ಸಾರಾಂಶ
ರಾಮನಗರ: ಪ್ರತಿ ನಿತ್ಯ ಸ್ವಚ್ಛತಾ ಕಾಯಕದಲ್ಲಿ ನಿರತರಾಗುವ ಪೌರಕಾರ್ಮಿಕರು ಅ.28ರಂದು (ಮಂಗಳವಾರ) ನಗರದ ಜಾನಪದ ಲೋಕದಲ್ಲಿ ಶ್ರೀ ಕೃಷ್ಣ ಸಂಧಾನ ಸಾಮಾಜಿಕ ನಾಟಕ ಪ್ರದರ್ಶನ ನೀಡಿ ಪ್ರೇಕ್ಷಕರ ಮನ ರಂಜಿಸಲು ಸಿದ್ಧರಾಗಿದ್ದಾರೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.
ನಗರಸಭೆ ಆವರಣದಲ್ಲಿ ಸೋಮವಾರ ನಡೆದ ಇ-ಖಾತೆ ಅಭಿಯಾನದಲ್ಲಿ ಆಸ್ತಿ ಮಾಲೀಕರಿಗೆ ಖಾತಾ ದಾಖಲೆಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು, ರಾಮನಗರದಲ್ಲಿ ವಿಶೇಷವಾಗಿ ಪೌರಕಾರ್ಮಿಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಹಮ್ಮಿಕೊಂಡಿದ್ದೇವೆ ಎಂದರು.ಪೌರಕಾರ್ಮಿಕರ ಹೆಸರಲ್ಲಿ ಒಂದು ಕಾರ್ಯಕ್ರಮ ಮಾಡಿ ದಿನಾಚರಣೆಯನ್ನು ಮುಗಿಸುವ ಬದಲು, ಪೌರಕಾರ್ಮಿಕರು ತಮಗಾಗಿಯೇ ಮೀಸಲಿಟ್ಟಿರುವ ಆ ಒಂದು ದಿನದಂದು ಇಡೀ ದಿನ ಸಂತಸದ ಕ್ಷಣಗಳನ್ನು ಕಳೆಯಬೇಕು ಎಂಬ ಉದ್ದೇಶ ನಮ್ಮದಾಗಿದೆ. ಇದಕ್ಕಾಗಿ ವಿಶೇಷವಾಗಿ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು ಶ್ರೀ ಕೃಷ್ಣ ಸಂಧಾನ ಸಾಮಾಜಿಕ ನಗೆ ನಾಟಕ ಪ್ರದರ್ಶಿಸುವರು. ಸ್ವಚ್ಛತೆಯ ಜಾಗೃತಿ ಮೂಡಿಸುವ ಹಚ್ಚೇವು ಸ್ವಚ್ಛತೆಯ ದೀಪ, ನಿಮ್ಮ ಸೇವೆಯ ಬೆವರ ಹನಿಗಳು ಎಂಬ ಸಮೂಹ ಗಾಯನ ನಡೆಸಿಕೊಡಲಿದ್ದಾರೆ. ಇದರ ಜೊತೆಗೆ ಕರ್ನಾಟಕ ವೈಭವ ಸಮೂಹ ನೃತ್ಯ ಹಾಗೂ ನಾನ್ ಕ್ಲಾಸಿಕಲ್ ಸಮೂಹ ನೃತ್ಯವನ್ನು ಪೌರ ಸೇವಾ ನೌಕರರೇ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.ತಮ್ಮ ಆರೋಗ್ಯವನ್ನು ಲೆಕ್ಕಿಸದೆ ನಗರ ಆರೋಗ್ಯವನ್ನು ಕಾಯುವ ಪೌರಕಾರ್ಮಿಕರು ವರ್ಷವಿಡೀ ಅತ್ಯಂತ ಶ್ರಮದಾಯಕ ಕೆಲಸವಾದ ಸ್ವಚ್ಛತಾ ಕಾಯಕದಲ್ಲಿ ತೊಡಗುತ್ತಾರೆ. ಅವರಲ್ಲೂ ಪ್ರತಿಭೆಗಳು ಇದ್ದಾರೆ, ಸಾಂಸ್ಕೃತಿಕ, ಸಾಹಿತ್ಯದ ಮೇಲೆ ಆಸಕ್ತಿ ಇಟ್ಟುಕೊಂಡಿರುವವರು ಇದ್ದಾರೆ. ಅವರಿಗೆ ಒಂದು ವೇದಿಕೆ ಕಲ್ಪಿಸುತ್ತಿದ್ದೇವೆ. ಪೌರಕಾರ್ಮಿಕರು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರ ಮನ ರಂಜಿಸಲಿದ್ದಾರೆ. ಎಲ್ಲರೂ ತಪ್ಪದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೌರಕಾರ್ಮಿಕರ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಇಕ್ಬಾಲ್ ಹುಸೇನ್ ವಹಿಸಲಿದ್ದಾರೆ. ಮಾಜಿ ಶಾಸಕರಾದ ಸಿ.