ಸಾರಾಂಶ
- ವೀರ ಮದಕರಿ ನಾಯಕ ವೃತ್ತದ ಕ್ಯೂರೈಡ್ ಸೈಕಲ್ ಸ್ಟ್ಯಾಂಡ್ ಧರೆಗೆ!
- - -ಕನ್ನಡಪ್ರಭ ವಾರ್ತೆ, ದಾವಣಗೆರೆ ವರುಣ ಮತ್ತೆ ದಾವಣಗೆರೆ ಜಿಲ್ಲೆಗೆ ಕೃಪೆ ತೋರಿದ್ದು, ನಗರ ಸೇರಿದಂತೆ ತಾಲೂಕುಗಳ ವಿವಿಧೆಡೆ ಶನಿವಾರ ಮಧ್ಯಾಹ್ನ ಹಾಗೂ ಸಂಜೆ ಮತ್ತೆ ಮಳೆಯಾಗಿದೆ. ನಗರ, ಗ್ರಾಮೀಣ ವಾಸಿಗಳು ಮಳೆಯಿಂದಾಗಿ ಕೊಂಚ ನೆಮ್ಮದಿ ನಿಟ್ಟಿಸಿರು ಬಿಟ್ಟಿದ್ದಾರೆ.
ಭಾರಿ ಗಾಳಿ, ಮಳೆಯಿಂದಾಗಿ ನಗರದ ವೀರ ಮದಕರಿ ನಾಯಕ ವೃತ್ತದ ಬಳಿ ಕೂ ರೈಡ್ ಸೈಕಲ್ ಸ್ಟ್ಯಾಂಡ್ ಉರುಳಿ ಬಿದ್ದಿದ್ದು, ಪಕ್ಕದಲ್ಲೇ ಇದ್ದ ಎಗ್ ರೈಸ್ ಗಾಡಿಯ ಮೇಲೆ ಉರುಳಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎಗ್ ರೈಸ್ ವ್ಯಾಪಾರಿಗೆ ಒಂದಿಷ್ಟು ನಷ್ಟ ಸಂಭವಿಸಿದೆ.ತಾಲೂಕಿನ ಹೆಬ್ಬಾಳ್, ಹೆಬ್ಬಾಳ್ ಬಡಾವಣೆ, ಹುಣಸೇಕಟ್ಟಿ, ಹಾಲುವರ್ತಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮಧ್ಯಾಹ್ನವೇ ಭಾರೀ ಜೋರು ಗಾಳಿ ಜೊತೆಗೆ ದೊಡ್ಡ ಹನಿಗಳ ಮಳೆ ಸುರಿಯಿತು. ಇದರಿಂದ ವಾಹನಗಳ ಸಂಚಾರಕ್ಕೆ ವ್ಯತ್ಯಯವಾಗಿತ್ತು. ಸರಕು ಹೊತ್ತ ಭಾರಿ ವಾಹನಗಳು, ಪ್ರಯಾಣಿಕರ ಬಸ್ಸುಗಳು ನಿಧಾನವಾಗಿಯೇ ಸಾಗಿದವು. ಹೆಬ್ಬಾಳ್ ಟೋಲ್ ಬಳಿ ಭಾರಿ ವಾಹನಗಳು ರಸ್ತೆ ಬದಿ ನಿಂತು, ಮಳೆ ನಿಂತ ಮೇಲಷ್ಟೇ ಪ್ರಯಾಣ ಮುಂದುವರಿಸಿದವು. ಮಳೆ ನೀರು ಟೋಲ್ ಗೇಟ್ ಸಮೀಪದ ಗೂಡಂಗಡಿಗಳಿಗೆ ನುಗ್ಗಿ, ಬಡ ವ್ಯಾಪಾರಸ್ಥರು ಪರದಾಡಿದರು.
- - --14ಕೆಡಿವಿಜಿ15:
ದಾವಣಗೆರೆ ನಗರ ವೀರ ಮದಕರಿ ನಾಯಕ ವೃತ್ತದ ಬಳಿ ಕ್ಯೂರೈಡ್ ಸೈಕಲ್ ಸ್ಟ್ಯಾಂಡ್ ಮಳೆ, ಗಾಳಿ ಹೊಡೆತಕ್ಕೆ ಉರುಳಿರುವುದು. -14ಕೆಡಿವಿಜಿ14:ಹೆಬ್ಬಾಳ್ ಟೋಲ್ ಬಳಿ ರಸ್ತೆ ಬದಿ ಗೂಡಂಗಡಿಗಳ ಕಡೆ ಮಳೆನೀರು ನುಗ್ಗಿರುವುದು.