ಜ. 28ರಂದು ಯಲ್ಲಾಪುರದಲ್ಲಿ ವಿಪ್ರ ಸಮಾವೇಶ

| Published : Jan 25 2024, 02:00 AM IST

ಸಾರಾಂಶ

ಸಮಾವೇಶದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮೂಲ ಸ್ಥಾನದ ಬೇರು ಹೊಂದಿರುವ ವಿಪ್ರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವರು. ಸಾಧಕರಿಗೆ ಸನ್ಮಾನ ಹಾಗೂ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಯಲ್ಲಾಪುರ:

‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ನುಡಿಗೆ ನಾಡಿನ ವಿಪ್ರ ಸಮುದಾಯ ಬದ್ಧವಾಗಿದ್ದು, ನಮ್ಮ ಸಂಘಟನೆ ಕೇವಲ ಸಭೆ, ಭಾಷಣಗಳಿಗೆ ಸೀಮಿತವಾಗಿರದೇ ನಾವು ಆಚರಿಸುವ ಎಲ್ಲ ಕಾರ್ಯಕ್ರಮಗಳು ಅರ್ಥಪೂರ್ಣವಾಗಿರಲೆಂಬ ಆಶಯ ಹೊಂದಿದ್ದೇವೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ ಹೇಳಿದರು.

ಜ. ೨೮ರಂದು ಯಲ್ಲಾಪುರದ ಎಪಿಎಂಸಿ ರೈತ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿರುವ ವಿಪ್ರ ಸಮಾವೇಶದ ಕುರಿತಾಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಂದು ನಡೆಯುವ ಸಮಾವೇಶದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮೂಲ ಸ್ಥಾನದ ಬೇರು ಹೊಂದಿರುವ ವಿಪ್ರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವರು. ಸಾಧಕರಿಗೆ ಸನ್ಮಾನ ಹಾಗೂ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.

ಎಕೆಬಿಎಂಎಸ್ ಅಧ್ಯಕ್ಷರಾಗಿ ಅಶೋಕ ಹಾರ್ನಳ್ಳಿ ಅಧಿಕಾರ ಸ್ವೀಕರಿಸಿದ ಆನಂತರ ಸಂಘಟನೆ ಮತ್ತಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.

ತಾಲೂಕಾ ಹವ್ಯಕ ಸಂಘದ ಅಧ್ಯಕ್ಷ ಡಿ. ಶಂಕರ ಭಟ್ಟ, ಎಕೆಬಿಎಂಎಸ್ ತಾಲೂಕು ಸಂಚಾಲಕ ಶಂಕರ ಭಟ್ಟ ತಾರೀಮಕ್ಕಿ, ಮಹಿಳಾ ಸಂಚಾಲಕಿ ಚಂದ್ರಕಲಾ ಭಟ್ಟ ಮಾತನಾಡಿ, ಅಪರೂಪಕ್ಕೆ ಯಲ್ಲಾಪುರದಲ್ಲಿ ನಡೆಯಲಿರುವ ವಿಪ್ರ ಸಮಾವೇಶಕ್ಕೆ ಜಿಲ್ಲೆಯ ತ್ರಿಮತಸ್ಥ ಬ್ರಾಹ್ಮಣರೆಲ್ಲರೂ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.ಎಕೆಬಿಎಂಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಪಾದ ರಾಯ್ಸದ, ಪ್ರಮುಖರಾದ ಪ್ರಮೋದ ಹೆಗಡೆ, ನಾರಾಯಣ ಹೆಗಡೆ ಕರಿಕಲ್, ಎಂ.ಆರ್. ಹೆಗಡೆ ಕುಂಬ್ರೀಗುಡ್ಡೆ, ಕೆ.ಎಸ್. ಭಟ್ಟ, ಪ್ರಸಾದ ಹೆಗಡೆ, ಕುಮಾರಸುಬ್ರಹ್ಮಣ್ಯ ಭಟ್ಟ ಹಂಡ್ರಮನೆ, ಸಿ.ಜಿ. ಹೆಗಡೆ, ಟಿ.ಎನ್. ಭಟ್ಟ, ಸದಾನಂದ ಭಟ್ಟ, ಶ್ರೀರಂಗ ಕಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.ಎಲ್ಲರೂ ಪಾಲ್ಗೊಳ್ಳಲಿ

ಜಿಲ್ಲಾಮಟ್ಟದ ಸಮಾವೇಶದಲ್ಲಿ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಮತ್ತು ಪದಾಧಿಕಾರಿಗಳು ಭಾಗವಹಿಸಬೇಕೆಂದು ಎಕೆಬಿಎಂಎಸ್‌ ರಾಜ್ಯಾಧ್ಯಕ್ಷ ಅಶೋಕ ಹಾರನಹಳ್ಳಿ ಕೋರಿದ್ದಾರೆ.