ಸಾರಾಂಶ
ಹೊಸಕೋಟೆ: ದೇಶದಲ್ಲಿ 50 ರಿಂದ 60 ರಷ್ಟು ಭಾಗದ ಜನತೆ ಕೃಷಿ ಆಧಾರಿತ ಜೀವನಕ್ರಮವನ್ನು ಅನುಸರಿಸುತ್ತಿದ್ದಾರೆ ಇಂತಹ ರೈತರ ಬಾಳನ್ನು ಬೆಳಗಿಸಲು ವಿಧ್ಯಾರ್ಥಿಗಳು ಪಣತೊಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ತಾಲೂಕಿನ ಕಸಬಾ ಹೋಬಳಿಯ ಲಕ್ಕೊಂಡಹಳ್ಳಿ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ, ಬೆಂಗಳೂರು ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಕೃಷಿ, ತೋಟಗಾರಿಕೆ, ರೇಷ್ಮೇ, ಮೀನುಗಾರಿಕೆ ಹಾಗೂ ಪಶುಸಂಗೋಪನೆ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕೃಷಿ ವಿಧ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ 90 ದಿನಗಳ " ಕೃಷಿ ವೈಶಿಷ್ಟ್ಯ " ತಂತ್ರಜ್ಞಾನಗಳ ಅಳವಡಿಕೆ, ಕೃಷಿ ಮೇಳ, ವಸ್ತು ಪ್ರದರ್ಶನ ಮತ್ತು ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕೃಷಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದ ನಂತರ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಉದ್ಯೋಗ ಸೃಷ್ಟಿಗೆ ಚಿಂತನೆ ನಡೆಸಿದೆ. ದೇಶಕ್ಕೆ ಉದ್ಯೋಗ ಹುಡುಕಿಕೊಂಡು ಹೋಗುವ ಯುವಕರ ಅಗತ್ಯವಿಲ್ಲ. ಉದ್ಯೋಗ ಸೃಷ್ಟಿ ಮಾಡುವ ಒಂದು ಶಕ್ತಿಯಾಗಿ ನೀವೆಲ್ಲರೂ ಹೊರಹೊಮ್ಮಬೇಕು. ಅಂತರ್ಜಲ ಕುಸಿತ, ಪ್ರಕೃತಿ ವಿಕೋಪ , ಕ್ರಿಮಿಕೀಟಗಳ ಹಾವಳಿಯಂತಹ ಸಂಕಷ್ಟಗಳ ಮಧ್ಯೆ ಕನಿಷ್ಠ ಬೆಂಬಲ ಬೆಲೆ ಇಲ್ಲದೆ ಬೆಳೆ ಬೆಳೆಯುತ್ತಿರುವ ರೈತರ ಬಾಳನ್ನು ಬೆಳಗಿಸಿ ಅವರನ್ನು ಸದೃಢರಾಗಿಸಲು ಒಗ್ಗೂಡಿ ಶ್ರಮಿಸಬೇಕು. ಇನ್ನು ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಕೃಷಿ ರಂಗದಲ್ಲಿ ಬದಲಾವಣೆಯ ಹಾದಿ ತುಳಿಯಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಶೋಧಕರಾದ ಡಾ.ನಟರಾಜ್, ಡಾ.ಎಂ.