ಸಾರಾಂಶ
ಇತ್ತೀಚೆಗೆ ಮಡಿಕೇರಿಗೆ ಭೇಟಿಯಾಗಿದ್ದ ದಿನೇಶ್ ದೇವವೃಂದ ಅವರೊಂದಿಗೆ ಹೋಂಸ್ಟೇ ಪದಾಧಿಕಾರಿಗಳು ಭೇಟಿಯಾಗಿ ಕಾಫಿಯ ಬಗ್ಗೆ ಚರ್ಚಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಇತ್ತೀಚೆಗೆ ಮಡಿಕೇರಿಗೆ ಭೇಟಿ ನೀಡಿದ್ದ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಅವರೊಂದಿಗೆ ಕೂರ್ಗ್ ಹೋಟೆಲ್ ರೆಸಾರ್ಟ್ಸ್ ಎಸೋಸಿಯೇಷನ್ ಮತ್ತು ಹೋಂಸ್ಟೇ ಪದಾಧಿಕಾರಿಗಳು ಭೇಟಿಯಾಗಿ ಕಾಫಿಯ ಬಗ್ಗೆ ಚರ್ಚಿಸಿದರು.ನಗರದ ಹೋಟೆಲ್ ವ್ಯಾಲ್ಯೂ ಸಭಾಂಗಣದಲ್ಲಿ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಹಾಗೂ ಕಾಫಿ ಮಂಡಳಿಯ ಉಪ ನಿರ್ದೇಶಕ ಚಂದ್ರಶೇಖರ್ ಅವರೊಂದಿಗೆ ಕೂರ್ಗ್ ಹೋಟೆಲ್ ಮತ್ತು ರೆಸಾರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಕಾರ್ಯಪ್ಪ ಮತ್ತು ಹೋಂಸ್ಟೇ ಅಸೋಸಿಯೇಷನ್ ಜಿಲ್ಲಾಧ್ಯ ಕ್ಷೆ ಮೋಂತಿ ಗಣೇಶ್ ಇವರ ಸಮ್ಮುಖದಲ್ಲಿ ಸಭೆ ನಡೆಯಿತು.
ಈ ಸಂದರ್ಭ ಮಾತನಾಡಿದ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಅವರು ಕೊಡಗಿನ ಹಾಗೂ ಭಾರತದ ಕಾಫಿಯನ್ನು ಪುನಶ್ಚೇತನ ಮತ್ತು ಉತ್ತಮ ಗುಣಮಟ್ಟದ ಆಯ್ಕೆಯ ಬಗ್ಗೆ ವಿಶ್ವ ಮಟ್ಟದಲ್ಲಿ ಪ್ರಖ್ಯಾತಿ ಪಡಿಸಲು ಯಾವ ರೀತಿಯಲ್ಲಿ ಕ್ರಮವಹಿಸಬೇಕು ಎಂಬುದರ ಕುರಿತು ವಿವರಿಸಿದರು.ಕೊಡಗಿನ ಕಾಫಿಯನ್ನು ಉತ್ಕೃಷ್ಟ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಹಾಗೂ ಗುಣಮಟ್ಟ ಕಾಪಾಡುವ ವಿಜಯಗಳ ಬಗ್ಗೆ ಕಾಫಿ ಮಂಡಳಿಯೊಂದಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಎರಡು ಅಸೋಸಿಯೇಷನ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭರವಸೆ ನೀಡಿದರು. ಕೊಹೆರ ಸಂಸ್ಥೆಯ ಉಪಾಧ್ಯಕ್ಷ ಜಹೀರ್ ಹಾಗೂ ಹೋಂಸ್ಟೇ ಅಸೋಸಿಯೇಷನ್ ಉಪಾಧ್ಯಕ್ಷ ಅಂಬೆಕಲ್ ನವೀನ್ ಸೇರಿದಂತೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.