ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ 58ನೇ ವರ್ಷದ ತೆರೆ ಮಹೋತ್ಸವವು ಮಾ. 21ರಿಂದ 23ರವರೆಗೆ ನಡೆಯಲಿದೆ ಎಂದು ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಪಟ್ಟೆಮನೆ ಉದಯ ಕುಮಾರ್ ತಿಳಿಸಿದ್ದಾರೆ. 21ರಂದು ಬೆಳಿಗ್ಗೆ 6.ಕ್ಕ್ಕೆಗಣಪತಿ ಹವನ, 7.15ಕ್ಕೆ ಶುದ್ಧಿ ಪುಣ್ಯಾಹ, 7.30ಕ್ಕೆ ಬಾವುಟ ಏರಿಸುವುದು, ಸಂಜೆ 4ಕ್ಕೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, ಸಂಜೆ 6ಕ್ಕೆ ಚೆಂಡೆಮೇಳ, 7 ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟಂ ನಡೆಯಲಿದೆ. ಮಾ.22ರಂದು ಬೆಳಗ್ಗೆ 7ಕ್ಕೆ ವಾದ್ಯಮೇಳ, 11ಕ್ಕೆ ಶ್ರೀ ಶಾಸ್ತಪ್ಪನ ವೆಳ್ಳಾಟಂ, ಮಧ್ಯಾಹ್ನ 1 ಗಂಟೆಗೆ ಶ್ರೀ ಗುಳಿಗ ವೆಳ್ಳಾಟಂ, ಸಂಜೆ 4ಕ್ಕೆ ಅಡಿಯರ ಮೆರವಣಿಗೆ, ರಾತ್ರಿ 7ಕ್ಕೆ ಶ್ರೀ ಮುತ್ತಪ್ಪ ವೆಳ್ಳಾಟಂ, 8ಕ್ಕೆ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ರಕ್ತ ಚಾಮುಂಡಿ ವೆಳ್ಳಾಟಂ, 8.30ಕ್ಕೆ ಶ್ರೀ ವಸೂರಿಮಾಲೆ ಸ್ನಾನಕ್ಕೆ ಹೊರಡುವುದು, 9ಕ್ಕೆ ವಿಷ್ಣುಮೂರ್ತಿ ವೆಳ್ಳಾಟಂ, 11ಕ್ಕೆ ಕಳಿಗ ಪಾಟ್ ಅಂದಿವೇಳ ಕಳಸಂ ಸ್ವೀಕರಿಸುವುದು, ವೆಳ್ಳಕಟ್ಟ್, 1.15ಕ್ಕೆ ಗುಳಿಗನ ಕೋಲ, 2 ಗಂಟೆಗೆ ಶಾಸ್ತಪ್ಪನ ಕೋಲ, ಮುಂಜಾನೆ 4ಕ್ಕೆ ಶ್ರೀ ಮುತ್ತಪ್ಪ ಮತ್ತು ಶ್ರೀ ತಿರುವಪ್ಪನ ಕೋಲ, 5ಕ್ಕೆ ಗಂಭೀರ ಪಟಾಕಿ. ಮಾ. 23ರಂದು ಬೆಳಿಗ್ಗೆ 7ಕ್ಕೆ ಶ್ರೀ ರಕ್ತ ಚಾಮುಂಡಿಕೋಲ, 8ಕ್ಕೆ ಶ್ರೀ ಮುತ್ತಪ್ಪ ಮತ್ತು ಶ್ರೀ ತಿರುವಪ್ಪ ದೇವರ ಪಳ್ಳಿವೇಟ, 9ಕ್ಕೆ ಶ್ರೀ ವಿಷ್ಣುಮೂರ್ತಿಕೋಲ, 10ಕ್ಕೆ ಶ್ರೀ ಚಾಮುಂಡೇಶ್ವರಿ ಕೋಲ, 11ಕ್ಕೆ ಶ್ರೀ ವಸೂರಿ ಮಾಲೆ ಕೋಲ, ಮಧ್ಯಾಹ್ನ 11.30ಕ್ಕೆ ಗುರುಶ್ರೀ ದರ್ಪಣ, ಅಪರಾಹ್ನ 12ಕ್ಕೆ ಬಾವುಟ ಇಳಿಸಲಾಗುವುದು ಎಂದು ಶ್ರೀ ಚಾಮುಂಡೇಶ್ವರಿ ಹಾಗೂ ಮುತ್ತಪ್ಪ ದೇವಾಲಯ ಸಮಿತಿ ಆಡಳಿತ ಮಂಡಳಿಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.21ರಿಂದ ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರ ತೆರೆ ಮಹೋತ್ಸವ
ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ 58ನೇ ವರ್ಷದ ತೆರೆ ಮಹೋತ್ಸವವು ಮಾ. 21ರಿಂದ 23ರವರೆಗೆ ನಡೆಯಲಿದೆ ಎಂದು ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಪಟ್ಟೆಮನೆ ಉದಯ ಕುಮಾರ್ ತಿಳಿಸಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.