ಭಾರೀ ಮಳೆಗೆ ಕೊಚ್ಚಿ ಹೋದ ಕಬ್ಬು ಬೆಳೆ: ರೈತ ಕಂಗಾಲು

| Published : Sep 30 2025, 02:00 AM IST

ಭಾರೀ ಮಳೆಗೆ ಕೊಚ್ಚಿ ಹೋದ ಕಬ್ಬು ಬೆಳೆ: ರೈತ ಕಂಗಾಲು
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರವಾಗಿ ಮಳೆಗೆ ದಸ್ತಾಪುರ ಗ್ರಾಮದ ರೈತ ಹಣಮರಾಯ ಢಣಕಾಪುರ ಅವರ ಅಪಾರ ಪ್ರಮಾಣದ ಕಬ್ಬು ಬೆಳೆ ಹಾಳಾಗುತ್ತಿರುವ ಜತೆಗೆ ಲಕ್ಷಾಂತರ ಬಂಡವಾಳ ಹೂಡಿದ ರೈತ ಇತ್ತ ಬೆಳೆಯು ಇಲ್ಲದೇ,ಅತ್ತ ಆದಾಯವು ಇಲ್ಲದೆ ಕಂಗಾಲಾಗಿದ್ದಾರೆ.

ಕಮಲಾಪುರ: ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರವಾಗಿ ಮಳೆಗೆ ದಸ್ತಾಪುರ ಗ್ರಾಮದ ರೈತ ಹಣಮರಾಯ ಢಣಕಾಪುರ ಅವರ ಅಪಾರ ಪ್ರಮಾಣದ ಕಬ್ಬು ಬೆಳೆ ಹಾಳಾಗುತ್ತಿರುವ ಜತೆಗೆ ಲಕ್ಷಾಂತರ ಬಂಡವಾಳ ಹೂಡಿದ ರೈತ ಇತ್ತ ಬೆಳೆಯು ಇಲ್ಲದೇ,ಅತ್ತ ಆದಾಯವು ಇಲ್ಲದೆ ಕಂಗಾಲಾಗಿದ್ದಾರೆ.

ಕಳೆದ ಹಲವು ದಿನಗಳಿಂದ ಎಡಬಿಡದೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತ ತನ್ನ 5 ಎರಕರೆಯಲ್ಲಿ ಸಾಲ ಮಾಡಿ ಬಡ್ಡಿಗೆ ಹಣ ತಂದು ಎಂಟು ತಿಂಗಳು ರಾಸಾಯನಿಕ ಗೊಬ್ಬರ ಹಾಕಿ ಕಷ್ಟಪಟ್ಟು ಕಬ್ಬು ಬೆಳೆದಿದ್ದ ರೈತ ಇನ್ನೇನು ಎರಡು ತಿಂಗಳಲ್ಲಿ ಕಟಾವಿಗೆ ಸಿದ್ಧತೆ ನಡೆಸಿದರು.ಮಳೆ ನೀರಿನ ರಭಸಕ್ಕೆ ಜಮೀನಿನಲ್ಲಿದ್ದ ಕಬ್ಬು ಬೆಳೆ ಸಂಪೂರ್ಣ ಕಿತ್ತುಕೊಂಡು ಹೋಗಿ ಅಲ್ಲಲ್ಲಿ ಒಂದೊಂದು ದಂಟು ಉಳಿದಿದ್ದು ಅದು ಕೂಡ ಕೆಳಗೆ ಬಾಗಿ ಮುರಿಯುತ್ತಿದ್ದು. ಬೆಳೆದು ನಿಂತಿದ್ದ ಕಬ್ಬು ಬೆಳೆಯನ್ನು ಕೈ ತುಂಬಾ ಆದಾಯ ಗಳಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತನಿಗೆ ಅನಿರೀಕ್ಷಿತ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ ಎಂದು ರೈತ ಕಣ್ಣೀರು ಹಾಕಿದ್ದಾರೆ.

ಮಳೆ ನೀರಿನ ರಭಸಕ್ಕೆ ಕೊಚ್ಚಿ ಕೊಂಡು ಹೋದ ಕಬ್ಬು ಬೆಳೆ ಜಮೀನು ಕೆರೆಯಂತಾಗಿದೆ ಅತಿವೃಷ್ಟಿಗೆ ದಸ್ತಾಪುರ ರೈತ ತತ್ತರಿಸಿ ಹೋಗಿದ್ದಾರೆ. ಸಮೀಕ್ಷೆ ಆರಂಭಿಸದ ಸರಕಾರ ಪರಿಹಾರದ ನಿರೀಕ್ಷೆಯಲ್ಲಿ ರೈತರು ಇದ್ದಾರೆ. ಪರಿಹಾರ ಸಿಗುತ್ತಾ ಎನ್ನುವುದೇ ರೈತರಿಗೆ ಒಂದು ದೊಡ್ಡ ಪ್ರಶ್ನೆಯಾಗಿದೆ. ಅದರಲ್ಲಿಯೂ ಕಮಲಾಪುರ ತಾಲೂಕಿನಲ್ಲಿ ಅಂತೊ ಸಂಪೂರ್ಣವಾಗಿ ಹಾಳಾಗಿ ಹೋಗಿವೆ ಹೀಗಾಗಿ ರಾಜ್ಯ ಸರ್ಕಾರ ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳನ್ನು ಸರ್ವೇ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರ ಒತ್ತಾಯವಾಗಿದೆ.

ಸಾಲ ಮಾಡಿ ರಾಸಾಯನಿಕ ಗೊಬ್ಬರ ಹಾಕಿ 5 ಎಕರೆ ಕಬ್ಬು ಬೆಳೆ ಬೆಳೆದಿದ್ದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಂಪೂರ್ಣ ಕಬ್ಬು ಬೆಳೆ ನೀರಿನ ರಬಸಕ್ಕೆ ಕೊಚ್ಚಿಕೊಂಡು ಹೋಗಿ ಒಂದೊಂದು ದಂಟು ಉಳಿದಿದೆ. ಕಬ್ಬುಗದ್ದೆಯಲ್ಲಿ ಇನ್ನು ಒಳಗೆ ಹೋಗಲಾಗದೆ ಎದೆ ಭಾಗದವರೆಗೆ ನೀರು ನಿಂತಿವೆ. ಸರ್ಕಾರ ಹಾಗೂ ಕಂದಾಯ ಇಲಾಖೆ ಬಂದು ಬೆಳೆ ನೋಡಿ ಪರಿಹಾರ ನೀಡಬೇಕು.

-ಹಣಮಂತರಾಯ ಢಣಕಾಪುರ ಕಬ್ಬು ಬೆಳೆ ಹಾನಿಯಾದ ರೈತ ದಸ್ತಾಪುರ