ಎಂ.ಲಿಂಗಪ್ಪ ಉಪಸ್ಥಿತರಿರುವರು. ಕರ್ನಾಟಕ ರಾಜ್ಯ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್, ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಎಸ್.ಗಂಗಾಧರ್, ಜಾನಪದ ಕಲಾವಿದರು, ರಂಗಭೂಮಿ ಹಾಡುಗಾರರಾದ ಜನಾರ್ಧನ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.100 ಇ- ಖಾತೆ ವಿತರಣೆ:
ಈವರೆಗೆ 24ನೇ ಇ-ಖಾತೆ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ ಎಂದು ಶಶಿ ಅವರು ತಿಳಿಸಿದರು. ಇಂದು ನೂರು ಮಂದಿ ಆಸ್ತಿ ಮಾಲೀಕರಿಗೆ ಇ-ಖಾತೆಗಳನ್ನು ಸೃಜಿಸಿ ವಿತರಿಸುತ್ತಿದ್ದೇವೆ. ವಾರ್ಡ್ ವಾರು ಖಾತೆ ಅಭಿಯಾನಗಳನ್ನು ಹಮ್ಮಿಕೊಳ್ಳುವ ಉದ್ದೇಶವಿತ್ತು. ಆದರೆ ನಗರಸಭೆ ಸಿಬ್ಬಂದಿಗಳನ್ನು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಕೆಲಸಕ್ಕೆ ನಿಯೋಜಿಸಿದ ಹಿನ್ನೆಲೆಯಲ್ಲಿ ಅಭಿಯಾನಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಿಲ್ಲ. ಅಲ್ಲದೆ ಸಾಲು ಸಾಲು ರಜಾ ದಿನಗಳು ಇದ್ದ ಕಾರಣ ಖಾತಾ ವಿತರಣೆ ಕಾರ್ಯದ ವೇಗ ತುಸು ಕುಂಟಿತಗೊAಡಿತ್ತು. ಮುಂದಿನ ದಿನಗಳಲ್ಲಿ ಖಾತಾ ಅಭಿಯಾನಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತದೆ ಎಂದು ಶೇಷಾದ್ರಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಖಾನ್, ಆಯುಕ್ತರಾದ ಜಯಣ್ಣ, ಸದಸ್ಯರಾದ ಅಜ್ಮತ್, ಆರ್‌ಒ ಕಿರಣ್ ಸೇರಿದಂತೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
27ಕೆಆರ್ ಎಂಎನ್ 2.ಜೆಪಿಜಿರಾಮನಗರ ನಗರಸಭೆ ಆವರಣದಲ್ಲಿ ನಡೆದ ಇ-ಖಾತಾ ಅಭಿಯಾನದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿರವರು ಸ್ವತ್ತಿನ ಮಾಲೀಕರಿಗೆ ಇ-ಖಾತಾ ದಾಖಲೆಗಳನ್ನು ವಿತರಿಸಲಾಯಿತು.
;Resize=(128,128))
;Resize=(128,128))
;Resize=(128,128))