ಸಾರಾಂಶ
ಡಿ. 5 ರಿಂದ ನಿತ್ಯ ಸಂಜೆ 11 ಬಾರಿ ಹನುಮಾನ ಚಾಲೀಸಾ ಪಠಣ ಕಾರ್ಯಕ್ರಮ ನಡೆಯುತ್ತ ಬಂದಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಅಯೋಧ್ಯೆಯ ಶ್ರೀರಾಮನ ಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಜ. 20ರ ಸಂಜೆ 5.30ಕ್ಕೆ ಬೆಳಗಾವಿಯ ಸರ್ದಾರ ಮೈದಾನ ಹಾಗೂ ಟಿಳಕವಾಡಿ ವ್ಯಾಕ್ಸಿನ ಡಿಪೋ ಮೈದಾನದಲ್ಲಿ ಏಕ ಕಾಲಕ್ಕೆ ಏಕ ಸ್ವರದಲ್ಲಿ ಹನುಮಾನ ಚಾಲೀಸಾ ಪಠಣ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದು ಪರಿಷತ್ ಮುಖಂಡ ಕೃಷ್ಣ ಭಟ್ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮ ಚರಣಕ್ಕೆ ಲಕ್ಷ ಲಕ್ಷ ಹನುಮಾನ ಚಾಲೀಸಾ ಪಠಣ ಸಮರ್ಪಣೆ ಮಾಡುವ ಐತಿಹಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಡಿ. 5 ರಿಂದ ನಿತ್ಯ ಸಂಜೆ 11 ಬಾರಿ ಹನುಮಾನ ಚಾಲೀಸಾ ಪಠಣ ಕಾರ್ಯಕ್ರಮ ನಡೆಯುತ್ತ ಬಂದಿದೆ. ಮಹಿಳೆಯರು, ಮಕ್ಕಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ, ವಿಶ್ವ ಹಿಂದು ಪರಿಷತ್ ಕಾರ್ಯಾಲಯದಲ್ಲಿಯೂ ಹನುಮಾನ ಚಾಲೀಸಾ ಪಠಣ ನಡೆಯುತ್ತಿದೆ. ಈವರೆಗೆ 51 ಸಾವಿರ ಹನುಮಾನ ಚಾಲೀಸಾ ಪಠಣ ಪೂರ್ಣಗೊಂಡಿದೆ ಎಂದು ಹೇಳಿದರು.ವಿಎಚ್‌ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ ಕದಂ, ಮುನಿಸ್ವಾಮಿ ಭಂಡಾರಿ, ಆನಂದ ಕರಲಿಂಗಣ್ಣವರ, ಜೇಟಾಬಾಯಿ ಪಟೇಲ್, ರಾಜೇಶ್ವರಿ ಸಂಬರಗಿಮಠ, ಡಾ. ಸುಭಾಷ ಪಾಟೀಲ ಇದ್ದರು.