ಮಂಗಳೂರು ಸೆಂಟ್ರಲ್‌-ದೆಹಲಿಗೆ ವಯಾ ಬೆಂಗಳೂರು ಮೂಲಕ 5 ರಂದು ವಿಶೇಷ ರೈಲು ಸಂಚಾರ

| Published : Oct 03 2025, 01:07 AM IST

ಮಂಗಳೂರು ಸೆಂಟ್ರಲ್‌-ದೆಹಲಿಗೆ ವಯಾ ಬೆಂಗಳೂರು ಮೂಲಕ 5 ರಂದು ವಿಶೇಷ ರೈಲು ಸಂಚಾರ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ರೈಲ್ವೆ ವಲಯ ಅ.5ರಂದು ಮಂಗಳೂರು ಸೆಂಟ್ರಲ್‌ನಿಂದ ಹಾಸನ, ಯಶವಂತಪುರ, ಕಾಚೆಗುಡ ಮಾರ್ಗವಾಗಿ ದೆಹಲಿಯ ಹಜ್ರತ್ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ವಿಶೇಷ ರೈಲು ಸಂಚಾರ ಪ್ರಕಟಿಸಿದೆ.

ಮಂಗಳೂರು: ದಕ್ಷಿಣ ರೈಲ್ವೆಯಿಂದ ಮಂಗಳೂರು ಸೆಂಟ್ರಲ್‌ನಿಂದ ಬೆಂಗಳೂರು ಮಾರ್ಗವಾಗಿ ದೆಹಲಿಗೆ ವಿಶೇಷ ರೈಲು ಘೋಷಣೆಯಾಗಿದೆ. ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಈ ಬಗ್ಗೆ ದಕ್ಷಿಣ ರೈಲ್ವೆ ವಲಯದ ಪಾಲಕ್ಕಾಡ್ ವಿಭಾಗಕ್ಕೆ ಮನವಿ ಸಲ್ಲಿಸಿತ್ತು. ಮಾಡಿದರು. ಈ ಮನವಿಗೆ ಸ್ಪಂದಿಸಿದ ದಕ್ಷಿಣ ರೈಲ್ವೆ ವಲಯ ಅ.5ರಂದು ಮಂಗಳೂರು ಸೆಂಟ್ರಲ್‌ನಿಂದ ಹಾಸನ, ಯಶವಂತಪುರ, ಕಾಚೆಗುಡ ಮಾರ್ಗವಾಗಿ ದೆಹಲಿಯ ಹಜ್ರತ್ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ವಿಶೇಷ ರೈಲು ಸಂಚಾರ ಪ್ರಕಟಿಸಿದೆ. ರೈಲು ಸಂಖ್ಯೆ 06008 ಮಂಗಳೂರು ಸೆಂಟ್ರಲ್-ಹಜ್ರತ್ ನಿಜಾಮುದ್ದೀನ್ ವಿಶೇಷ ರೈಲು ಅ.5ರಂದು ಮಧ್ಯಾಹ್ನ 2.25ಕ್ಕೆ ಮಂಗಳೂರು ಸೆಂಟ್ರಲಿನಿಂದ ಹೊರಟು ಹಾಸನ ಮಾರ್ಗವಾಗಿ ರಾತ್ರಿ 11.30ಕ್ಕೆ ಯಶವಂತಪುರ ಜಂಕ್ಷನ್ ರೈಲು ನಿಲ್ದಾಣ ತಲುಪಲಿದೆ. ರೈಲಿಗೆ ಮಂಗಳೂರು ಸೆಂಟ್ರಲ್ ಬಳಿಕ ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ ಜಂಕ್ಷನ್, ಚನ್ನರಾಯಪಟ್ಟಣ, ಕುಣಿಗಲ್, ಯಶವಂತಪುರ ಜಂಕ್ಷನ್, ಯಲಹಂಕ ಜಂಕ್ಷನ್, ಹಿಂದುಪುರ, ಧರ್ಮಾವರಂ ಜಂಕ್ಷನ್, ಅನಂತಪುರ, ಗೂಟಿ ಜಂಕ್ಷನ್, ಕುರ್ನೂಲ್ ಸಿಟಿ, ಮಹಬೂಬನಗರ್, ಕಾಚೆಗುಡ, ಕಾಜಿಪೇಟೆ ಜಂಕ್ಷನ್, ಬಲ್ಹಾರ್ಶಾ, ನಾಗಪುರ ಜಂಕ್ಷನ್, ಜುಹಾರ್ಪುರ, ಇಟಾರ್ಸಿ ಜಂಕ್ಷನ್, ಭೋಪಾಲ್ ಜಂಕ್ಷನ್, ಬಿನಾ ಜಂಕ್ಷನ್, ಜಾನ್ಸಿ ಜಂಕ್ಷನ್, ಗ್ವಾಲಿಯರ್ ಜಂಕ್ಷನ್, ಆಗ್ರಾ ಕಂಟೋನ್ಮೆಂಟ್, ಮಥುರಾ ಜಂಕ್ಷನ್, ಹಜ್ರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.ಮಂಗಳೂರಿನಿಂದ ಕರ್ನಾಟಕ ಹಾಗೂ ಉತ್ತರ ಭಾರತದ ಕಡೆಗೆ ಹಾಸನ ಮಾರ್ಗವಾಗಿ ಓಡಿಸುವ ಪ್ರಥಮ ರೈಲು ಇದಾಗಿದೆ.

ಹಬ್ಬ ಹಾಗೂ ವಾರಾಂತ್ಯದ ರಜೆ ಮುಗಿಸಿ ಬೆಂಗಳೂರು, ಹೈದರಾಬಾದ್, ದೆಹಲಿ ಸೇರಿ ಉತ್ತರ ಭಾರತದ ವಿವಿಧ ಭಾಗಗಳಿಗೆ ಸಂಚರಿಸುವವರಿಗೆ ಈ ವಿಶೇಷ ರೈಲು ಅನುಕೂಲವಾಗಲಿದೆ.