ಬಿ ಪ್ರಕಾಶ್, ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ, ಲಕ್ಕೊಂಡಹಳ್ಳಿ ಗ್ರಾಪಂ ಅಧ್ಯಕ್ಷೆ ಭಾರತಿ ದೇವರಾಜ್, ಜಿಪಂ ಒಕ್ಕಲಿಗರ ಸಂಘದ ಅಧ್ಯಕ್ಷ ಮುನಿರಾಜ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸೊಣ್ಣಹಳ್ಳಿಪುರ ಶ್ರೀನಿವಾಸ, ಮಾಜಿ ಗ್ರಾಪಂ ಅಧ್ಯಕ್ಷ ಆನಂದ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲಕ್ಕೊಂಡಹಳ್ಳಿ ಮಂಜುನಾಥ್, ಗ್ರಾಪಂ ಉಪಾಧ್ಯಕ್ಷೆ ಪಾರ್ವತಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಮುಖಂಡರಾದ ವಾಬಸಂದ್ರ ದೇವರಾಜ್, ಕಮ್ಮಸಂದ್ರ ದೇವರಾಜ್, ಗಣೇಶ್‌ಪ್ರಸಾದ್ ಹಾಗೂ ಗ್ರಾಪಂ ಸದಸ್ಯರು, ಜಿಕೆವಿಕೆ ಹಿರಿಯ ಅಧಿಕಾರಿಗಳು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು. ಬಾಕ್ಸ್..............ಇನ್ನೆರಡು ದಿನದಲ್ಲಿ ರೈತರ ಖಾತೆಗೆ ಬರ ಪರಿಹಾರ
ಇನ್ನೆರಡು ದಿನಗಳಲ್ಲಿ ಬರ ಪರಿಹಾರದ ಹಣ ರೈತರ ಖಾತೆಗೆ ಜಮೆ ಆಗಲಿದೆ. ಹಿಂದಿನ ಸರ್ಕಾರಗಳಲ್ಲಿ ಅಧಿಕಾರಿಗಳು ಬರ ಪರಿಹಾರ ವೀಕ್ಷಣೆ ಮಾಡಿ ಅವರು ನೀಡಿದ ವರದಿಯ ಆಧಾರದ ಮೇಲೆ ಬರ ಪರಿಹಾರದ ಹಣ ತಲುಪುತ್ತಿತ್ತು. ಆದರೆ ಬದಲಾವಣೆಯ ಹಾದಿ ತುಳಿದಿರುವ ನಮ್ಮ ಸರ್ಕಾರ ರೈತರು ಪಹಣಿಯಲ್ಲಿ ಘೋಷಣೆ ಮಾಡಿ ಬೆಳೆದಿದ್ದ ಬೆಳೆಗಳ ಆಧಾರದ ಮೇಲೆ ಇಳುವರಿ ಭೂಮಿ ಎಷ್ಟು ಇದೆ ಎಂಬುದರ ಬಗ್ಗೆ ಮಾಹಿತಿ ಪಡೆದು ನೇರವಾಗಿ ಬರ ಪರಿಹಾರದ ಹಣವನ್ನು ರೈತರ ಖಾತೆಗೆ ಜಮೆ ಮಾಡಲಿದೆ. ಅನ್ನದಾತನ ಜೀವನ ಸುಧಾರಣೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.ಫೋಟೋ: 11 ಹೆಚ್‌ಎಸ್‌ಕೆ 2
ಹೊಸಕೋಟೆ ತಾಲೂಕಿನ ಲಕ್ಕೊಂಡಹಳ್ಳಿ ಗ್ರಾಮದಲ್ಲಿ ಜಿಕೆವಿಕೆ ವತಿಯಿಂದ ನಡೆದ ಕೃಷಿ ವೈಶಿಷ್ಟö್ಯ ಕಾರ್ಯಕ್ರಮವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.ಫೋಟೋ: 11 ಹೆಚ್‌ಎಸ್‌ಕೆ 3ಹೊಸಕೋಟೆ ತಾಲೂಕಿನ ಲಕ್ಕೊಂಡಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕೃಷಿ ವೈಶಿಷ್ಟ್ಯ ಕಾರ್ಯಕ್ರಮದಲ್ಲಿ ಕೃಷಿ ವಸ್ತು ಪ್ರದರ್ಶನವನ್ನು ಶಾಸಕ ಶರತ್ ಬಚ್ಚೇಗೌಡ ವೀಕ್ಷಣೆ ಮಾಡಿದರು.