ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದು ಗ್ಯಾರಂಟಿ ಯೋಜನೆಗಳ ಮೂಲಕ ಜನ ಸಾಮಾನ್ಯರ ಬದುಕಿಗೆ ಆಸರೆಯಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಹೇಳಿದರು.ತಾಲೂಕಿನ ಆಲೂರ, ಆಲೂರ ಎಲ್ಟಿ ಗ್ರಾಮದಲ್ಲಿ ಗುರುವಾರ ಪ್ರಚಾರ ಸಭೆ ನಡೆಸಿ ಅವರು ಮಾತನಾಡಿದರು. ಗ್ರಾಮೀಣ ಜನರ ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧವಾಗಿದ್ದು, ನಮ್ಮ ತಂದೆ ದಿ.ಎಚ್.ವೈ. ಮೇಟಿ ಅವರು ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಆಲೂರ ಅಗಸಿಯಿಂದ ಮಾಸ್ತಿಹಾಳವರೆಗೆ ರಸ್ತೆ ನಿರ್ಮಾಣ, ಆಲೂರ ಎಲ್ಟಿ, ಸೀತಿಮನಿ, ಹಿರೇಗುಳಬಾಳ, ಮುತ್ತತ್ತಿ ಗ್ರಾಮದ ಹಿಂದುಳಿದ ವರ್ಗದವರ ಕಾಲೋನಿಗಳಲ್ಲಿ ಸಿಸಿ ರಸ್ತೆ, ಲವಳೇಶ್ವರ ತಾಂಡಾದಿಂದ ಸಿದ್ದೇಶ್ವರ ಗುಡಿವರೆಗೆ ರಸ್ತೆ, ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಣ, ಹೈಮಾಸ್ಟ್ ದೀಪಗಳ ಅಳವಡಿಕೆ, ಶುದ್ಧ ಕುಡಿಯುವ ನೀರಿನ ಘಟಕ, ಮುತ್ತತ್ತಿ ಗ್ರಾಮದಲ್ಲಿ ಸಿಸಿ ರಸ್ತೆ, ಉಗ್ರಾಣ ಕೋಣೆ ನಿರ್ಮಾಣ ಹೀಗೆ ಗ್ರಾಮಸ್ಥರ ಬೇಡಿಕೆ ಈಡೇರಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಅವರ ನಿಧನದ ನಂತರ ಅವರ ಕನಸಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಂತೆ ಪಕ್ಷದ ಮುಖಂಡರು ನನಗೆ ಆದೇಶಿಸಿದ್ದಾರೆ. ಅಭಿವೃದ್ಧಿ ಕೈಗೊಳ್ಳಲು ಮತದಾರ ಪ್ರಭುಗಳ ಆಶೀರ್ವದಿಸಬೇಕು ಎಂದು ಕೋರಿದರು.
ನಂತರ ಚಿಕ್ಕಗುಳಬಾಳ, ಹಿರೇಗುಳಬಾಳ, ಮುತ್ತತ್ತಿ, ಹಿರೇಗುಳಬಾಳ ಎಲ್ಟಿ, ಜಡ್ರಾಮಕುಂಟಿ, ಹೊದ್ಲೂರು, ಲವಳೇಶ್ವರ ಎಲ್ಟಿ, ಕಡ್ಲಿಮಟ್ಟಿ ಸ್ಟೇಷನ್ ಭಾಗದಲ್ಲಿ ಕಾರ್ಯಕರ್ತರೊಂದಿಗೆ ಪ್ರಚಾರ ಕೈಗೊಂಡು ಮತಯಾಚಿಸಿದರು. ವಿವಿಧ ಗ್ರಾಮಗಳ ಮುಖಂಡರು ಮಾತನಾಡಿ, ಜಾತ್ಯತೀತವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದಾಗಿ ಭರವಸೆ ನೀಡಿದರು.ತಿಪ್ಪಣ್ಣ ಬೀಳಗಿ, ಯಮನಪ್ಪ ನಿಂಗಾಪೂರ, ಸಂಗಪ್ಪಕುರಿ, ದ್ಯಾಮಣ್ಣತೇಜಿ, ಹಣಮಂತ ಮೋಸಗೇರಿ, ಬಲರಾಮ ನಾಯಕ, ಸಂತೋಷ ಲಮಾಣಿ, ರಮೇಶಕೇಸಪ್ಪ, ಅಡಿವೆಪ್ಪ ಸರೂರ, ಹೊದ್ಲೂರ ಪುಂಡಲೀಕಗೌಡರ, ಶಿವಪ್ಪ ನಡಗಡ್ಡಿ, ಭೀಮಪ್ಪ ಕಾಳಿ, ದಾವಲಸಾಬ್ ವಾಲೀಕಾರ, ಅರ್ಜುನ ಕರೆಹೊಳ್ಳಿ ಇತರರು ಇದ್ದರು.