ಭದ್ರಾ ಮೇಲ್ದಂಡೆ: ಗುತ್ತಿಗೆದಾರರಿಗೆ 2114 ಕೋಟಿ ಬಾಕಿ!

| Published : Jul 11 2024, 01:34 AM IST

ಸಾರಾಂಶ

state, central clash for Bhadra plan

ಕೇಂದ್ರ, ರಾಜ್ಯ ಸರ್ಕಾರದ ಕಿತ್ತಾಟದಲ್ಲಿ ಬಸವಳಿದ ಯೋಜನೆ

ಕಾಮಗಾರಿ ಸ್ಥಳದಿಂದ ಕಾಲ್ಕಿಳಲು ಸಜ್ಜಾದ ಗುತ್ತಿಗೆದಾರಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಅನುದಾನದ ಕೊರತೆ ಕಾರಣಕ್ಕೆ ತೀವ್ರ ಪ್ರಮಾಣದಲ್ಲಿ ಕುಂಠಿತಗೊಂಡಿದ್ದು ಸಾಲದ ಬಾಧೆ ತಾಳಲಾರದೆ ಗುತ್ತಿಗೆದಾರರು ಕಾಲ್ಕೀಳಲು ರೆಡಿಯಾಗಿದ್ದಾರೆ. ಬಾಕಿ ಮೊತ್ತ ಪಾವತಿಸದ ಹೊರತು ಗುತ್ತಿಗೆದಾರರಿಂದ ಕೆಲಸ ತೆಗೆದುಕೊಳ್ಳುವುದು ಜಲ ಸಂಪನ್ಮೂಲ ಇಲಾಖೆ ಅಧಿಕಾರಿಳಿಗೆ ಸಾಕಾಗಿದೆ.

ಜಲ ಸಂಪನ್ಮೂಲ ಇಲಾಖೆ ಮೂಲಗಳ ಪ್ರಕಾರ ಭದ್ರಾ ಮೇಲ್ದಂಡೆ ಯೋಜನೆ ಪೆಂಡಿಂಗ್ ಬಿಲ್‌ಗಳು 2114 ಕೋಟಿ (ಭೂ ಸ್ವಾಧೀನ ಸೇರಿ) ಯಷ್ಟಿದ್ದು ಕಾಮಗಾರಿ ಮುಂದುವರಿಸಲು ಅಧಿಕಾರಿಗಳು ಹೈರಾಣವಾಗಿದ್ದಾರೆ. ಭದ್ರಾ ಮೇಲ್ದಂಡೆಗೆ ಕೇಂದ್ರ ಸರ್ಕಾರದ 5300 ಕೋಟಿ ರು ಅನುದಾನದ ಭರವಸೆ ನಚ್ಚಿ ಕುಳಿತಿರುವ ರಾಜ್ಯ ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಬಿಡಿಗಾಸು ನೀಡಿಲ್ಲ. ಅಗಾಧ ಪ್ರಮಾಣದಲ್ಲಿ ಬಿಲ್ಲುಗಳು ಬಾಕಿ ಇರುವುದರಿಂದ ಗುತ್ತಿಗೆದಾರ ಆಸಕ್ತಿ ಕಳೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಅನುದಾನ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹಾಕುತ್ತಿದೆಯೇ ವಿನಹ ತನ್ನ ಪಾಲಿನ ಜವಾಬ್ದಾರಿ ಮೆರೆಯುತ್ತಿಲ್ಲ.

