಸಮಾಜಸ್ನೇಹಿ ಕಾರ್ಯ ಎಲ್ಲರಿಗೂ ಮಾದರಿ ಎಂದಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಧ್ಯೇಯದ ಜೊತೆಗೆ ಸಮಾಜಮುಖಿ ಕಾರ್ಯ ಕೈಗೊಳ್ಳುವ ಮೂಲಕ ಸಿದ್ಧಿಸಿರಿ ಮಾಡುತ್ತಿರುವ ಸಮಾಜಸ್ನೇಹಿ ಕಾರ್ಯ ಎಲ್ಲರಿಗೂ ಮಾದರಿ ಎಂದು ಸಿದ್ಧಸಿರಿ ಸೌಹಾರ್ದ ಬ್ಯಾಂಕ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ ಹೇಳಿದರು.ಮುದ್ದೇಬಿಹಾಳ ತಾಲೂಕಿನ ತಂಗಡಗಿಯಲ್ಲಿ ಸಿದ್ಧಸಿರಿ ವತಿಯಿಂದ ನಡೆದ ಗ್ರಾಹಕ ಸಮಾವೇಶ ಹಾಗೂ ಸೌಹಾರ್ದ ವಲಯದ ಚಿಂತನಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು.
ರೈತರು, ಜನಸಾಮಾನ್ಯರ ಆರ್ಥಿಕ ಪ್ರಗತಿ ಪ್ರಧಾನ ಧ್ಯೇಯ ಹೊಂದಿರುವ ಸಿದ್ಧಸಿರಿ ಈಗಾಗಲೇ ಸಮಾಜಮುಖಿ ಸಹಕಾರಿ ಎಂಬ ಶ್ರೇಯಸ್ಸಿಗೆ ಪಾತ್ರವಾಗಿದೆ, ರೈತರಿಗಾಗಿ ಕೋಲ್ಡ್ ಸ್ಟೋರೇಜ್, ಉದ್ಯೋಗ ಸೃಷ್ಟಿ, ಗೋವುಗಳ ಪಾಲನೆ, ಮಾಜಿ ಸೈನಿಕರಿಗೆ ಆರ್ಥಿಕ ಅನುಕೂಲ ಕಲ್ಪಿಸುವ ಮೂಲಕ ಮಾದರಿ ಕಾರ್ಯನಿರ್ವಹಿಸುತ್ತಿದೆ ಎಂದರು.ಕೇವಲ 18 ವರ್ಷಗಳಲ್ಲಿ ಸಿದ್ಧಸಿರಿ ಸೌಹಾರ್ದ ₹ 3 ಸಾವಿರ ಕೋಟಿ ರೂ. ಠೇವಣಿ ಪೂರೈಸಿ ದಾಖಲೆ ನಿರ್ಮಿಸಿದೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ)ರ ಅಧ್ಯಕ್ಷತೆಯಲ್ಲಿ, ದಕ್ಷ ಆಡಳಿತ ಮಂಡಳಿಯನ್ನು ಹೊಂದಿ, ಕರ್ನಾಟಕ ರಾಜ್ಯಾದ್ಯಂತ 158 ಶಾಖೆಗಳನ್ನು ಹೊಂದಿದ್ದು, ₹ 43 ಕೊಟಿ ಷೇರು ಹಾಗೂ ₹ 3,100 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಕಗ್ಗೋಡದಲ್ಲಿ ಗೋಶಾಲೆ ಆರಂಭಿಸುವ ಮೂಲಕ ಕಸಾಯಿಖಾನೆಗೆ ಹೋಗುವ ಸಾವಿರಾರು ಗೋವುಗಳನ್ನು ರಕ್ಷಿಸಿ ಪೋಷಿಸಲಾಗುತ್ತಿದೆ. ಸಿದ್ಧಸಿರಿ ಇಂಧನ ಕೇಂದ್ರ, ರೈತರ ಗೋದಾಮು, ಪ್ರಧಾನಮಂತ್ರಿ ಜನೌಷಧಿ ಕೇಂದ್ರ, ಸಿದ್ಧಸಿರಿ ಚಿಟ್‌ಫಂಡ್, ಸಿದ್ಧಸಿರಿ ಕೋಲ್ಡ್ ಸ್ಟೋರೇಜ್, ಸಿದ್ಧಸಿರಿ ಕೃಷಿ ಕೇಂದ್ರಗಳನ್ನು ಪ್ರಾರಂಭಿಸಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ ಮಾದರಿಯಾಗಿದೆ ಎಂದರು.
ಸಿದ್ರಾಮಪ್ಪ ಡೊಂಗರಗಾಂವಿ, ಬಸವರಾಜ ಡೊಂಗರಗಾಂವಿ, ಶ್ರೀಶೈಲ ಮರೋಳ, ರಾಜು ಕೊಂಗಿ, ಅಶೋಕ ತಂಗಡಗಿ, ಮಲಕಾಜಪ್ಪ ಹೊಳಿ, ಬಸವರಾಜ ಸಜ್ಜನ, ಗುರುಸಂಗಪ್ಪ ಮೋಟಗಿ, ಎಮ್. ಯು, ಹುಂಡೇಕಾರ, ಶ್ರೀಶೈಲ ಅಳ್ಳಗಿ, ಜಗದೇವಿ ಹೊಕ್ರಾಣಿ, ಪಾರ್ವತವ್ವ ಅಳ್ಳಗಿ, ಚಾಮರಾಜ ಬೇಲಾಳ, ಯೋಗೇಶ ಹಳ್ಳಿ, ಸಂದೀಪ ಗುಡೂರ, ಶೃತಿ ಬಿರಾದಾರ, ರೇಖಾ ಬೇವೂರ, ಅಡವೇಶ ಪೌಡದ, ಸಂಗಮೇಶ ಕೋಲಕಾರ, ಶರಣಬಸಪ್ಪ ಕುಂಬಾರ ಇತರರು ಇದ್ದರು.