ಸುಂಟಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳ ಸಂತೆ ಬುಧವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳ ಸಂತೆ ಬುಧವಾರ ನಡೆಯಿತು.

ಮಕ್ಕಳು ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿರದೆ ವ್ಯವಹಾರಿಕ ಜ್ಞಾನ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು.

ನಿತ್ಯವು ಶಾಲಾವರಣದಲ್ಲಿ ಪಾಠ ಪ್ರವಚನ ಕೇಳಿ ಬರುತ್ತಿದ್ದವು. ಬುಧವಾರ ಮಕ್ಕಳು ತಾವು ತಮ್ಮ ಮನೆ ಸೇರಿದಂತೆ ಸುತ್ತ ಮುತ್ತಲ ಪ್ರದೇಶಗಳಲ್ಲಿ ದೊರೆತ ಕಾಯಿ ಪಲ್ಯ ತಿಂಡಿ ತಿನ್ನಿಸುಗಳ ಮಾರಾಟದಲ್ಲಿ ತೊಡಗಿಸಿಕೊಂಡಿದ್ದು, ಗ್ರಾಹಕರನ್ನು ಒಲೈಸುತ್ತಿರುವ ದೃಶ್ಯವು ಕಂಡು ಬಂದವು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಹಾಗೂ ಪಂಚಾಯಿತಿ ಸದಸ್ಯ ರಫೀಕ್ ಖಾನ್ ಮಕ್ಕಳ ಸಂತೆ ಉದ್ಘಾಟಿಸಿ ಮಾತನಾಡಿ, ಮಕ್ಕಳು ಕೇವಲ ಶಿಕ್ಷಣಕ್ಕೆ ಸೀಮಿತವಾಗಿರದೆ ಸಾಮಾಜಿಕವಾಗಿ ವ್ಯವಹಾರಿಕ ಜ್ಞಾನವನ್ನು ಬೆಳೆಸುವ ನಿಟ್ಟಿನಲ್ಲಿ ಮಕ್ಕಳ ಸಂತೆಯನ್ನು ಆಯೋಜಿಸಲಾಗಿದ್ದು ಮಕ್ಕಳು ಅತ್ಯಂತ ಉತ್ಸಾಹದಿಂದ ವ್ಯಾಪಾರ ವಹಿವಾಟಿಗೆ ಬೇಕಾದಂತಹ ತರಕಾರಿ, ಸೊಪ್ಪು, ತಿಂಡಿ ತಿನ್ನಿಸುಗಳನ್ನು ಮಾರಾಟಕ್ಕೆ ಸಜ್ಜಾಗಿರುವುದನ್ನು ಕಂಡಾಗ ಮಕ್ಕಳ ವ್ಯವಹಾರಿಕ ಪ್ರತಿಭೆಯನ್ನು ಅನಾವರಣಗೊಳಿಸಿದೆ ಎಂದು ರಫೀಕ್‌ ಖಾನ್ ಹೇಳಿದರು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಸರ್ಕಾರವು ಮಕ್ಕಳಿಗೆ ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆ ಹಾಗೂ ವ್ಯವಹಾರಿಕ ಜ್ಞಾನದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದ ಮಕ್ಕಳು ತಮ್ಮ ಭವಿಷ್ಯದ ದಿಸೆಯಲ್ಲೂ ಇದು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. ಮಕ್ಕಳು ತೋಟಗಳಲ್ಲಿ ಬೆಳೆದ ತರಕಾರಿ, ಸೊಪ್ಪು, ಕಾಯಿ ಪಲ್ಯಗಳು, ಆಹಾರ ತಿಂಡಿ ತಿನಿಸುಗಳು, ಕಾಫಿ, ಟೀ ಸೇರಿದಂತೆ ತಂಪು ಪಾನಿಯಗಳ ವ್ಯಾಪಾರ ಬಲು ಜೋರಾಗಿ ನಡೆಸಿದರು. ಎಂದಿನಂತೆ ವ್ಯಾಪಾರಿಗಳ ರೀತಿಯಲ್ಲಿಯೆ ವ್ಯಾಪಾರ ವಹಿವಾಟನ್ನು ನಡೆಸಿದ ತಮ್ಮ ವ್ಯವಹಾರಿಕ ಪ್ರತಿಭೆಯನ್ನು ಅನಾವರಣಗೊಳಿಸಿದರು. ಈ ಸಂದರ್ಭ ನಿವೃತ್ತ ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ, ಪ್ರಭಾರ ಮುಖ್ಯೋಪಾಧ್ಯಾಯರಾದ ದೈಹಿಕ ಶಿಕ್ಷಣ ಶಿಕ್ಷಕ ನಂದ, ಸಹಶಿಕ್ಷಕರಾದ ಸೌಭಾಗ್ಯ, ಚಂದ್ರವತಿ, ಇಂದಿರಾ, ಉಷಾ, ವರ್ಣಿತ, ಸತೀಶ್, ಮಮತಾ, ಅಸೀನ, ಪುನೀತ, ಅಂಜನ, ಶಾಜಿಯ, ಶೋಭಾ, ಎಸ್‌ಡಿಎಂಸಿ ಸದಸ್ಯರು ಹಾಗೂ ಪೋಷಕರು ಮತ್ತಿತರರು ಇದ್ದರು.