ಬೆಳೆ ಸಮೀಕ್ಷೆಗಾರರಿಗೆ ಟೀ ಶರ್ಟ್,ಕ್ಯಾಪ್ ವಿತರಣೆ.

| Published : Apr 14 2024, 01:45 AM IST

ಬೆಳೆ ಸಮೀಕ್ಷೆಗಾರರಿಗೆ ಟೀ ಶರ್ಟ್,ಕ್ಯಾಪ್ ವಿತರಣೆ.
Share this Article
  • FB
  • TW
  • Linkdin
  • Email

ಸಾರಾಂಶ

ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಗಂಗಪ್ಪ ಎಂ. ಅವರು ಶುಕ್ರವಾರ ಸಂಜೆ ಬೆಳೆ ಸಮೀಕ್ಷೆಗಾರರಿಗೆ ಟೀ ಶರ್ಟ್, ಕ್ಯಾಪ್ ವಿತರಿಸಿದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್.ಯರಝರಿ ಮಾತನಾಡಿ, ಅಖಂಡ ಬಸವನಬಾಗೇವಾಡಿ ತಾಲೂಕಿನಲ್ಲಿ ಬೆಳೆ ಸಮೀಕ್ಷೆ ಮಾಡುವ ಸಮೀಕ್ಷೆಗಾರರಿಗೆ ಕೃಷಿ ಇಲಾಖೆಯಿಂದ ಟೀ ಶರ್ಟ್, ಕ್ಯಾಪ್ ವಿತರಣೆ ಮಾಡಲಾಗುತ್ತಿದೆ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಗಂಗಪ್ಪ ಎಂ. ಅವರು ಶುಕ್ರವಾರ ಸಂಜೆ ಬೆಳೆ ಸಮೀಕ್ಷೆಗಾರರಿಗೆ ಟೀ ಶರ್ಟ್, ಕ್ಯಾಪ್ ವಿತರಿಸಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್.ಯರಝರಿ ಮಾತನಾಡಿ, ಅಖಂಡ ಬಸವನಬಾಗೇವಾಡಿ ತಾಲೂಕಿನಲ್ಲಿ ಬೆಳೆ ಸಮೀಕ್ಷೆ ಮಾಡುವ ಸಮೀಕ್ಷೆಗಾರರಿಗೆ ಕೃಷಿ ಇಲಾಖೆಯಿಂದ ಟೀ ಶರ್ಟ್, ಕ್ಯಾಪ್ ವಿತರಣೆ ಮಾಡಲಾಗುತ್ತಿದೆ. ಬೆಳೆ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಬೆಳೆ ಸಮೀಕ್ಷೆಗಾರರನ್ನು ಗುರುತಿಸಲು ಇದು ನೆರವಾಗುತ್ತದೆ. ಬೆಳೆ ಸಮೀಕ್ಷೆಗಾರರು ಜಿಪಿಎಸ್ ಮೂಲಕ ಬೆಳೆ ಸಮೀಕ್ಷೆ ಕಾರ್ಯ ಮಾಡಬೇಕೆಂದರು.

ಈ ಸಂದರ್ಭದಲ್ಲಿ ಬಸವನಬಾಗೇವಾಡಿ ತಹಸೀಲ್ದಾರ್ ವೈ.ಎಸ್. ಸೋಮನಕಟ್ಟಿ, ಕೊಲ್ಹಾರ ತಹಸೀಲ್ದಾರ್‌ ಎಸ್.ಎಸ್. ನಾಯಕಲಮಠ, ಕೃಷಿ ಇಲಾಖೆಯ ಚಿದಾನಂದ ಹಿರೇಮಠ, ಬಿ.ಎಸ್. ಸಕ್ರಿ, ಜಿ.ಬಿ. ಮೇದಕಿನಾಳ, ಆತ್ಮ ಸಿಬ್ಬಂದಿ, ಕಂದಾಯ ಇಲಾಖೆಯ ಸಿಬ್ಬಂದಿ, ಕಂದಾಯ ನಿರೀಕ್ಷಕರು, ಗ್ರಾಮಾಡಳಿತಾಧಿಕಾರಿಗಳು ಇದ್ದರು.