ಕುರುಬರ ಸಂಘದ ತಾಲೂಕು ಅಧ್ಯಕ್ಷರಾಗಿ ಸೂರ್ಯಕಾಂತ ಆಯ್ಕೆ

| Published : Mar 26 2024, 01:15 AM IST

ಸಾರಾಂಶ

ಯಾದಗಿರಿ ನಗರದ ಮೌನೇಶ್ವರ ದೇವಸ್ಥಾನ ಆವರಣದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಯಾದಗಿರಿ ತಾಲೂಕು ಅಧ್ಯಕ್ಷರಾಗಿ ಸೂರ್ಯಕಾಂತ ಅಲ್ಲಿಪೂರ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಕರ್ನಾಟಕ ಪ್ರದೇಶ ಕುರುಬರ ಸಂಘದ ಯಾದಗಿರಿ ತಾಲೂಕು ಅಧ್ಯಕ್ಷರ ಆಯ್ಕೆ ಬಗ್ಗೆ ನಗರದ ಮೌನೇಶ್ವರ ದೇವಸ್ಥಾನ ಆವರಣದಲ್ಲಿ ಸಭೆ ಜರುಗಿತು.

ಸಭೆಯಲ್ಲಿ ಸೂರ್ಯಕಾಂತ ಅಲ್ಲಿಪೂರ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಈ ವೇಳೆ ನೂತನ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಸೂರ್ಯಕಾಂತ ಅಲ್ಲಿಪೂರ ಮಾತನಾಡಿ, ಹಾಲು ಸಮಾಜ ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿದೆ. ತಾಲೂಕಿನಲ್ಲಿ ಸಮಾಜವನ್ನು ಹಿರಿಯರ ಮಾರ್ಗದರ್ಶನದಲ್ಲಿ ಹಾಗೂ ಯುವಕರ ಸಹಕಾರದಿಂದ ಸಧೃಢವಾಗಿ ಸಂಘಟಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ತಾಲೂಕಿನಲ್ಲಿ ಹಾಲುಮತ ಸಮಾಜದ ಜನರು ಕಾಯಕ ಜೀವಿಗಳಾಗಿದ್ದು, ಎಲ್ಲಾ ವರ್ಗದ ಜನರೊಂದಿಗೆ ಸಾಮರಸ್ಯದಿಂದ ಬಾಳಿಕೊಂಡು ಬಂದಿದ್ದಾರೆ. ಅವರಿಗೆ ಎದುರಾಗುವ ತೊಂದರೆಗಳಿಗೆ ಎಲ್ಲರೊಂದಿಗೆ ನಾನು ಕೂಡಿ ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ, ಹಿರಿಯರಾದ ಸಿದ್ದಣಗೌಡ ಕಾಡಂನೋರ ವಡಗೇರಾ, ಚಂದ್ರಶೇಖರ ವಾರದ, ಸಿದ್ರಾಮಪ್ಪ ಅರಿಕೇರಿ, ಹೊನ್ನಪ್ಪ ಮುಸ್ಟೂರ, ಪ್ರಭುಲಿಂಗ ವಾರದ, ವಿಶ್ವನಾಥ ನೀಲಹಳ್ಳಿ, ಭೀಮರಾಯ ಭಂಡಾರಿ, ನರಸಪ್ಪ ಕವಡಿ ಬದ್ದೆಪಲ್ಲಿ, ಬೀರೇಶ ಚಿರತೆನೋರ, ಫಕಿರಪ್ಪ ರಾಮಸಮುದ್ರ, ಮರಿಲಿಂಗಪ್ಪ ಗಡ್ಡೆಸೂಗೂರ, ಮಲ್ಲಯ್ಯ ಕಸಬಿ, ಸಾಬಣ್ಣ ಕೆಂಗೂರಿ, ಭೀಮು ರಾಯಪ್ಪನೋರ ಹತ್ತಿಕುಣಿ, ವೆಂಕೋಬ ತುರಕನದೊಡ್ಡಿ, ನಾಗು ಸಂಗವಾರ ಸೇರಿ ಸಮಾಜದ ಮುಖಂಡರು ಇದ್ದರು.