ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ ಸಚಿವ ನಾ.ರಾ.ಲೋಕೇಶ್ ಹಾಗೂ ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ಸೋಮವಾರ ನಗರದ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಗೆ ಭೇಟಿ ನೀಡಿ ಡಿಜಿಟಲ್ ಸೇವೆ ಹಾಗೂ ಸೌಲಭ್ಯ ವೀಕ್ಷಿಸಿದರು.ಇಲಾಖೆಯ ಆವರಣದಲ್ಲಿ ಸ್ಥಾಪಿಸಿರುವ ಟಾಟಾ ಡಿಜಿಟಲ್ ನರ್ವ್ ಕೇಂದ್ರದಲ್ಲಿನ (ಡಿಐಎನ್‌ಸಿ) ಸೌಲಭ್ಯ, ಕಾರ್ಯವೈಖರಿ, ತಂತ್ರಜ್ಷಾನ ವ್ಯವಸ್ಥೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಆಂಧ್ರದಲ್ಲೂ ಸ್ಥಾಪಿಸುವ ಉದ್ದೇಶ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸತ್ಯಕುಮಾರ್ ಯಾದವ್, ‘ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನಿರ್ದೇಶನದ ಮೇರೆಗೆ ಡಿಜಿಟಲ್ ನರ್ವ್ ಕೇಂದ್ರ ವೀಕ್ಷಿಸಿ ಮಾಹಿತಿ ಪಡೆದಿದ್ದೇವೆ. ಈ ಕೇಂದ್ರವು ಕೋಲಾರ ಜಿಲ್ಲೆಯ ಜನರ ಆರೋಗ್ಯ ವಿಚಾರದಲ್ಲಿ ಯಾವ ರೀತಿ ಬದಲಾವಣೆ ತಂದಿದೆ, ಹೇಗೆ ಕಾರ್ಯನಿರ್ವಹಿಸುತ್ತಿದೆ, ಯಾವ ರೀತಿ ಟೆಲಿ ಕನ್ಸಲ್ಟೆನ್ಸಿ ಸೇವೆ ನೀಡುತ್ತಿದ್ದಾರೆ ಎಂಬುದನ್ನು ತಿಳಿದುಕೊಂಡಿದ್ದೇವೆ. ಆಂಧ್ರಪ್ರದೇಶದ ಜಿಲ್ಲೆಗಳಲ್ಲೂ ಈ ವ್ಯವಸ್ಥೆ ಅಳವಡಿಸಬಹುದು’ ಎಂದರು.‘ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ಕೊಡುವ, ಜಾಗೃತಿ ನೀಡುವ ಕೆಲಸವನ್ನೂ ಈ ಕೇಂದ್ರದಲ್ಲಿ ಮಾಡಲಾಗುತ್ತಿದೆ. ರೋಗಿಗಳ ಡೇಟಾ ಸಂಗ್ರಹ ಮೂಲಕ ಯಾವ ರೀತಿ ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆ ತರಬಹುದು ಎಂಬ ನಿಟ್ಟಿನಲ್ಲಿ ಆಂಧ್ರದಲ್ಲೂ ಕೆಲಸ ನಡೆಯುತ್ತಿದೆ. ಈಗಾಗಲೇ ನಮ್ಮ ರಾಜ್ಯದ ಒಟ್ಟಿ ಜನಸಂಖ್ಯೆಯಲ್ಲಿ ಶೇ. ೭೯ ರಷ್ಟು ಮಂದಿಗೆ ‘ಅಭಾ‘ ಗುರುತಿನ ಚೀಟಿನ ನೀಡಲಾಗಿದೆ’ ಎಂದು ಹೇಳಿದರು.ಮನೆ ಬಾಗಿಲಿಗೇ ಔಷಧ ಪೂರೈಕೆ‘ಆಂಧ್ರದಲ್ಲಿ ೧೦ ಸಾವಿರಕ್ಕೂ ಅಧಿಕ ಆಯುಷ್ಮಾನ್ ಆರೋಗ್ಯ ಮಂದಿರಗಳು ಹಾಗೂ ೧,೮೦೦ ಪಿಎಚ್‌ಸಿಗಳು ಇವೆ. ರೋಗಗಳ ಸಂಬಂಧ ನಮ್ಮಲ್ಲಿ ಸಮೀಕ್ಷೆ ಕೂಡ ನಡೆಯುತ್ತಿದೆ. ಇದರಿಂದ ತಪಾಸಣೆ ಹಾಗೂ ಚಿಕಿತ್ಸೆಗೆ ಸುಲಭವಾಗುತ್ತದೆ. ಬೇಗನೇ ಚಿಕಿತ್ಸೆ ನೀಡಿ ಮರಣ ಪ್ರಮಾಣ ಕಡಿಮೆ ಮಾಡಬಹುದು. ಆಂಧ್ರದಲ್ಲಿ ತಾಯಿ ಹಾಗೂ ಶಿಶು ಮರಣ ಪ್ರಮಾಣ ಕಡಿಮೆ ಮಾಡುವ ಗುರಿ ಹೊಂದಿದ್ದೇವೆ. ಮನೆ ಬಾಗಿಲಿಗೆ ಔಷಧ ಪೂರೈಕೆಯಲ್ಲಿ ತೊಡಗಿದ್ದೇವೆ’ ಎಂದರು.ನಂತರ ತಾಲೂಕಿನ ವೇಮಗಲ್ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಶೆಟ್ಟಿಹಳ್ಳಿ ಆಯುಷ್ಮಾನ್ ಆರೋಗ್ಯ ಮಂದಿರಕ್ಕೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
೧೬ಕೆಎಲ್‌ಆರ್-೧೦................ಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ ಸಚಿವ ನಾ.ರಾ.ಲೋಕೇಶ್ ಹಾಗೂ ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ಕೋಲಾರದ ಜಿಲ್ಲಾ ಆರೋಗ್ಯ ಕಚೇರಿಗೆ ಭೇಟಿ ನೀಡಿ ಡಿಜಿಟಲ್ ಮತ್ತು ನರ್ವ್ ಸೇವೆ ವೀಕ್ಷಿಸಿದರು.