ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಯಶಸ್ವಿ

| Published : Feb 10 2024, 01:49 AM IST

ಸಾರಾಂಶ

ಜೆಎಸ್ಸೆಸ್‌ ಕಾಲೇಜು ಆವರಣದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸಮಾರೋಪಗೊಂಡಿತು.

ಧಾರವಾಡ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಇಲ್ಲಿಯ ವಿದ್ಯಾಗಿರಿ ಜೆಎಸ್ಸೆಸ್‌ ಕಾಲೇಜು ಆವರಣದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸುಸೂತ್ರವಾಗಿ ಸಮಾರೋಪಗೊಂಡಿತು. 23 ವೈಯಕ್ತಿಕ ಹಾಗೂ ಎರಡು ಸಾಮೂಹಿಕ ಸ್ಫರ್ಧೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಓರೆಗೆ ಹಚ್ಚಿದರು.

ಜಾನಪದ ನೃತ್ಯ ಸ್ಪರ್ಧೆಯಲ್ಲಿ ಅಕ್ಕಿಆಲೂರು ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ಪ್ರಥಮ, ಶಿವಮೊಗ್ಗ ಜಿಲ್ಲೆಯ ತೀರ್ಥದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ, ಧಾರವಾಡ ಜಿಲ್ಲೆಯ ಕುಂದಗೋಳ ಬೆಟ್ಟದೂರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳ ತಂಡ ತೃತೀಯ ಸ್ಥಾನ ಪಡೆಯಿತು.

ಕವಾಲಿ ಸ್ಪರ್ಧೆಯಲ್ಲಿ ಹೆಬ್ಬಳ್ಳಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳ ತಂಡ ಪ್ರಥಮ, ಬಂಟ್ವಾಳ ಎಸ್.ವಿ.ಎಸ್. ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ದ್ವಿತೀಯ ಹಾಗೂ ಕಳಸ (ಚಿಕ್ಕಮಗಳೂರು) ಜೆ.ಇ.ಎಂ. ಪ್ರೌಢ ಶಾಲೆಯ ವಿದ್ಯಾರ್ಥಿಗಳ ತಂಡ ತೃತೀಯ ಸ್ಥಾನ ಪಡೆಯಿತು.

ಕನ್ನಡ ಭಾಷಣ ಸ್ಪರ್ಧೆಯಲ್ಲಿ ಶೃಂಗೇರಿಯ ಜ್ಞಾನಭಾರತಿ ವಿದ್ಯಾಕೇಂದ್ರದ ರವಿಕೀರ್ತಿ ಹೆಬ್ಬಾರ ಪ್ರಥಮ, ಹೊಸನಗರದ ಗುರೂಜಿ ಇಂಟರ್ ನ್ಯಾಷನಲ್ ಶಾಲೆಯ ಐಶ್ವರ್ಯಾ ವಿ.ಎನ್. ದ್ವಿತೀಯ, ಕಾರ್ಕಳದ ಜೆಎಸ್ಸೆಸ್ಸ್ ಆಂಗ್ಲ ಮಾಧ್ಯಮ ಶಾಲೆಯ ಆದ್ಯಾ ಪಡ್ರೆ ತೃತೀಯ ಸ್ಥಾನ ಪಡೆದಿದರು. ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಕಲಬುರ್ಗಿಯ ಪಬ್ಲಿಕ್ ಸ್ಕೂಲನ ಕ್ಷೀತಿ ಪಾಟೀಲ ಪ್ರಥಮ, ಮೈಸೂರಿನ ಗುಡ್ ಶಫರ್ಡ ಕಾನ್ವೆಂಟ್ ಶಾಲೆಯ ಇಷಾ ಮಾರಿಯಮ್ಮ ದ್ವಿತೀಯ, ದೊಡ್ಡಬಾನಹಳ್ಳಿಯ ಸರ್ಕಾರಿ ಶಾಲೆಯ ರಂಜನಾ ಎಸ್. ತೃತೀಯ ಸ್ಥಾನ ಪಡೆದರು. ಹಿಂದಿ ಭಾಷಣ ಸ್ಪರ್ಧೆಯಲ್ಲಿ ಉಡುಪಿಯ ಬಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ಸಮೃದ್ಧಿ ಸಿಂಗ್ ಪ್ರಥಮ, ಶೃಂಗೇರಿಯ ಜೆ.ಸಿ. ಶಾಲೆಯ ಪ್ರಜ್ಞಾ ಎಂ.ಆರ್. ದ್ವಿತೀಯ, ಯರಮರಸದ ಆದರ್ಶ ವಿದ್ಯಾಲಯದ ವಿಜಯಕುಮಾರ ತೃತೀಯ ಸ್ಥಾನ ಪಡೆದರು.

ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ಬೈರುಂಬೆಯ ಶಾರದಂಬಾ ಆಂಗ್ಲ ಮಾಧ್ಯಮ ಶಾಲೆಯ ಪ್ರಜ್ಞಾ ಭಟ್ಟ ಪ್ರಥಮ, ಬಂಟ್ವಾಳದ ಎಸ್.ವಿ.ಎಸ್. ದೇವಳ ಆಂಗ್ಲ ಶಾಲೆಯ ಪ್ರಾರ್ಥನ ಮಲ್ಯ ದ್ವಿತೀಯ, ಕೋಟದ ವಿವೇಕ ಬಾಲಕಿಯರ ಪ್ರೌಢಶಾಲೆಯ ವಾರಣಿ ಅಡಿಗ ತೃತೀಯ ಸ್ಥಾನ ಪಡೆದರು. ಉರ್ದು ಭಾಷಣ ಸ್ಪರ್ಧೆಯಲ್ಲಿ ಬೆಂಗಳೂರು ಉತ್ತರದ ಕುವೈತುಲಾ ಇಸ್ಲಾಂ ಪ್ರೌಢಶಾಲೆಯ ಮಹಮ್ಮದ್ ಅನೀಫ ಮುಲ್ಲಾ ಪ್ರಥಮ, ಹುಬ್ಬಳ್ಳಿಯ ಅಲ್. ಅಮೀನ್ ಉರ್ದು ಶಾಲೆಯ ಶಬ್ಬೀರ ಅಹ್ಮದ ಗೊರೇಖಾನ್ ದ್ವಿತೀಯ ಹಾಗೂ ಜಮಖಂಡಿಯ ಸರ್ಕಾರಿ ಉರ್ದು ಪ್ರೌಢಶಾಲೆಯ ಉಮ್ಮೇ ಐಮನ್ ಹುಂಡೇಕಾರ ತೃತೀಯ ಸ್ಥಾನ ಪಡೆದರು. ಮರಾಠಿ ಭಾಷಣ ಸ್ಪರ್ಧೆಯಲ್ಲಿ ಅಕ್ಕೊಳ ಪ್ರೌಢಶಾಲೆಯ ವಿದ್ಯಾರ್ಥಿ ಸೇಜಲ ಚವ್ಹಾಣ, ಬೆಳಗಾವಿಯ ಬಾಲಿಕಾ ಆದರ್ಶ ವಿದ್ಯಾಲಯದ ಸಮೃದ್ಧಿ ಪಾಟೀಲ, ಕಲಬುರ್ಗಿ ದಕ್ಷಿಣದ ಎನ್.ವಿ. ಬಾಲಕರ ಪ್ರೌಢಶಾಲೆಯ ಸಮೃದ್ಧಿ ಪವಾರ ಬಹುಮಾನ ಪಡೆದರು.

