ಸುಳ್ಳಾಡಿ ವಿಷ ಪ್ರಸಾದ ಸೇವನೆ ಪ್ರಕರಣ ನಡೆದು ಏಳು ವರ್ಷಗಳು ಕಳೆದಿದೆ. ಸರ್ಕಾರ ಕುಟುಂಬಸ್ಥರಿಗೆ ನೀಡಿದ ಇತ್ತ ಭರವಸೆ ಈಡೇರಿಸಬೇಕು ಎಂದು ದಲಿತಪರ ಸಂಘಟನೆಯ ಸಮಿತಿ ರಾಜ್ಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ, ಹನೂರು
ಸುಳ್ಳಾಡಿ ವಿಷ ಪ್ರಸಾದ ಸೇವನೆ ಪ್ರಕರಣ ನಡೆದು ಏಳು ವರ್ಷಗಳು ಕಳೆದಿದೆ. ಸರ್ಕಾರ ಕುಟುಂಬಸ್ಥರಿಗೆ ನೀಡಿದ ಇತ್ತ ಭರವಸೆ ಈಡೇರಿಸಬೇಕು ಎಂದು ದಲಿತಪರ ಸಂಘಟನೆಯ ಸಮಿತಿ ರಾಜ್ಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ಆಗ್ರಹಿಸಿದರು.ತಾಲೂಕಿನ ಬಿದರಳ್ಳಿ ಗ್ರಾಮದಲ್ಲಿ ಸುಳ್ಳಾಡಿ ವಿಷ ಪ್ರಸಾದ ತಿಂದು 17 ಜನ ಸಾವನ್ನಪ್ಪಿದ ಘಟನೆ ನಡೆದು ಏಳು ವರ್ಷಗಳ ಸ್ಮರಣಾರ್ಥ ಕುಟುಂಬಸ್ಥರು ಸಂತ್ರಸ್ತರು ಸಮಾಧಿ ಪೂಜೆ ಸಲ್ಲಿಸಿ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು .
ಕಳೆದ ಏಳು ವರ್ಷಗಳ ಹಿಂದೆ ಧಾರ್ಮಿಕ ಕ್ಷೇತ್ರವಾದ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಾಲಯದಲ್ಲಿ ವಿಷ ಪ್ರಸಾದ ತಿಂದ 17 ಜನ ಎಂ ಟಿ ದೊಡ್ಡಿ , ಬಿದರಹಳ್ಳಿ, ದೊರೆಸ್ವಾಮಿಮೇಡು, ಕೋಟೆಪೊದೆ, ಸುಳ್ಳಾಡಿ ಗ್ರಾಮಗಳಲ್ಲಿ ಮೃತಪಟ್ಟಂತ ಕುಟುಂಬಸ್ಥರಿಗೆ 7 ವರ್ಷಗಳಿಂದಲೂ ಇಲ್ಲಿನ ಸಂತ್ರಸ್ತರು ಮತ್ತು ಕುಟುಂಬಸ್ಥರು ಸ್ಮರಣಾರ್ಥ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದ್ದಾರೆ. ಸರ್ಕಾರ ಇತ್ತ ಗಮನ ಹರಿಸಿ ನೀಡಿದ ಭರವಸೆಯನ್ನು ಇನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು. ಮಾಸದ ನೆನಪು:ವಿಷ ಪ್ರಸಾದದಿಂದ ತಮ್ಮ ಕುಟುಂಬದವರನ್ನು ಕಳೆದುಕೊಂಡು 17 ಜನ ಮೃತಪಟ್ಟಿರುವ ಇಲ್ಲಿನ ಕುಟುಂಬಸ್ಥರು ಹಾಗೂ 120ಕ್ಕೂ ಹೆಚ್ಚು ಸಂತ್ರಸ್ತರು ವಿವಿಧ ನೂನ್ಯತೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಇನ್ನೂ ಸಹ 17 ಜನ ಸಾವನ್ನಪ್ಪಿರುವ ಮಾಸದ ನೆನಪು ಇಲ್ಲಿನ ಕುಟುಂಬಸ್ಥರನ್ನು ಬೆಂಬಿಡದೆ ಕಾಡುತ್ತಿದೆ. ಹೀಗಾಗಿ 7ನೇ ವರ್ಷದ ಸ್ಮರಣಾರ್ಥ ಕಾರ್ಯಕ್ರಮದ ಅಂಗವಾಗಿ ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆದ ಬಿದರಳ್ಳಿ ಗ್ರಾಮದಲ್ಲಿ ಸಮಾಧಿ ಪೂಜೆ ಸಲ್ಲಿಸಲಾಗಿದೆ ಎಂದರು.
ಗ್ರಾಮ ಪಂಚಾಯತಿ ಸದಸ್ಯ ರಾಮಲಿಂಗ ಮಾತನಾಡಿ, ಕಳೆದ ಏಳು ವರ್ಷಗಳಿಂದ ತಮ್ಮವರನ್ನು ಕಳೆದುಕೊಂಡು ವಿವಿಧ ಸಂಕಷ್ಟಗಳಿಂದ ನ್ಯೂನತೆಗಳಿಂದ ಬಳಲುತ್ತಿರುವ ಕುಟುಂಬಸ್ಥರಿಗೆ ಸರ್ಕಾರ ನೀಡಿದ ಭರವಸೆ ಹಾಗೆ ಉಳಿದಿದ್ದು, ನಿವೇಶನ, ಜಮೀನು ಹಂಚಿಕೆ ಮಾಡಬೇಕು. ವಿವಿಧ ನೂನ್ಯತೆಗಳಿಂದ ಬಳಲುತ್ತಿರುವ ಹೆಚ್ಚು ಸಂತ್ರಸ್ತರಿಗೆ ಮೊಬೈಲ್ ವಾಹನ ಆರೋಗ್ಯ ಸೇವೆಯನ್ನು ವಿವಿಧ ಗ್ರಾಮಗಳ ಮನೆಗಳ ಬಳಿಯೇ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ವಹಿಸಬೇಕಾಗಿದೆ. ತಮ್ಮವರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿ ಆರ್ಥಿಕವಾಗಿ ವಿವಿಧ ನ್ಯೂನತೆಗಳಿಂದ ಬಳಲುತ್ತಿರುವ ವಿವಿಧ ಗ್ರಾಮಗಳ ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಬೇಕು. ರಾಜ್ಯ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ವಿಷ ಪ್ರಸಾದ ಪ್ರಕರಣ ಗಂಭೀರವಾಗಿ ಪರಿಗಣಿಸಿ ನಿವಾಸಿಗಳಿಗೆ ನಿವೇಶನ ಆರೋಗ್ಯ ಸೇವೆಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು .ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ನದಿಯ ರಾಮಲಿಂಗ, ಮುಖಂಡರಾದ ಷಣ್ಮುಗಂ, ನರಸಿಂಹ, ಆಶಾ ಚಿತ್ರ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.