ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ನೀಡುವುದರ ಮೂಲಕ ಸಂಘದ ಅಭಿವೃದ್ಧಿಪಡಿಸಬೇಕು, ಒಂದು ವರ್ಷದಲ್ಲಿ ತಮ್ಮ ಸಂಘದಲ್ಲಿ ಉತ್ತಮವಾದ ಉಳಿತಾಯದ ಕ್ರೋಡೀಕರಿಸಿ ಗ್ರಾಮದಲ್ಲಿ ಸೂಕ್ತ ಸ್ಥಳವನ್ನು ನಿಗದಿಪಡಿಸಿದರೆ ಒಕ್ಕೂಟದಿಂದ ಡೇರಿ ಕಟ್ಟಡ ಕಟ್ಟಲು ಕೋಮುಲ್‌ನಿಂದ ೫ ಲಕ್ಷ ರು.ಗಳ ಸಹಾಯ ಧನ ನೀಡಲಾಗುತ್ತದೆ.
ಕನ್ನಡಪ್ರಭ ವಾರ್ತೆ ಟೇಕಲ್
ಅಧಿಕಾರಿಗಳ ಶ್ರಮ ಮತ್ತು ಗ್ರಾಮಸ್ಥರ ಸಹಕಾರದಿಂದ ಎರಡೇ ತಿಂಗಳಲ್ಲಿ ಮಾಲೂರು ತಾಲೂಕಿನ ಟೇಕಲ್‌ನ ಸೋಮಸಂದ್ರ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕ ಸಹಕಾರ ಸಂಘವನ್ನು ಸ್ಥಾಪನೆ ಮಾಡಲಾಗಿದೆ ಎಂದು ಶಾಸಕ ಹಾಗೂ ಕೋಮುಲ್ ಅಧ್ಯಕ್ಷರಾದ ಕೆ.ವೈ.ನಂಜೇಗೌಡರು ತಿಳಿಸಿದರು.ಟೇಕಲ್‌ನ ಸೋಮಸಂದ್ರ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಗ್ರಾಮದಲ್ಲಿ ಹಾಲು ಉತ್ಪಾದಕರು ತುಂಬಾ ಉತ್ಸುಕರಾಗಿ ಡೇರಿ ಬೇಕೆಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ನಿಯಮಾನುಸಾರವಾಗಿ ಇಲ್ಲಿ ಹಾಲು ಉತ್ಪಾದಕ ಸಹಕಾರ ಸಂಘವನ್ನು ಸ್ಥಾಪನೆ ಮಾಡಿ ವಿಶೇಷವಾಗಿ ಕಾಮನ್ ಸಾಫ್ಟ್‌ವೇರ್ ಬಳಸಿ ಡೇರಿಗೆ ನೀಡುವ ವಿಧಾನವನ್ನು ಇಲ್ಲಿ ಅಳವಡಿಸಲಾಗಿದೆ ಎಂದರು.
ಗುಣಮಟ್ಟದ ಹಾಲು ಪೂರೈಸಿಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ನೀಡುವುದರ ಮೂಲಕ ಸಂಘದ ಅಭಿವೃದ್ಧಿಪಡಿಸಬೇಕು, ಒಂದು ವರ್ಷದಲ್ಲಿ ತಮ್ಮ ಸಂಘದಲ್ಲಿ ಉತ್ತಮವಾದ ಉಳಿತಾಯದ ಕ್ರೋಡೀಕರಿಸಿ ಗ್ರಾಮದಲ್ಲಿ ಸೂಕ್ತ ಸ್ಥಳವನ್ನು ನಿಗದಿಪಡಿಸಿದರೆ ಒಕ್ಕೂಟದಿಂದ ಡೇರಿ ಕಟ್ಟಡ ಕಟ್ಟಲು ಕೋಮುಲ್‌ನಿಂದ ೫ ಲಕ್ಷ ರು.ಗಳ ಸಹಾಯ ಧನ ನೀಡಲಾಗುತ್ತದೆ ಎಂದರು.ಸಂಘದ ಪದಾಧಿಕಾರಿಗಳು:ಅಧ್ಯಕ್ಷರಾಗಿ ಮುನಿಯಮ್ಮ, ಉಪಾಧ್ಯಕ್ಷರಾಗಿ ಜಯಪ್ಪ, ನಿರ್ದೇಶಕರಾಗಿ ರಾಜಪ್ಪ, ಚಲಪತಿ, ನಂದೀಶ, ಶ್ರೀರಾಮಪ್ಪ, ಚಂದ್ರಪ್ಪ, ಮುನಿಶಾಮಿ, ತಿಪ್ಪಮ್ಮ, ಮೋನಿಷ್, ಮೋಹನ್, ಮುಖ್ಯಕಾರ್ಯನಿರ್ವಹಣಾಧಿಕಾರಿ ವೇಣುಗೋಪಾಲ್, ಹಾಲು ಪರೀಕ್ಷಕ ಮೋಹನ್ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಕೋಮುಲ್ ನಿರ್ದೇಶಕ ಮಲ್ಲಿಯಪ್ಪನಹಳ್ಳಿ ಶ್ರೀನಿವಾಸ್, ಪ್ರಾಧಿಕಾರದ ವಿಜಯನರಸಿಂಹ, ಕಾಂಗ್ರೆಸ್‌ನ ಎಸ್.ಜಿ.ರಾಮಮೂರ್ತಿ, ಗ್ರಾಪಂ ಸದಸ್ಯ ಎಂ.ರಾಮಕೃಷ್ಣಪ್ಪ, ಬಗರ್‌ಹುಕ್ಕುಂ ಸದಸ್ಯ ಬಿ.ಜಿ.ಸತೀಶಬಾಬು, ಕೃಷಿಕ ಸಮಾಜದ ಅಧ್ಯಕ್ಷ ಎಚ್.ಹನುಮಂತಪ್ಪ, ಎ.ಕೆ.ವೆಂಕಟೇಶ್, ಶಿಬಿರ ಕಚೇರಿ ವ್ಯವಸ್ಥಾಪಕ ಡಾ.ಲೋಹಿತ್, ವಿಸ್ತರಣಾಧಿಕಾರಿ ಗಂಗಾಧರ್ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.