ಮಹಾವೀರರ ಸ್ಮಾರಕಕ್ಕೆ ಕುಶಾಲನಗರದಿಂದ ಹಿಡಿ ಮಣ್ಣು ಸಂಗ್ರಹ

| Published : Oct 15 2023, 12:46 AM IST

ಮಹಾವೀರರ ಸ್ಮಾರಕಕ್ಕೆ ಕುಶಾಲನಗರದಿಂದ ಹಿಡಿ ಮಣ್ಣು ಸಂಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕುಶಾಲನಗರ ಪುರಸಭೆಯ ಆಶ್ರಯದಲ್ಲಿ ನಡೆದ ಮೆರವಣಿಗೆ ಬೈಚನಹಳ್ಳಿ ಮಾರಿಯಮ್ಮ ದೇವಾಲಯದಿಂದ ಹೊರಟು ಕಳಸಗಳೊಂದಿಗೆ ಚಂಡೆ ವಾದ್ಯಗಳೊಂದಿಗೆ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ನಡೆಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ ದೇಶಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ ಮಹಾನ್ ವೀರರ ಸ್ಮರಣಾರ್ಥ ದೆಹಲಿಯಲ್ಲಿ ನಿರ್ಮಾಣಗೊಳ್ಳಲಿರುವ ಸ್ಮಾರಕಕ್ಕೆ ಒಂದು ಹಿಡಿ ಮಣ್ಣು ಹಾಗೂ ಒಂದು ಹಿಡಿ ಅಕ್ಕಿ ಸಂಗ್ರಹಿಸಿ ಕುಶಾಲನಗರ ಪುರಸಭೆ ಆಶ್ರಯದಲ್ಲಿ ಪ್ರಮುಖ ಬೀದಿಗಳಲ್ಲಿ ವಿಶೇಷ ಮೆರವಣಿಗೆ ನಡೆಯಿತು. ಕುಶಾಲನಗರ ಪುರಸಭೆಯ ಆಶ್ರಯದಲ್ಲಿ ನಡೆದ ಮೆರವಣಿಗೆ ಬೈಚನಹಳ್ಳಿ ಮಾರಿಯಮ್ಮ ದೇವಾಲಯದಿಂದ ಹೊರಟು ಕಳಸಗಳೊಂದಿಗೆ ಚಂಡೆ ವಾದ್ಯಗಳೊಂದಿಗೆ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ನಡೆಯಿತು. ಕುಶಾಲನಗರ ಮಾಜಿ ಸೈನಿಕರ ಸಂಘದ ಸದಸ್ಯರು, ಕನ್ನಡ ಭಾರತಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪುರಸಭೆ ಸದಸ್ಯರು ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭ ನಡೆದ ಸರಳ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘ ಅಧ್ಯಕ್ಷ ನಿವೃತ್ತ ಕ್ಯಾ. ಡಿ. ಕೆ ಚಿಣ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮುಖ್ಯಾಧಿಕಾರಿಗಳಾದ ಕೃಷ್ಣಪ್ರಸಾದ್, ಪುರಸಭೆ ಸದಸ್ಯರಾದ ಡಿ.ಕೆ. ತಿಮ್ಮಪ್ಪ ಪ್ರಮೋದ್ ಮುತ್ತಪ್ಪ, ದಿನೇಶ್, ಎಂ.ಬಿ. ಸುರೇಶ್, ರೇಣುಕಾ, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಸದಸ್ಯರು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಇದ್ದರು.