ದಿ.ಎಸ್.ಜಿ ಮಂಜುನಾಥ್ ಅವರು ಕಚೇರಿಯ ಕೆಲಸಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಆದರೆ, ವಿಧಿ ಆಟ ಅವರ ಬಾಳಲ್ಲಿ ಬಿರುಗಾಳಿಯಂತೆ ಬಂದು ಅಕಾಲಿಕ ಮರಣ ಹೊಂದಿದರು. ಅವರ ಕುಟುಂಬಕ್ಕೆ ದೇವರು ಶಕ್ತಿ ಬರಿಸುವಂತಾಗಲಿ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಾರ್ಯಾಲಯದಿಂದ ದಿ.ಎಸ್.ಜಿ ಮಂಜುನಾಥ್ ಅವರ ಸ್ಮರಣಾರ್ಥ ಆಯೋಜಿಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಇಲಾಖೆ ಸಹಾಯಕ ನಿರ್ದೇಶಕ ಮಹಮದ್ ಹುಸೇನ್ ಚಾಲನೆ ನೀಡಿದರು.ನಂತರ ಮೊಹಮ್ಮದ್ ಹುಸೇನ್ ಮಾತನಾಡಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪರ್ಯಾಯ ವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಸ್.ಜಿ.ಮಂಜುನಾಥ್ ರವರು ಅಕಾಲಿಕ ಮರಣ ಹೊಂದಿದ್ದು, ಅವರ ಸ್ಮರಣಾರ್ಥ ಇಲಾಖೆ ಎಲ್ಲಾ ಸಿಬ್ಬಂದಿಯನ್ನು ಒಳಗೊಂಡು ಕ್ರಿಕೆಟ್ ಪಂದ್ಯ ಆಯೋಜನೆ ಅರ್ಥಪೂರ್ಣವಾಗಿದೆ ಎಂದರು.
ದಿ.ಎಸ್.ಜಿ ಮಂಜುನಾಥ್ ಅವರು ಕಚೇರಿಯ ಕೆಲಸಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಆದರೆ, ವಿಧಿ ಆಟ ಅವರ ಬಾಳಲ್ಲಿ ಬಿರುಗಾಳಿಯಂತೆ ಬಂದು ಅಕಾಲಿಕ ಮರಣ ಹೊಂದಿದರು. ಅವರ ಕುಟುಂಬಕ್ಕೆ ದೇವರು ಶಕ್ತಿ ಬರಿಸುವಂತಾಗಲಿ ಎಂದು ಪ್ರಾರ್ಥಸಿದರು.ಇದಕ್ಕೂ ಮುನ್ನ ಎಸ್.ಜಿ ಮಂಜುನಾಥ್ ಅವರ ಪತ್ನಿ ಎಸ್.ಪವಿತ್ರ ಕಾರ್ಯಕ್ರಮ ಉದ್ಘಾಟಿಸಿದರು. ಪಂದ್ಯದಲ್ಲಿ ಮೂರು ತಂಡಗಳನ್ನು ರಚಿಸಿ ಎಲ್ಲಾ ತಂಡಗಳಿಗೆ ಪರ್ಯಾಯ ವೀಕ್ಷಕರನ್ನು ನೇಮಕ ಮಾಡಿ ತಂಡದ ಉಸ್ತುವಾರಿಯನ್ನು ಕಚೇರಿಯ ಅಧೀಕ್ಷಕ ಮರಿಸ್ವಾಮಿ ಹಾಗೂ ಕ್ರೀಡಾಂಗಣದ ಜವಾಬ್ದಾರಿಯನ್ನು ಕಚೇರಿಯ ಸಿಬ್ಬಂದಿ ನಿತಿನ್ ನಡೆಸಿಕೊಟ್ಟರು.
ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಅರವಿಂದ್, ದರ್ಶನ ನಾಯಕ್, ಸಂಜಯ್, ಪುನೀತ್, ಸುರೇಶ್ ಕುಮಾರ್, ನಂಜುಂಡೇಗೌಡ, ರಚನಾ, ಜಸ್ವಂತ್, ಜಯಬೋರೇಗೌಡ, ಪರಮೇಶ್, ನಂದೀಶ್, ಲೋಕೇಶ್ ಇತರರು ಕಪ್ ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಭೂ ದಾಖಲೆ ಇಲಾಖೆ ಸೂಪರ್ ವೈಸರ್, ಸುರೇಶ್ ಯೋಗರಾಜ್, ಅರವಿಂದ್, ನಿವೃತ್ತ ಮುಖ್ಯೋಪಾಧ್ಯಾಯ ಸೋಮೇಗೌಡ, ನಗುವನಹಳ್ಳಿ ಸೋಮೇಶ್ ಸೇರಿದಂತೆ ಇತರರು ಇದ್ದರು.ಶೋಷಿತ ಸಮುದಾಯಗಳ ರಕ್ಷಣೆಗೆ ಸದಾ ಬದ್ಧ: ಜಯರಾಂ
ಕಿಕ್ಕೇರಿ: ಶೋಷಿತ ಸಮುದಾಯಗಳ ರಕ್ಷಣೆ, ನೆಮ್ಮದಿ ಬದುಕಿಗಾಗಿ ರಕ್ಷಣಾ ಇಲಾಖೆ ಸದಾ ಬದ್ಧವಿದೆ ಎಂದು ಕಿಕ್ಕೇರಿ ಇನ್ಸ್ ಪೆಕ್ಟರ್ ಜಯರಾಂ ಹೇಳಿದರು.ಇಲ್ಲಿನ ಆರಕ್ಷಕ ಠಾಣೆಯಲ್ಲಿ ಏರ್ಪಡಿಸಿದ್ದ ಎಸ್‌ಸಿ, ಎಸ್‌ಟಿ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ಸಮುದಾಯದಲ್ಲಿ ಎಲ್ಲರ ಸಮಾನತೆ ಬಾಳು ಅವಶ್ಯವಿದೆ. ಇದು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಂವಿಧಾನದ ಆಶಯವಾಗಿದೆ ಎಂದರು.
ಎಲ್ಲರಿಗೂ ಸಮಾನತೆಯಿಂದ ಬದುಕುವ ಹಕ್ಕಿದೆ. ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಯಾವುದೇ ರೀತಿ ಸಮಸ್ಯೆಯಾಗದಂತೆ ಇಲಾಖೆ ಸದಾ ಎಚ್ಚರಿಕೆ ವಹಿಸಿದೆ. ನಿಂದನೆ, ಶೋಷಣೆ, ವಂಚನೆ ಪ್ರಕರಣಗಳು ಜರುಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.ಸಮುದಾಯಕ್ಕೆ ಮೊದಲ ಆದ್ಯತೆಯಲ್ಲಿ ನ್ಯಾಯ ಒದಗಿಸಲಾಗುವುದು. ತೊಂದರೆಯಾಗದಂತೆ ಪ್ರತಿ ಮಾಹೆ ಆಗಿಂದಾಗ್ಗೆ ಸಭೆಯನ್ನು ನಡೆಸಲಾಗುವುದು. ಸಣ್ಣ ಸಮಸ್ಯೆಯಾದರೂ ಇಲಾಖೆಗೆ ತಿಳಿಸಿ ತಮ್ಮ ಬೆಂಬಲ, ಸಹಾಯಕ್ಕೆ ಬದ್ಧರಿರುವುದಾಗಿ ಆತ್ಮಸೈರ್ಯ ತುಂಬಿದರು. ಸಭೆಯಲ್ಲಿ ಎಸ್‌ಐ ರಮೇಶ್, ವಿವಿಧ ಗ್ರಾಮಗಳ ಎಸ್‌ಸಿ, ಎಸ್‌ಟಿ ಸಮುದಾಯದ ಮುಖಂಡರು ಇದ್ದರು.