ಕ್ರೀಡೆಗಳು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ವರದಾನ: ಕೊಣ್ಣೂರ

| Published : May 19 2024, 01:57 AM IST

ಕ್ರೀಡೆಗಳು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ವರದಾನ: ಕೊಣ್ಣೂರ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವುದು ಅತೀ ಅವಶ್ಯವಾಗಿದೆ. ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವುದು ಅತೀ ಅವಶ್ಯವಾಗಿದೆ. ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಪ್ರತಿಯೊಬ್ಬರು ಒಂದಿಲ್ಲೊಂದು ಕ್ರೀಡಾಚಟುವಟಿಕೆಯಲ್ಲಿ ನಿತ್ಯ ಒಂದು ಗಂಟೆಯಾದರೂ ಮೈದಾನದಲ್ಲಿ ಕಳೆಯುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಅರೋಗ್ಯ ಹೊಂದಬಹುದು ಎಂದು ತೇರದಾಳ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.

ಸ್ಥಳೀಯ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಮಹಾಲಿಂಗಪುರ ಕ್ರಿಕೆಟ್‌ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ್ದ ಎಸ್.ಆರ್. ಕೆ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಪ್ರತಿ ರಂಗದಲ್ಲೂ ಎಲ್ಲರೂ ಸ್ಪರ್ಧಾಳುಗಳಾಗಿ ಭಾಗವಹಿಸಿ ಸೋಲು- ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಬೇಕು. ಕ್ರೀಡಾ ಕ್ಷೇತ್ರದಲ್ಲಿ ಬೆಳೆಯಬೇಕಾದರೆ ಮೊದಲು ದುಶ್ಚಗಳನ್ನು ಬಿಡಬೇಕು. ಉತ್ತಮ ಆರೋಗ್ಯ ಕಾಪಾಡಿಕೊಂಡರೆ ಯಾವುದೇ ಕ್ರೀಡೆಯಲ್ಲಿ ಉನ್ನತ ಸ್ಥಾನಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಹೊಂದಾಣಿಕೆ ಮನೋಭಾವ ಬರುತ್ತದೆ. ಪ್ರತಿನಿತ್ಯ ಅತ್ಯಂತ ಕ್ರಿಯಾಶೀಲರಾಗಿ ಕರ್ತವ್ಯನಿರ್ವಹಿಸಲು ಸಹಕಾರಿಯಾಗುತ್ತದೆ. ಮನೋಲ್ಲಾಸ ಇಮ್ಮಡಿಯಾಗುತ್ತದೆ. ಕ್ರೀಡಾ ಸಾಧಕನಿಗೆ ಸ್ಪರ್ಧಾ ಮನೋಭಾವ ಮುಖ್ಯ. ಭಾಗವಹಿಸಿದ ಕ್ರೀಡೆಯಲ್ಲಿ ಸ್ಫೂರ್ತಿ ಮೆರೆಯುವುದೇ ಪ್ರತಿಯೊಬ್ಬ ಕ್ರೀಡಾಪಟುವಿನ ಗುಣಧರ್ಮವಾಗಬೇಕು ಎಂದರು.

ಅತಿಥಿಗಳಾಗಿ ತಂಡಗಳ ಮಾಲೀಕರಾದ ಮಹಾಲಿಂಗಪ್ಪ ಕೌಜಲಗಿ, ಸಿದ್ದುಗೌಡ ಪಾಟೀಲ, ಬಲವಂತಗೌಡ ಪಾಟೀಲ, ಬಾಳಕೃಷ್ಣ ಮಾಳವದೆ, ಬಸವರಾಜ ಕರೆಹೊನ್ನ, ಅಪ್ಪಸಾಬ ನಾಲಬಂದ್‌, ಮಂಜು ಬಕರೇ, ಲಕ್ಕಪ್ಪಣ್ಣ ಭಜಂತ್ರಿ, ಇಜಾಜ್‌ ಯಾದವಾಡ, ಮಹೇಶ ಮನ್ನಯ್ಯನವರಮಠ, ಶ್ರೀಕಾಂತ ಮಾಗಿ ಉಪಸ್ಥಿತರಿದ್ದರು. ಇದೇ ವೇಳೆ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮೊದಲ ದಿನ ಎರಡು ಪಂದ್ಯಗಳು ನಡೆದವು. ಅಪ್ಪಾಜಿ ತಂಡ ಮತ್ತು ಎಸ್.ಆರ್.ಪಿ ಫೌಂಡೇಶನ್‌ ಮಧ್ಯೆ ನಡೆದ ಮೊದಲ ಪಂದ್ಯದಲ್ಲಿ ಎಸ್‌.ಆರ್. ಪಿ ಫೌಂಡೇಶನ್‌ ತಂಡ ಗೆಲುವಿನ ನಗೆ ಬೀರಿತು. ಎಲ್.ಬಿ. ಬಾಯ್ಸ್ ಮತ್ತು ಬಿಎಲ್ ಪಿ ಲೈನ್ಸ್ ತಂಡಗಳ ಮಧ್ಯೆ ನಡೆದ ಎರಡನೇ ಪಂದ್ಯ ಸಮಬಲ ಸಾಧಿಸಿ ರೋಚಕ ಟೈಗೊಂಡು ಕುತೂಹಲ ಕೆರಳಿಸಿತು. ಎರಡು ಓವರಗಳ ಪವರ್ ಪ್ಲೆ ರನ್ ರೇಟ್ ಆಧಾರದ ಮೇಲೆ ಬಿಎಲ್ ಪಿ ಲೈನ್ಸ್ ತಂಡ 3 ರನಗಳಿಂದ ಗೆದ್ದು ಬಿಗಿತು.

ಮೊದಲ ಪಂದ್ಯದ ಪಂದ್ಯ ಪುರಷೋತ್ತಮನಾಗಿ ಅವಿನಾಶ ಜಾಧವ, ಬೆಸ್ಟ್ ಬೌಲರ್‌ ಆಗಿ ಬಸವರಾಜ ರಾಯರ ಪ್ರಶಸ್ತಿ ಪಡೆದುಕೊಂಡರು, ಎರಡನೇ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಮಲ್ಲು ಪಶ್ಚಾಪುರ ಪಡೆದುಕೊಂಡರು. ಮೂರನೇ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಇದರಿಂದಾಗಿ ಮುಂದಿನ ಪಂದ್ಯಗಳು ಜರುಗದೆ ಮುದೂಡಲಾಯಿತು.

ಈ ಸಂದರ್ಭದಲ್ಲಿ ಯಾಸೀನ್ ಪಾಂಡು, ಬಸೀರ್‌ ಕೆಂಭಾವಿ, ರಾಜು ಶೆಟ್ಟರ್, ಸಿಕಂದರ್‌ ಸಾಂಗ್ಲಿಕರ, ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು, ಪ್ರಕಾಶ ಕರ್ಲಟ್ಟಿ, ಮಲ್ಲಿಕಾರ್ಜುನ ಮನ್ನಯ್ಯನವರಮಠ, ಮಾನಿಂಗ ಮಾಳಿ, ಅಲ್ಲಭಕ್ಷ ವೀಕ್ಷಕ ವಿವರಣೆ ನೀಡಿದರು. ಚಂದ್ರು ಮೊರೆ ನಿರೂಪಿಸಿದರು. ಮೀರಾ ತಟಗಾರ ಸ್ವಾಗತಿಸಿದರು. ಮಹಾದೇವ ಕಡಬಲ್ಲವರ ವಂದಿಸಿದರು.