ಭದ್ರಾ ಮೇಲ್ದಂಡೆ ಕಡೂರು ವಿಭಾಗದದಲ್ಲಿ ರು. 125.23 ಕೋಟಿ, ಬಿಆರ್‌ಪಿ ವಿಊಾಹ ನಂ 2ರಲ್ಲಿ ರು. 30.85 ಕೋಟಿ, ವಿಭಾಗ ನಂ. 3 ಅಜ್ಜಂಪುರದಲ್ಲಿ 70.22 ಕೋಟಿ, ವಿಭಾಗ ನಂ. 4 ಹೊಸದುರ್ಗದಲ್ಲಿ 355.05 ಕೋಟಿ, ವಿಭಾಗ 5 ಚಿತ್ರದುರ್ಗದಲ್ಲಿ 62.35 ಕೋಟಿ, ವಿಭಾಗ ನಂ. 6 ಚಳ್ಳಕೆರೆಯಲ್ಲಿ 357.12 ಕೋಟಿ , ವಿಭಾಗ ನಂ. 7 ಹಿರಿಯೂರು 164.79 ಕೋಟಿ, ವಿಭಾಗ ನಂ. 9 ಸಿರಾ 457.78 ಕೋಟಿ ರು ಬಾಕಿ ಇದೆ. ಇದಲ್ಲದೇ ಭೂ ಸ್ವಾಧೀನಕ್ಕೆ ಭದ್ರಾ ಮೇಲ್ದಂಡೆ ವಿಶೇಷ ಭೂ ಸ್ವಾಧಿನ ಅಧಿಕಾರಿಗೆ 289.25 ಕೋಟಿ, ತರಿಕೆರೆ ಉಪ ವಿಭಾಗಾಧಿಕಾರಿಗೆ 227.38 ಕೋಟಿ ರು. ಪಾವತಿ ಮಾಡಬೇಕಿದೆ.16.10 ಕೋಟಿ ರು ವಿದ್ಯುತ್ ಬಿಲ್ ಬಾಕಿ

ಭದ್ರಾ ಮೇಲ್ಲಂಡೆ ಯೋಜನೆಯಡಿ ಈಗಾಗಲೇ ಮೂರ್ನಾಲ್ಕು ಬಾರಿ ಲಿಫ್ಟ್‌ ಮೂಲಕ ನೀರನ್ನು ಎತ್ತಿ ವಿವಿ ಸಾಗರ ಜಲಾಶಯಕ್ಕೆ ಹರಿಸಲಾಗಿದೆ. ಮಳೆಗಾಲ ಇದೀಗ ತಾನೇ ಶುರುವಾಗಿದ್ದು ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. ಜಲಾಶಯದ ನೀರಿನ ಸಂಗ್ರಹ 124 ಅಡಿ ದಾಟಿದೆ. ಇದೇ ಪ್ರಮಾಣದಲ್ಲಿ ಮಳೆ ಮುಂದುವರಿದರೆ ಜಲಾಶಯ ಭರ್ತಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಅಬ್ಬಿನಹೊಳಲು ಬಳಿ ಅರೆ ಬರೆ ಕಾಮಗಾರಿ ಆಗಿರುವುದರಿಂದ ಹಾಗೊಂದು ವೇಳೆ ಮಾಡಿದರೂ ಹೊಳಲ್ಕೆರೆ ತಾಲೂಕಿನ ಕೆರೆಗಳಿಗೆ ನೀರು ಹರಿಯುುವುದು ಕಷ್ಟ ಸಾಧ್ಯ. ಎಂದಿನಂತೆ ತುಮಕೂರು ಬ್ರಾಂಚ್ ಕಾಲುವೆ ಮೂಲಕ ವಿವಿ ಸಾಗರ ಜಲಾಶಯಕ್ಕೆ ನೀರು ಹಾಯಿಸಬೇಕಿದೆ.

