ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಪ್ರಸ್ತುತ ಮಾಧ್ಯಮ ರಾಜಕೀಯ ಹೊರತಾಗಿರುವಂತವಂತದಲ್ಲ. ಆ ರೀತಿ ಆಗದಂತೆ ಈಗಿನ ಮಾಧ್ಯಮ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು. ವಸ್ತುನಿಷ್ಟ ಮತ್ತು ಸತ್ಯ ಮಾಹಿತಿಯನ್ನು ತಿಳಿಸುವುದು ಬಹಳ ಮುಖ್ಯ ಇದರಿಂದ ಸಮಾಜದ ಸ್ವಾಸ್ತ್ಯ ಕಾಪಾಡಬಹುದು ಎಂದು ಗೃಹ ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಡಾ.ಕೆ. ನಾಗಣ್ಣ ಹೇಳಿದರು.ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಮೂರು ದಿನಗಳ ಸುದ್ದಿ ನಿರೂಪಣಾ ಕಾರ್ಯಾಗಾರದ ಸಮಾರೂಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅವರು ವಿಷಯದ ಮಹತ್ವದ ಅನುಗುಣವಾಗಿ ಸುದ್ದಿ ಮಾಡುವುದು ಒಬ್ಬ ಪತ್ರಕರ್ನ ಜವಾಬ್ದಾರಿ ಆ ಹಾದಿಯಲ್ಲಿ ವಿದ್ಯಾರ್ಥಿಗಳು ಮುನ್ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ತಿಳಿಸಿದರು. ಪ್ರಾಂಶುಪಾಲರಾದ ಡಾ. ಹೇಮಲತಾ ಮಾತನಾಡಿ, ಹಡಗು ನೀರಿನ ಮೇಲೆ ತೇಲುವ ರೀತಿಯಲ್ಲಿ ವೀಕ್ಷಕರ ಮನಸ್ಸು ಕೂಡ ವಿಚಲಿತಗೊಳ್ಳುತ್ತಿರುತ್ತದೆ. ಆ ವಿಚಲಿತ ಮನಸ್ಸನ್ನು ಹಿಡಿದಿಡುವ ಶಕ್ತಿ ನಿರೂಪಕರಿಗೆ ಮಾತ್ರ ಸಾಧ್ಯ, ಅಂತಹ ಕೌಶಲ್ಯವನ್ನು ವಿದ್ಯಾರ್ಥಿಗಳು ಕಲಿಯಲಿಕ್ಕೆ ಇಂತಹ ಕಾರ್ಯಾಗಾರಗಳು ವೇದಿಕೆಯನ್ನು ಕಲ್ಪಿಸಿಕೊಡುತ್ತವೆ. ಅ ಅವಕಾಶಗಳನ್ನು ಬಳಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ನಿರ್ವಹಣಾ ವಿಭಾಗದ ಪ್ರಾಂಶುಪಾಲರಾದ ಡಾ. ಮಮತಾ ಜಿ. ಮಾತನಾಡಿ, ಈ ಒಂದು ಕಾರ್ಯಾಗಾರ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಬಿ.ಟಿ ಮುದ್ದೇಶ್ ಮಾತನಾಡಿ, ಅವಕಾಶಗಳನ್ನು ಬಳಿಸಿಕೊಳ್ಳುವ ಗುಣ ವಿದ್ಯಾರ್ಥಿಗಳಲ್ಲಿದ್ದರೆ ಅವರು ಪತ್ರಿಕೋದ್ಯಮದ ಕ್ಷೇತ್ರ ಯಾವುದೇ ವಿಭಾಗದಲ್ಲೂ ಯಶಸ್ಸು ಕಾಣಬಲ್ಲರು ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಮೂರು ದಿನಗಳ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಂತಹ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಅಧ್ಯಾಪಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.