ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಾರ್ಮಿಕರ ಪ್ರತಿಭಟನೆ

| Published : Mar 26 2024, 01:08 AM IST

ಸಾರಾಂಶ

ಕೆಲಸ ನಿರಾಕರಣೆ ಮಾಡಿರುವ ಕಾರ್ಮಿಕರಿಗೆ ಕೆಲಸ ನೀಡುವಂತೆ ಹಾಗೂ ಇನ್ನಿತರ ಪ್ರಮುಖ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಕೋರಿ ಆಗ್ರಹಿಸಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಾರ್ಮಿಕರ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಿ, ಡೀನ್ ಆವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕೆಲಸ ನಿರಾಕರಣೆ ಮಾಡಿರುವ ಕಾರ್ಮಿಕರಿಗೆ ಕೆಲಸ ನೀಡುವಂತೆ ಹಾಗೂ ಇನ್ನಿತರ ಪ್ರಮುಖ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಕೋರಿ ಆಗ್ರಹಿಸಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಾರ್ಮಿಕರ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಿ, ಡೀನ್ ಆವರಿಗೆ ಮನವಿ ಸಲ್ಲಿಸಲಾಯಿತು.

ನಗರದ ಜಿಲ್ಲಾಸ್ಪತ್ರೆಯ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕಾರ್ಮಿಕರಿಗೆ ಆಗುತ್ತಿರುವ ಶೋಷಣೆಯನ್ನು ಪ್ರಶ್ನಿಸಿದ ಕಾರಣಕ್ಕಾಗಿ ಸುಳ್ಳು ಪ್ರಕರಣವನ್ನು (ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆ ಪಡೆಯಲಾಗಿದೆ) ದಾಖಲಿಸಿ ಕೆಲಸದಿಂದ ವಜಾ ಮಾಡಿರುವ ಸಂಘದ ಪದಾಧಿಕಾರಿಗಳನ್ನು ಮತ್ತು ಕಾರ್ಮಿಕರನ್ನು ಕೂಡಲೇ ಕೆಲಸಕ್ಕೆ ಮರುನೇಮಕ ಮಾಡಿಕೊಳ್ಳಬೇಕು.

ಮಾನ್ಯ ಉಪ ಕಾರ್ಮಿಕ ಆಯುಕ್ತರ ಆದೇಶದಂತೆ ೫ ಜನ ಕಾರ್ಮಿಕರ 3 ತಿಂಗಳ ವೇತನವನ್ನು ತಕ್ಷಣವೇ ಪಾವತಿ ಮಾಡಬೇಕು ಮತ್ತು ಆದೇಶದಂತೆ ಶುಕ್ರೂಷಕರ ವೇತನವನ್ನು ಪಾವತಿ ಮಾಡಬೇಕು. ಕೊರೋನಾ ವಾರಿಯಾರ್ಸ್ ಆಗಿ ಕೆಲಸ ಮಾಡಿದ ಶುಶೂಷ್ರಕರಾದ ಪೂರ್ಣಿಮಾ ಮತ್ತು ರಂಜಿತಾಗೆ ಹೆರಿಗೆ ರಜೆ ಹಾಕಿದ ಕಾರಣಕ್ಕಾಗಿ ಕೆಲಸ ನಿರಾಕರಿಸಿದ್ದು, ತಕ್ಷಣವೇ ಕಾರ್ಮಿಕ ಅಧಿಕಾರಿಗಳ ಮುಂದೆ ಒಪ್ಪಿಕೊಂಡಂತೆ ಕೆಲಸ ನೀಡಬೇಕು.ಹೊರಗುತ್ತಿಗೆ ಏಜೆನ್ಸಿಯವನು ಸುಮಾರು ೨ ವರ್ಷಗಳ ಕಾಲ ಪ್ರತಿ ತಿಂಗಳು ಸುಮಾರು ೨,೦೦೦ ರು.ಗಳನ್ನು ಕಾನೂನು ಬಾಹಿರವಾಗಿ ಕಡಿತ ಮಾಡಿರುವುದನ್ನು ಪ್ರಶ್ನಿಸಿದಕ್ಕಾಗಿ ಆಗಸ್ಟ್ ೨೦೨೨ರಿಂದ ಕೆಲಸ ನಿರಾಕರಿಸಿರುವ ಸುಮಾರು ೧೫ ಜನ ಕರೋನಾ ವಾರಿಯರ್ಸ್ ಆಗಿ ಕೆಲಸ ಮಾಡಿ ಕೆಲಸಕ್ಕೆ ಅರ್ಜಿ ಸಲ್ಲಿಸಿರುವ ಮೊದಲನೇ ಬ್ಯಾಚ್‌ನ ಶುಶೂಷ್ರಕರನ್ನು ಕೆಲಸಕ್ಕೆ ಮರುನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಂಡಿದ್ದೇವೆ. ಹಾಗಾಗಿ ಕೂಡಲೇ ನಮ್ಮ ಹಕ್ಕುಗಳನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿದರು.ಈ ವೇಳೆ ಸಂಘದ ಅಧ್ಯಕ್ಷ ಚಂದ್ರಶೇಖರ ಮೇಟಿ, ಡಿಎಸ್‌ಎಸ್ ಶಿವಣ್ಣ, ಕೆ.ಎಂ. ನಾಗರಾಜು, ಪ್ರಶಾಂತ್, ಡಿ. ಮಹದೇವ, ಸಿ.ಎಂ. ಕೃಷ್ಣಮೂರ್ತಿ, ವಾಸು, ಬಾಬು, ಅಂಬರೀಶ್ ಇತರರು ಭಾಗವಹಿಸಿದ್ದರು.