ತೆಲುಗು ಭಾಷಣ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಎಸ್.ಬಿ.ವೈ. ಪ್ರೌಢಶಾಲೆಯ ಎನ್. ಆಶ್ರೀತಾ ಲಕ್ಷ್ಮಿ, ದೊಡ್ಡಬಳ್ಳಾಪುರದ ಸರ್ಕಾರಿ ತೆಲುಗು ಪ್ರೌಢಶಾಲೆಯ ಎಸ್. ನಿಹಾರಿಕಾ, ಬಳ್ಳಾರಿಯ ಸರ್ಕಾರಿ ಪ್ರೌಢಶಾಲೆ ಹಂಪಮ್ಮ ಬಹುಮಾನ ಪಡೆದರು. ತಮಿಳು ಭಾಷಣ ಸ್ಪರ್ಧೆಯಲ್ಲಿ ಬೆಂಗಳೂರು ಉತ್ತರದ ಸರ್ಕಾರಿ ಪ್ರೌಢಶಾಲೆಯ ಸಂಜನಾ ಕೆ., ಹುಬ್ಬಳ್ಳಿಯ ಕಾನ್ವೆಂಟ್ ಪ್ರೌಢಶಾಲೆಯ ಅರ್ಚನಾ ಎಸ್., ಭದ್ರಾವತಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಲಾವಣ್ಯಾ ಸಿ., ಬಹುಮಾನ ಪಡೆದರು. ಕೊಂಕಣಿ ಭಾಷಣ ಸ್ಪರ್ಧೆಯಲ್ಲಿ ಮೂಡುಬೆಳ್ಳೆ ಸಂತ ಲಾರೆನ್ಸ್ ಪಿಯು ಕಾಲೇಜಿನ ಹನಿಶಾ ಅರಾನ್ನಾ, ಕೊಪ್ಪದ ಜ್ಞಾನವಾಹಿನಿ ಪ್ರೌಢಶಾಲೆಯ ಶ್ರೇಯಾ ನಾಯಕ, ಹುಬ್ಬಳ್ಳಿಯ ಜಿ.ವಿ.ಜೋಶಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಶ್ರೇಯಾ ಪ್ರಭು ಬಹುಮಾನ ಪಡೆದರು.

ಹಾಗೆಯೇ, ತುಳು ಭಾಷಣ ಸ್ಪರ್ಧೆಯಲ್ಲಿ ಉಚ್ಚಿಲದ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಹಿರಿಯ ಪ್ರಥಮಿಕ ಶಾಲೆಯ ನಿಧಿ ಶೆಟ್ಟಿ, ಕೊಪ್ಪದ ಜ್ಞಾನವಾಹಿನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಜಿವಿತಾ ಶೆಟ್ಟಿ, ಧರ್ಮಸ್ಥಳ ಮಂಜನಾಥೇಶ್ವರ ಪ್ರೌಢಶಾಲೆಯ ಕೀರ್ತನ ಬಹುಮಾನ ಪಡೆದರು.

ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಕುಂದಾಪುರದ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಯುಕ್ತಾ ಹೊಳ್ಳ, ಬಿಸಗೊಡದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಪ್ರಸಾದಿನಿ ಭಟ್ಟ, ತೀರ್ಥಹಳ್ಳಿಯ ವಾಗ್ದೇವಿ ಪ್ರೌಢಶಾಲೆಯ ಸಾನಿಕಾ ಎಂ. ಹೆಗಡೆ ಬಹುಮಾನ ಪಡೆದರು. ಧಾರ್ಮಿಕ ಪಠಣ ಅರೇಬಿಕ್ ಭಾಷಣ ಸ್ಪರ್ಧೆಯಲ್ಲಿ ಮರ್ಕಲಕೊಪ್ಪ ಅಲ್ ಫಲಾ ಪ್ರೌಢಶಾಲೆಯ ಮದಿಹಾ ಅಲ್‌ಹಾ, ಕುಡಚಿ ಯು.ಎಚ್.ಪಿ.ಎಸ್.ಪಿ.ಎಂ. ಶಾಲೆಯ ಬರೀರಾಹ ಮುಜಾವರ ಹಾಗೂ ಶಿವಮೊಗ್ಗ ಅಲ್ ಮಹಮ್ಮದ್ ಪ್ರೌಢಶಾಲೆ ಅಜ್ಮಲ್ ಷರೀಫ್‌ ಬಹುಮಾನ ಪಡೆದರು. ಇದೇ ರೀತಿ ಜಾನಪದ ಗೀತೆ, ಭಾವಗೀತೆ, ಭರತ ನಾಟ್ಯ, ಛದ್ಮ ವೇಷ, ಚಿತ್ರಕಲೆ, ಮಿಮಿಕ್ರಿ,

ರಂಗೋಲಿ, ಕವನ ಪದ್ಯವಾಚನ, ಆಶುಭಾಷಣ, ರಸಪ್ರಶ್ನೆ ಸ್ಪರ್ಧೆ ಅಂತಹ 26 ವೈಯಕ್ತಿಕ ಸ್ಪರ್ಧೆಗಳಲ್ಲಿ ಮಕ್ಕಳು ವಿಜೇತರಾದರು.