ಭದ್ರಾ ಜಲಾಶಯದಿಂದ ಎರಡು ಕಡೆ ನೀರನ್ನು ಲಿಫ್ಟ್ ಮಾಡಲಾಗುತ್ತದೆ. ಶಾಂತಿಪುರ ಮತ್ತು ಬೆಟ್ಟದಾವರೆ ಬಳಿ ಲಿಫ್ಟಿಂಗ್ ಪಾಯಿಂಟ್ ಇದೆ. ಎರಡೂ ಲಿಫ್ಟ್ ಗಳಿಂದ ಒಟ್ಟು 16.10 ಕೋಟಿ ಯಷ್ಟು ವಿದ್ಯುತ್ ಬಿಲ್ಲನ್ನು ವಿಶ್ವೇಶ್ವರಯ್ಯ ನೀರಾವರಿ ನಿಗಮದವರು ಬೆಸ್ಕಾಂ ಗೆ ಪಾವತಿಸಬೇಕಿದೆ. ಮಳೆಗಾಲದ ಮುನ್ಸೂಚನೆ ಗಮನಿಸಿ ಲಿಫ್ಟ್ ಮಾಡಲು ನಿಗಮದ ಅಧಿಕಾರಿಗಳು ಸಜ್ಜಾಗಿದ್ದಾರೆ. ಬೆಸ್ಕಾಂನವರು ಬಾಕಿ ಬಿಲ್ ಪಾವತಿಸುವಂತೆ ಅಡ್ಡಗಾಲು ಹಾಕಿದರೆ ಹೇಗೆ ಎಂಬ ಪ್ರಶ್ನೆಗಳು ಎದುರಾಗಿವೆ.

-------

ಕೋಟ್

ಎರಡು ಸಾವಿರ ಕೋಟಿ ರುಪಾಯಿಯಷ್ಟು ಅಗಾಧ ಪ್ರಮಾಣದ ಬಿಲ್ಲುಗಳ ಬಾಕಿ ಉಳಿಸಿಕೊಂಡರೆ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸುವುದು ಕಷ್ಟದ ಕೆಲಸ. ರಾಜ್ಯ ಸರ್ಕಾರ ಕೇಂದ್ರದ ಅನುದಾನ ನಿರೀಕ್ಷಿಸಿ ಕೈ ಕಟ್ಟಿ ಕುಳಿತುಕೊಳ್ಳುವುದು ತರವಲ್ಲ. ಕೇಂದ್ರದ 5300 ಕೋಟಿ ರು. ನಲ್ಲಿ ಕಾಮಗಾರಿ ಮುಗಿಯುವುದಿಲ್ಲ. ಹಾಗಾಗಿ ತನ್ನ ಜವಾಬ್ದಾರಿ ಮೆರೆಯಲಿ. ಗುತ್ತಿಗೆದಾರ ಬಾಕಿ ಬಿಲ್ಲುಗಳ ಹೊರೆಯಿಂದ ಕಾಲ್ಕೀಳುವ ಸಾಧ್ಯತೆ ಹೆಚ್ಚಿರುತ್ತದೆ. ಮತ್ತೆ ಅವರನ್ನು ಕರೆದುಕೊಂಡು ಬಂದು ಕೆಲಸಕ್ಕೆ ಹಚ್ಚುವುದು ಕಷ್ಟ ಸಾಧ್ಯ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬದ್ಧತೆ ಮೆರೆಯಲಿ. ಸರ್ಕಾರಗಳ ಎಚ್ಚರಿಸಲು ಹೋರಾಟ ಸಮಿತಿ ಬೀದಿಗಿಳಿಯುವುದು ಅನಿವಾರ್ಯವಾಗುತ್ತದೆ.

-------

ಬಿ.ಎ.ಲಿಂಗಾರೆಡ್ಡಿ,

ಕಾರ್ಯಾಧ್ಯಕ್ಷ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ

(ಪೋಟೋ ಫೈಲ್ ನೇಮ್-ಲಿಂಗಾರೆಡ್ಡಿ)

-----------------

ಪೋಟೋ ಕ್ಯಾಪ್ಸನ್

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಬೆಟ್ಟದಾವರೆ ಬಳಿ ಇರುವ ಭದ್ರಾ ಲಿಫ್ಟ್ ಪಾಯಿಂಟ್

-8ಸಿಟಿಡಿ7-