ಸಾರಾಂಶ
ಗ್ರಾಮದ ಪ್ರಮುಖರ ಕೂಡುವಿಕೆಯಲ್ಲಿ ದೇವಸ್ಥಾನದಲ್ಲಿ ಪೂರ್ವಾಭಾವಿ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತಾ ಮಹೋತ್ಸವ ಹಾಗೂ ಅಲ್ಲಿನ ಯುವಕ ಮಂಡಲದ ವಾರ್ಷಿಕೋತ್ಸವದ ಜೊತೆಗೆ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಗುರುವಂದನೆ ಹಾಗೂ ದೇವಸ್ಥಾನದ ಮೊಕ್ತೇಸರ ಕೇ. ಸೀತಾರಾಮ ಶೆಟ್ಟಿ ಅವರಿಗೆ ಸಾಧಕ ಸಮ್ಮಾನ ಕಾರ್ಯಕ್ರಮ ಏ.೨೬ರಂದು ಸುರಗಿರಿ ದೇವಸ್ಥಾನದಲ್ಲಿ ನಡೆಯಲಿದೆ.ಈ ನಿಟ್ಟಿನದಲ್ಲಿ ಗ್ರಾಮದ ಪ್ರಮುಖರ ಕೂಡುವಿಕೆಯಲ್ಲಿ ದೇವಸ್ಥಾನದಲ್ಲಿ ಪೂರ್ವಾಭಾವಿ ಸಭೆ ನಡೆಯಿತು. ಪೇಜಾವರ ಸ್ವಾಮೀಜಿ ಈ ಗ್ರಾಮದವರಾಗಿದ್ದು ಅಯೋಧ್ಯೆ ರಾಮ ಮಂದಿರದ ಪ್ರಾಣ ಪ್ರತಿಷ್ಠೆ ಹಾಗೂ ಮಂಡಲೋತ್ಸವ ಆಯೋಜನೆ ಮಾಡಿ ದೊಡ್ಡ ಕಾರ್ಯ ಮಾಡಿದ್ದಾರೆ. ಕೆ. ಸೀತಾರಾಮ ಶೆಟ್ಟಿ ಅವರು ಸುರಗಿರಿ ದೇವಸ್ಥಾನದಲ್ಲಿ ೨೫ ವರ್ಷಗಳಿಂದ ಆಡಳಿತ ಮೊಕ್ತೇಸರರಾಗಿ ದೇವಸ್ಥಾನ ಜೀಣೋದ್ಧಾರ ಹಾಗೂ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಕಾರ್ಯ ಮಾಡಿದ ಹಿನ್ನೆಲೆಯಲ್ಲಿ ಸಾಧಕ ಸನ್ಮಾನ ಮಾಡಲು ಯೋಜಿಸಲಾಗಿದೆ ಎಂದು ದೇವಸ್ಥಾನದ ಮೊಕ್ತೇಸರ ಧನಂಜಯ ಶೆಟ್ಟಿಗಾರ್ ಸಭೆಯಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ ದೇವಸ್ಥಾನದ ಅರ್ಚಕ ವಿಶ್ವೇಶ ಭಟ್, ಬಾಲಾದಿತ್ಯ ಆಳ್ವ, ಕೇಶವ ಆಳ್ವ, ನಿತಿನ್ ಶೆಟ್ಟಿ ಕೆಮ್ರಾಲ್ ಗುತ್ತು, ಅತ್ತೂರು ಶ್ರೀ ಕುಂಜರಾಯ ದೈವಸ್ಥಾನದ ಅಧ್ಯಕ್ಷ ಚರಣ್ ಜೆ. ಶೆಟ್ಟಿ ಕೊಜಪಾಡಿ ಬಾಳಿಕೆ, ಪುರುಷೋತ್ತಮ ಶೆಟ್ಟಿ ಕೊಡೆತ್ತೂರು, ರಮನಾಥ ಶೆಟ್ಟಿ ಅಮಿತಾ ನಿವಾಸ, ಸುನಿಲ್ ಭಂಡಾರಿ ಕೆಮ್ರಾಲ್ ಗುತ್ತು, ಕೃಷ್ಣರಾಜ ಭಟ್ ಕೋಡು, ಮಹಿಳಾ ಮಂಡಲದ ಅಮಿತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಯುವಕ ಮಂಡಲದ ಅಜಯ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.