ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣಿಕರೋರ್ವರು ಬಿಟ್ಟು ಹೋಗಿದ್ದ ಬೆಲೆ ಬಾಳುವ ವಸ್ತುಗಳನ್ನು ವಿಮಾನ ನಿಲ್ದಾಣದ ಸಿಬ್ಬಂದಿ ಪತ್ತೆ ಹಚ್ಚಿ ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಭಾನುವಾರ ಬೆಳಗ್ಗೆ ನಿಲ್ದಾಣದ ಭದ್ರತಾ ತಂಡದ ವಿಠಲ್ ಹೊಸಮನಿ ಅವರು ನಿಲ್ದಾಣದ ನೆಲ ಮಹಡಿಯ ಪಾರ್ಕಿಂಗ್ ಪ್ರದೇಶದಲ್ಲಿ ಬ್ಯಾಗೇಜ್ ಟ್ರಾಲಿಯಲ್ಲಿ ಕಪ್ಪು ಬಣ್ಣದ ಸಣ್ಣ ಪರ್ಸ್ ಇರುವುದನ್ನು ಗಮನಿಸಿದ್ದು, ಈ ಬಗ್ಗೆ ಅವರು ಸಿಐಎಸ್‌ಎಫ್‌ಗೆ ಮಾಹಿತಿ ನೀಡಿದರು. ಪರಿಶೀಲನಾ ತಂಡ ಸುರಕ್ಷತೆ ದೃಷ್ಟಿಯಿಂದ ಪರಿಶೀಲನೆ ನಡೆಸಿದ್ದು, ಯಾವುದೇ ಶಂಕಿತ ಅಂಶ ಇಲ್ಲ ಎಂಬುದು ದೃಢಪಟ್ಟಿದ್ದು, ಅಲ್ಲಿ ಪರ್ಸ್ ಇರುವುದು ಕಂಡುಬಂದಿದ್ದು, ಅದರಲ್ಲಿ ನಿಶಾಲ್ ಶಾಹಿಕ್ ಹೆಸರಿನ ಒಂದು ಪಾಸ್‌ಪೋರ್ಟ್, ಒಂದು ಐಫೋನ್, ಒಂದು ಚಿನ್ನದ ಉಂಗುರ, 500 ದಿರ್ಹಮ್‌ಗಳು (ಅಂದಾಜು 11,000 ರು.), 10,000 ಡಾಲರ್‌ಗಳು (ಅಂದಾಜು 9,00,000 ಲಕ್ಷ ರು.), 1 ಬೋರ್ಡಿಂಗ್ ಪಾಸ್, ಬ್ಯಾಂಕ್ ಕಾರ್ಡ್‌ಗಳು ಪತ್ತೆಯಾಗಿತ್ತು.ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆ ವ್ಯಕ್ತಿ ಆ ವೇಳೆಗೆ ವಿಮಾನ ನಿಲ್ದಾಣದಿಂದ ಹೊರಟು ಹೋಗಿರುವುದು ಕಂಡುಬಂದಿದೆ. ಬೋರ್ಡಿಂಗ್ ಪಾಸ್ ಸಹಾಯದಿಂದ ಪ್ರಯಾಣಿಕನ ಸಂಪರ್ಕ ಸಂಖ್ಯೆ ಪತ್ತೆಹಚ್ಚಿ ಪ್ರಯಾಣಿಕನನ್ನು ಸಂಪರ್ಕಿಸಿ ಮಾಹಿತಿ ನೀಡಲಾಯಿತು. ಅವರು ಬೆಲೆಬಾಳುವ ವಸ್ತುಗಳನ್ನು ಹೊಂದಿರುವ ತಮ್ಮ ಪರ್ಸ್ ಅನ್ನು ವಿಮಾನ ನಿಲ್ದಾಣದಲ್ಲಿಯೇ ಬಿಟ್ಟಿ ಹೋಗಿರುವುದಾಗಿ ತಿಳಿಸಿದ್ದಾರೆ.ನಿಶಾಲ್ ಶಾಹಿಕ್ ಅವರು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ದುಬೈನಿಂದ ಮಂಗಳೂರಿಗೆ ಬೆಳಗ್ಗೆ ಆಗಮಿಸಿದ್ದರು. ಮಾಹಿತಿ ನೀಡಿದ ಸ್ವಲ್ಪ ಸಮಯದ ನಂತರ, ಪ್ರಯಾಣಿಕನು ವಿಮಾನ ನಿಲ್ದಾಣಕ್ಕೆ ಹಿಂತಿರುಗಿದ್ದು, ಸೂಕ್ತ ಪರಿಶೀಲನೆ ನಂತರ ಶಿಷ್ಟಾಚಾರದ ಪ್ರಕಾರ ಸಿಐಎಸ್‌ಎಫ್ ರಿಜಿಸ್ಟರ್‌ನಲ್ಲಿ ನಮೂದಿಸಿದ ನಂತರ ಪರ್ಸ್ ಅನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ವಿಮಾನ ನಿಲ್ದಾಣದ ಸಿಬ್ಬಂದಿಯಯನ್ನು ಶ್ಲಾಘಿಸಲಾಯಿತು.ಬೆಲೆ ಬಾಳುವ ವಸ್ತುಗಳನ್ನು ವಾರಸುದಾರರಿಗೆ ಮರಳಿಸಿದ ಸಿಬ್ಬಂದಿ
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣಿಕರೋರ್ವರು ಬಿಟ್ಟು ಹೋಗಿದ್ದ ಬೆಲೆ ಬಾಳುವ ವಸ್ತುಗಳನ್ನು ವಿಮಾನ ನಿಲ್ದಾಣದ ಸಿಬ್ಬಂದಿ ಪತ್ತೆ ಹಚ್ಚಿ ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.