ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ :ವಕೀಲಿ ವೃತ್ತಿಯನ್ನು ಕೌಶಲ್ಯತೆಯಿಂದ ಮತ್ತು ಘನತೆಯಿಂದ ನಿರ್ವಹಿಸುವುದು ಪ್ರಚಲಿತ ದಿನಗಳಲ್ಲಿ ಅಗತ್ಯವಿದೆ ಎಂದು 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಶಂಕರ.ಕೆ.ಎಂ. ಕಿವಿಮಾತು ಹೇಳಿದರು.
ಕನ್ನಡಪ್ರಭ ವಾರ್ತೆ ಗೋಕಾಕ:ವಕೀಲಿ ವೃತ್ತಿಯನ್ನು ಕೌಶಲ್ಯತೆಯಿಂದ ಮತ್ತು ಘನತೆಯಿಂದ ನಿರ್ವಹಿಸುವುದು ಪ್ರಚಲಿತ ದಿನಗಳಲ್ಲಿ ಅಗತ್ಯವಿದೆ ಎಂದು 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಶಂಕರ.ಕೆ.ಎಂ. ಕಿವಿಮಾತು ಹೇಳಿದರು.
ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ ವಕೀಲರ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ವರ್ಗಾವಣೆಯಾದ ನ್ಯಾಯಾಧೀಶರ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು. ವಕೀಲಿ ವೃತ್ತಿಯನ್ನು ಕೇವಲ ಪುಸ್ತಕಗಳನ್ನಷ್ಟೇ ಅವಲಂಭಿಸಿ ನಡೆಸದೇ ಅದಕ್ಕೆ ತಕ್ಕ ಘನತೆಯನ್ನೂ ಕಾಯ್ದುಕೊಂಡು ಮುಂದುವರೆಯುವುದು ಇಂದು ಅಗತ್ಯವಾಗಿದೆ ಎಂದು ನ್ಯಾಯವಾದಿಗಳಿಗೆ ಕಿವಿಮಾತು ಹೇಳಿದರು.ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ದೀಪಾ.ಜಿ ಅವರು ವಕೀಲರ ಸಂಘದಿಂದ ನೀಡಲಾದ ಆತಿಥ್ಯಕ್ಕೆ ಪ್ರತಿಕ್ರಿಯಿಸಿ ವಕೀಲಿ ವೃತ್ತಿಯನ್ನು ನಿರ್ಭಯತೆಯಿಂದ ಮಾಡಿದಾಗ ಕಕ್ಷೀಗಾರರಿಗೆ ಗುಣಮಟ್ಟದ ಸೇವೆಯನ್ನು ನೀಡಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಹಿರಿಯ ವಕೀಲರಾದ ಎ.ವಿ.ಹುಲಗಬಾಳಿ, ಆರ್.ಎಂ.ಬಳ್ಳಾರಿ, ಬಿ.ಟಿ.ಬೀರನಗಡ್ಡಿ ಹಾಗೂ ವಕೀಲರ ಸಂಘದ ಸಹ ಕಾರ್ಯದರ್ಶಿ ಜಿ.ಆರ್.ಕುಂಬಾರ ಅವರು ಮಾತನಾಡಿ, ನ್ಯಾಯಾಧೀಶರ ಕಾರ್ಯ ವೈಖರಿಯನ್ನು ಗುಣಗಾನ ಮಾಡಿದರು.ಇದೇ ಸಂದರ್ಭದಲ್ಲಿ ವಕೀಲರ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ವರ್ಗಾವಣೆ ಯಾದ ನ್ಯಾಯಾಧೀಶೆ ದೀಪಾ.ಜಿ. ಮತ್ತು ಶಂಕರ ಕೆ.ಎಂ. ಅವರನ್ನು ಅತ್ಮೀಯವಾಗಿ ಸತ್ಕರಿಸಿ, ಬೀಳ್ಕೊಟ್ಟರು.ವೇದಿಕೆಯಲ್ಲಿ 2ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಧೀಶೆ, ವಕೀಲೆ ರೂಪಾ ಮಟ್ಟಿ, ಸಂಘದ ಅಧ್ಯಕ್ಷ ಬಸವರಾಜ ಕೋಟಗಿ, ಉಪಾಧ್ಯಕ್ಷ ಆನಂದ ಕುಲಕರ್ಣಿ, ಮಹಿಳಾ ಪ್ರತಿನಿಧಿ ಪ್ರೇಮಾ ಚಿಕ್ಕೋಡಿ ಮೊದಲಾದವರು ಉಪಸ್ಥಿತರಿದ್ದರು. ನೋಟರಿ ಶಂಕರ ಗೋರೋಶಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಸ್.ಜಿಡ್ಡಿಮನಿ ವಂದಿಸಿದರು.