ಸಾರಾಂಶ
ಶ್ರೀಮಹದೇವಸ್ವಾಮಿ ದೇಗುಲಕ್ಕೆ 140 ವರ್ಷಗಳ ಇತಿಹಾಸವಿದೆ. ಹಲವು ವರ್ಷಗಳಿಂದ ಮಹದೇಶ್ವರಸ್ವಾಮಿ ರಥೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದುಕೊಂಡು ಬರುತ್ತಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಹೊಸಗಾವಿಯ ಇತಿಹಾಸ ಪ್ರಸಿದ್ಧ ಶ್ರೀಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೀಪಾವಳಿ ಕಾರ್ತಿಕ ಮಾಸದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಮಹದೇಶ್ವರ ಸ್ವಾಮಿ ದಿವ್ಯ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಸಂಭ್ರಮದಿಂದ ಗುರುವಾರ ಸಂಜೆ ನೆರವೇರಿತು.ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥವನ್ನು ದೇವಸ್ಥಾನದ ಸುತ್ತ ಉಘೇ ಮಹದೇವ, ಉಘೇ ಮಹದೇವ ಎಂದು ಎಳೆದುರು. ಜತೆಗೆ ನೂರಾರು ಭಕ್ತರು ದೇವರಿಗೆ ಹಣ್ಣು ದವನ ಎಸೆಯುವ ಮೂಲಕ ಮಹದೇಶ್ವರ ಸ್ವಾಮಿ ಕೃಪೆಗೆ ಒಳಗಾದರು.
ರಥೋತ್ಸವದ ಅಂಗವಾಗಿ ದೇಗುದಲ್ಲಿ ಬೆಳಗ್ಗೆ ಸ್ವಾಮಿಗೆ ರುದ್ರಾಭಿಷೇಕ ಮಹಾಮಂಗಳಾರತಿ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.ಶ್ರೀಮಹದೇವಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಮಾತನಾಡಿ, ಶ್ರೀಮಹದೇವಸ್ವಾಮಿ ದೇಗುಲಕ್ಕೆ 140 ವರ್ಷಗಳ ಇತಿಹಾಸವಿದೆ. ಹಲವು ವರ್ಷಗಳಿಂದ ಮಹದೇಶ್ವರಸ್ವಾಮಿ ರಥೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದುಕೊಂಡು ಬರುತ್ತಿದೆ ಎಂದರು.
ಜಾನುವಾರುಗಳಿಗೆ ರೋಗ ಬಂದರೆ ಸ್ವಾಮಿಯ ತೀರ್ಥ ಪ್ರೊಕ್ಷಣೆ ಮಾಡಿದರೆ ಎಲ್ಲ ರೀತಿಯ ರೋಗ ನಿವಾರಣೆಯಾಗುತ್ತದೆ ಎಂಬುವುದು ಕೂಡ ರೈತರ ನಂಬಿಕೆಯಾಗಿದೆ. ಆದ್ದರಿಂದ 9 ದಿಗಳು ನಡೆಯುವ ಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ ಎಂದರು. ಜಾತ್ರೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.ನಾಳೆ ಗುರುವಂದನೆ, ಸ್ನೇಹ ಸಮ್ಮಿಲನ
ಕೆ.ಆರ್.ಪೇಟೆ: ತಾಲೂಕಿನ ಹರಿಹರಪುರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ನ.10 ರಂದು ಬೆಳಗ್ಗೆ 10 1994-1997ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನವನ್ನು ಹಮ್ಮಿಕೊಂಡಿದ್ದಾರೆ. ವಿದ್ಯಾರ್ಥಿಗಳ ನೆಚ್ಚಿನ ಗುರುಗಳಾದ ಎಂ.ಎನ್.ನಾಗೇಶ್, ಜೆ.ಜಿ.ರಾಜೇಗೌಡ, ಬಿ.ಎನ್. ಪರಶಿವಮೂರ್ತಿ, ಸ್ವಾಮಿಗೌಡ, ಸುರೇಶ್‌ಹಂಚಿನಾಳ, ವೆಂಕಟರಾಮ್ ಮತ್ತು ಶ್ರೀನಿವಾಸಮೂರ್ತಿ ಮುಂತಾದವರಿಗೆ ವಿದ್ಯಾರ್ಥಿ ಬಳಗ ಗುರುವಂದನೆ ಸಲ್ಲಿಸಲಿದ್ದಾರೆ ಎಂದು ಹಿರಿಯ ವಿದ್ಯಾರ್ಥಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಜಯಕೀರ್ತಿ ತಿಳಿಸಿದ್ದಾರೆ.