ಟಂಟಂ-ಕಾರು ಅಪಘಾತ: ಮೂವರ ಸಾವು, 9 ಜನ ಗಾಯ

| Published : Jan 25 2024, 02:00 AM IST / Updated: Jan 25 2024, 02:01 AM IST

ಸಾರಾಂಶ

ಕಲಾದಗಿ: ಕಾರು ಮತ್ತು ಟಂಟಂ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟು, 9 ಜನರು ಗಾಯಗೊಂಡ ಘಟನೆ ಗದ್ದನಕೇರಿ ಗ್ರಾಮದ ರಾಮಾರೂಢ ಮಠದ ಬಳಿ ಬೆಳಗಾವಿ-ರಾಯಚೂರು ಹೆದ್ದಾರಿಯಲ್ಲಿ ಬುಧವಾರ ನಡೆದಿದೆ. ತುಳಸಿಗೇರಿಯ ಶಂಕ್ರಪ್ಪ ಮಾನಪ್ಪ ಮೆಳ್ಳಿಗೇರಿ (೭೦), ಕಲಾದಗಿಯ ಗೌರಿ ಭರತ ಚವ್ಹಾಣ (೨), ವಿಜಯ ಗಂಗಾರಾಮ ತೇಲಿ (೬೫) ಮೃತರು. ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕಲಾದಗಿ

ಕಾರು ಮತ್ತು ಟಂಟಂ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟು, 9 ಜನರು ಗಾಯಗೊಂಡ ಘಟನೆ ಗದ್ದನಕೇರಿ ಗ್ರಾಮದ ರಾಮಾರೂಢ ಮಠದ ಬಳಿ ಬೆಳಗಾವಿ-ರಾಯಚೂರು ಹೆದ್ದಾರಿಯಲ್ಲಿ ಬುಧವಾರ ನಡೆದಿದೆ.

ತುಳಸಿಗೇರಿಯ ಶಂಕ್ರಪ್ಪ ಮಾನಪ್ಪ ಮೆಳ್ಳಿಗೇರಿ (೭೦), ಕಲಾದಗಿಯ ಗೌರಿ ಭರತ ಚವ್ಹಾಣ (೨), ವಿಜಯ ಗಂಗಾರಾಮ ತೇಲಿ (೬೫) ಮೃತಪಟ್ಟವರು. ಗದ್ದನಕೇರಿ ಕಡೆಯಿಂದ ತುಳಸಿಗೇರಿ ಕಡೆಗೆ ಹೊರಟಿದ್ದ ಟಂಟಂ ಹಾಗೂ ತುಳಸಿಗೇರಿ ಕಡೆಯಿಂದ ಗದ್ದನಕೇರಿ ಕಡೆಗೆ ಬರುತ್ತಿದ್ದ ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ಕಲಾದಗಿಯ ಭರತ ಬಾಬು ಚವ್ಹಾಣ (೨೬), ಅಕ್ಷತಾ ಭರತ ಚವ್ಹಾಣ (೨೪), ತುಳಸಿಗೇರಿಯ ಮುತ್ತಪ್ಪ ಹನುಮಂತ ಮನ್ನಿಕಟ್ಟಿ, ಶಾಂತವ್ವ ಶಂಕ್ರಪ್ಪ ಮೆಳ್ಳಿಗೇರಿ (೬೦), ದೇವರಹಿಪ್ಪರಗಿ ತಾಲೂಕಿನ ಮಾಳಿಯ ಮಾರುತಿ ಹಮನುರು ನಾಯ್ಕೋಟಿ (೪೨), ತುಳಸಿಗೇರಿಯ ಗಂಗವ್ವ ಯಂಕಪ್ಪ ಬಂಡಿವಡ್ಡರ (೩೫), ಬೀಳಗಿ ನಾಗರಾಳದ ಶಿವಲಿಂಗಪ್ಪ ಈಶ್ವರಪ್ಪ ಪಶ್ಚಾಪೂರ (೪೪), ನಕ್ಕರಗುಂದಿಯ ನೀಲಮ್ಮ ಪರಸಪ್ಪ ಮಾದರ (೩೦), ಕೋಲಾರದ ಬಡೇಸಾಬ ಹುಸೇನಸಾಬ ನಧಾಪ್ (೫೮) ಗಾಯಗೊಂಡಿದ್ದು, ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರಡ್ಡಿ, ಡಿವೈಎಸ್ಪಿ ಪಂಪಪನಗೌಡ, ಬಾಗಲಕೋಟೆ ಗ್ರಾಮೀಣ ಸಿಪಿಐ ಎಚ್.ಆರ್. ಪಾಟೀಲ, ಕಲಾದಗಿ ಪಿಎಸೈ ಚಂದ್ರಶೇಖರ ಹೇರಕಲ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು. ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.