ಸಹಕಾರಿ ಸಂಘಗಳಿಂದ ದೇಶದ ಆರ್ಥಿಕತೆ ಸದೃಢ

| Published : Oct 05 2025, 01:02 AM IST

ಸಹಕಾರಿ ಸಂಘಗಳಿಂದ ದೇಶದ ಆರ್ಥಿಕತೆ ಸದೃಢ
Share this Article
  • FB
  • TW
  • Linkdin
  • Email

ಸಾರಾಂಶ

19ನೇ ಶತಮಾನ ಇಂಗ್ಲೆಡಿನದ್ದು, 20ನೇ ಶತಮಾನ ಅಮೇರಿಕದ್ದಾದರೆ 21ನೇ ಶತಮಾನ ಭಾರತದಾಗಿದೆ.

ಕನ್ನಡಪ್ರಭ ವಾರ್ತೆ ಮೂಡಲಗಿ

ದೇಶದ ಆರ್ಥಿಕತೆ ಸದೃಢ ಮಾಡುವ ಸಂಕಲ್ಪ ಸಹಕಾರಿ ಸಂಘಗಳು ಮಾಡಿವೆ. ಸಾಂಸ್ಥಿಕ ಹಣಕಾಸು ವವ್ಯಹಾರ ಮಾಡುವ ಮೂರನೇಯ ಶಕ್ತಿಯಾಗಿ ಭಾರತ ಕಾರ್ಯನಿರ್ಹಹಿಸಲಿದೆ. ನಮ್ಮ ದೇಶ ಬೆಳವಣಿಗೆಯಲ್ಲಿ ಅತಿ ಕಡುಬಡವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಸಮೀಪದ ಕಲ್ಲೋಳಿಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶನಿವಾರ ನಡೆದ ಶ್ರೀ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿ ಸಂಘದ ನೂತನ ಪ್ರಧಾನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 19ನೇ ಶತಮಾನ ಇಂಗ್ಲೆಡಿನದ್ದು, 20ನೇ ಶತಮಾನ ಅಮೇರಿಕದ್ದಾದರೆ 21ನೇ ಶತಮಾನ ಭಾರತದಾಗಿದೆ. ಬ್ಯಾಂಕಿಂಗ್‌ ವ್ಯವಸ್ಥೆ ಇಲ್ಲದ ಸ್ಥಳದಲ್ಲಿ ಸೊಸಾಯಿಟಿಗಳು ಪ್ರಾರಂಭವಾದವು. ರಾಷ್ಟ್ರೀಕೃತ ಬ್ಯಾಂಕಿನ ಹಿಡಿತದಲ್ಲಿ ಸೊಸಾಯಿಟಿಗಳು ಕಾರ್ಯನಿರ್ವಹಿಸಲು ಆರಂಭಿಸಿದ ನಂತರ ಮತ್ತಷ್ಟು ಸಹಕಾರಿ ಕ್ಷೇತ್ರಕ್ಕೆ ಬಲ ಬಂದತಾಯಿತು ವಿವಿಧ ರೀತಿಯ ಪ್ರಾಯೋಜಕತ್ವನ್ನು ಸೊಸಾಯಿಟಿಗಳಿಗೆ ನೀಡಲಾಯಿತು ಎಂದರು. ಹಿಂದೆ ದೇಶದ ಆರ್ಥಿಕ ಪರಿಸ್ಥಿತಿ ಸರಿಯಾಗಿರಲಿಲ್ಲ. ