ದೇವಾಂಗ ಜನಾಂಗದ ಧನುರ್ಮಾಸದ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ತಿರುಪತಿಯಿಂದ ಆಗಮಿಸಿದ್ದ ಶ್ರೀಯುತರನ್ನು ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ದೇವಾಂಗ ಯುವಕ ಸಂಘದ ಅಧ್ಯಕ್ಷ ಶಂಕರ್ ಹಾಗೂ ಸದಸ್ಯರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೋಡಂಡರಾಮ್ ಆಧ್ಯಾತ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಎನಿಸುತ್ತದೆ. ಧನುರ್ಮಾಸದಲ್ಲಿ ಜನರು ದೇವಾಲಯಗಳಿಗೆ ಬೆಳಗಿನ ಜಾವ ಭೇಟಿ ನೀಡಿ ಸಂಕಲ್ಪ ಮಾಡಿಕೊಳ್ಳುತ್ತಾರೆ. ತಿರುಮಲದ ವೆಂಕಟೇಶ್ವರನಿಗೂ ಧನುರ್ಮಾಸದಲ್ಲಿ ವೈಕುಂಠ ಏಕಾದಶಿ ಪೂಜೆ ಮಾಡುತ್ತಾರೆ ಎಂದರು.

ಹೊಳೆನರಸೀಪುರ ಪಟ್ಟಣದ ದೇವಾಂಗ ಜನಾಂಗದವರು ಧನುರ್ಮಾಸದ ಬ್ರಾಹ್ಮಿ ಮಹೂರ್ತದಲ್ಲಿ ಒಂದು ತಿಂಗಳ ಕಾಲ ನಡೆಸುವ ಭಜನಾ ಕಾರ್ಯಕ್ರಮದಲ್ಲಿ ತಿರುಪತಿ ತಿರುಮಲ ಕರ್ನಾಟಕ ಭವನದ ವಿಶೇಷಾಧಿಕಾರಿ ಕೆ. ಕೋದಂಡರಾಮ್ ಭಾಗವಹಿಸಿ ಭಕ್ತಿ ಸಮರ್ಪಿಸಿದರು.ದೇವಾಂಗ ಜನಾಂಗದ ಧನುರ್ಮಾಸದ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ತಿರುಪತಿಯಿಂದ ಆಗಮಿಸಿದ್ದ ಶ್ರೀಯುತರನ್ನು ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ದೇವಾಂಗ ಯುವಕ ಸಂಘದ ಅಧ್ಯಕ್ಷ ಶಂಕರ್ ಹಾಗೂ ಸದಸ್ಯರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೋಡಂಡರಾಮ್ ಆಧ್ಯಾತ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಎನಿಸುತ್ತದೆ. ಧನುರ್ಮಾಸದಲ್ಲಿ ಜನರು ದೇವಾಲಯಗಳಿಗೆ ಬೆಳಗಿನ ಜಾವ ಭೇಟಿ ನೀಡಿ ಸಂಕಲ್ಪ ಮಾಡಿಕೊಳ್ಳುತ್ತಾರೆ. ತಿರುಮಲದ ವೆಂಕಟೇಶ್ವರನಿಗೂ ಧನುರ್ಮಾಸದಲ್ಲಿ ವೈಕುಂಠ ಏಕಾದಶಿ ಪೂಜೆ ಮಾಡುತ್ತಾರೆ. ಈ ದಿನಗಳಲ್ಲಿ ದೇಶ ವಿದೇಶಗಳ ಲಕ್ಷಾಂತರ ಜನರು ತಿರುಪತಿಗೆ ಬಂದು ವೆಂಕಟೇಶ್ವರಸ್ವಾಮಿಯ ದರ್ಶನ ಮಾಡುತ್ತಾರೆ ಎಂದು ತಿಳಿಸಿ, ತಿರುಪತಿಯಿಂದ ತಂದಿದ್ದ ಲಾಡು ಪ್ರಸಾದವನ್ನು ಭಜನೆಯಲ್ಲಿ ಭಕ್ತರೆಲ್ಲರಿಗೂ ನೀಡಿದರು.

ಭಜನೆ ಸಾಗುವ ಮಾರ್ಗದಲ್ಲಿ ಚಂದ್ರ, ಅರುಣ್, ಗಣೇಶ್, ನಾರಾಯಣ ದೇವರನಾಮಗಳನ್ನು ಹಾಡಿದರು. ರಾಜಣ್ಣ ಹಾಗೂ ಎಚ್.ಆರ್.ರವಿಕುಮಾರ್ ತಬಲಾ, ಮಂಜು ಹಾಗೂ ಕಾಳಾಚಾರ್ ಹಾರ್ಮೋನಿಯಂ ನುಡಿಸಿದರು.