ಸಾರಾಂಶ
ವೇಮನ ಸಾಹಿತ್ಯವನ್ನು ಕನ್ನಡಿಗರ ಮನೆ ಮನೆಗೆ ಮುಟ್ಟಿಸುವ ಶ್ರದ್ಧಾಪೂರ್ವಕ ಪ್ರಯತ್ನ ಮಾಡಿದವರು ವೇಮನಪ್ರಿಯ ಸೋಮ ಹುಲಕೋಟಿಯ ದಿ.ಎಸ್.ಆರ್. ಪಾಟೀಲರು. ವೇಮನರ ಸಾಹಿತ್ಯ ಕನ್ನಡಿಗರಿಗೆ ದೊರಕುವಲ್ಲಿ ದಿ.ಎಸ್.ಆರ್. ಪಾಟೀಲ ಕೊಡುಗೆ ಅಪಾರವಾದುದು ಎಂದು ಪ್ರೊ.ಎಸ್.ಆರ್. ಬಸಾಪೂರ ಹೇಳಿದರು.
ಮುಂಡರಗಿ: ವೇಮನ ಸಾಹಿತ್ಯವನ್ನು ಕನ್ನಡಿಗರ ಮನೆ ಮನೆಗೆ ಮುಟ್ಟಿಸುವ ಶ್ರದ್ಧಾಪೂರ್ವಕ ಪ್ರಯತ್ನ ಮಾಡಿದವರು ವೇಮನಪ್ರಿಯ ಸೋಮ ಹುಲಕೋಟಿಯ ದಿ.ಎಸ್.ಆರ್. ಪಾಟೀಲರು. ವೇಮನರ ಸಾಹಿತ್ಯ ಕನ್ನಡಿಗರಿಗೆ ದೊರಕುವಲ್ಲಿ ದಿ.ಎಸ್.ಆರ್. ಪಾಟೀಲ ಕೊಡುಗೆ ಅಪಾರವಾದುದು ಎಂದು ಪ್ರೊ.ಎಸ್.ಆರ್. ಬಸಾಪುರ ಹೇಳಿದರು.
ಅವರು ಶುಕ್ರವಾರ ತಹಸೀಲ್ದಾರ್ ಕಚೇರಿಯ ಸಭಾ ಭವನದಲ್ಲಿ ಆಯೋಜಿಸಿದ್ದ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ದಿ.ಎಸ್.ಆರ್. ಪಾಟೀಲ ಅವರು ವೇಮನರ ಸುಮಾರು 4 ಸಾವಿರ ವಚನಗಳನ್ನು ಹುಡುಕಿ ಕನ್ನಡಕ್ಕೆ ಭಾಷಾಂತರಿಸಿ ಅವುಗಳಿಗೆ ಟಿಪ್ಪಣೆ, ವಿಮರ್ಶೆಗಳನ್ನೆಲ್ಲ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ವೇಮನನ ಬೆಳವಣಿಗೆಯ ಹಿಂದೆ ಅತ್ತಿಗೆ ಹೇಮರಡ್ಡಿ ಮಲ್ಲಮ್ಮ ಹಾಗೂ ವೇಮನರ ಆತ್ಮೀಯ ಗೆಳೆಯನಾಗಿದ್ದ ಅಭಿರಾಮ ಇದ್ದರು. ಸರ್ವಜ್ಞ ಹಾಗೂ ವೇಮನ ಮತ್ತು ಅಂಬಿಗರ ಚೌಡಯ್ಯನವರ ವಚನಗಳು ವಿಶೇಷವಾಗಿದ್ದವು. ಮಲ್ಲಮ್ಮ ಅತ್ತಿಗೆಯಾಗಿದ್ದರೂ ತಾಯಿಯಂತೆ ವೇಮನನ್ನು ಕಾಣುತ್ತಿದ್ದಳು ಎಂದರು.ಪ್ರೊ. ಎ.ವೈ. ನವಲಗುಂದ ಮಾತನಾಡಿ, ತಪ್ಪು ಮಾಡುವುದು ಸಹಜ. ಆದರೆ ತಿದ್ದಿಕೊಂಡು ನಡೆಯುವುದು ಅವಶ್ಯವಾಗಿದೆ. ಶರಣರ ಪೂರ್ವಾಶ್ರಮದ ಬದುಕಿಗೂ ಅವರ ಸನ್ಯಾಸದ ಬದುಕಿಗೂ ತುಂಬಾ ವ್ಯತ್ಯಾಸವಿರುತ್ತದೆ. ನಿಸ್ವಾರ್ಥಕ್ಕಾಗಿ ಬದುಕುವವರೆಲ್ಲರೂ ಸಂತೃಪ್ತರಾಗುತ್ತಾರೆ. ಸಮಾಜಕ್ಕೆ ದುಡಿದು ಯಾರು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೆಯೋ ಅವರು ಶಾಶ್ವತವಾಗಿ ಉಳಿಯುತ್ತಾರೆ. ಜ್ಞಾನವನ್ನು ಕೊಡುವ ಕೀಲಿಯ ಕೈ ಎಂದರೆ ಗುರು ಮಾತ್ರ. ಅಂತಹ ಜ್ಞಾನವನ್ನು ವೇಮನರು ತಮ್ಮ ವಚನಗಳ ಮೂಲಕ ನಮಗೆಲ್ಲರಿಗೂ ನೀಡಿ ಹೋಗಿದ್ದಾರೆ ಎಂದರು.
ಗ್ರೇಡ್ 2. ತಹಸೀಲ್ದಾರ್ ಕೆ.ರಾಧಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪತಹಸೀಲ್ದಾರ ಎಸ್.ಎಸ್. ಬಿಚ್ಚಾಲಿ, ತಾಲೂಕು ರಡ್ಡಿ ಸಮಾಜದ ಅಧ್ಯಕ್ಷ ಡಾ.ಬಿ.ಎಸ್. ಮೇಟಿ, ಪಾಲಾಕ್ಷಿ ಗಣದಿನ್ನಿ, ಬಸವರಾಜ ಮುಂಡವಾಡ, ವಿಜಯಕುಮಾರ ಬಣಕಾರ, ಬಸವರಾಜ ನವಲಗುಂದ, ಮಂಜುನಾಥ ತಾಂಬ್ರಗುಂಡಿ, ಮಂಜುನಾಥ ಮುಧೋಳ, ಉಮೇಶ ಮೇಟಿ, ವಿಶ್ವನಾಥ ಪಾಟೀಲ, ಪಿ.ಎನ್. ಮೂಗನೂರು, ಪ್ರಭುಗೌಡ ಪಾಟೀಲ, ಬಾಬಣ್ಣ ಚೆನ್ನಳ್ಳಿ, ಮಲ್ಲನಗೌಡ ಪೊಲೀಸ್ ಪಾಟೀಲ, ಸುರೇಶ ಹೊಕ್ಕಳದ, ವೀರಣ್ಣ ಮೇಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.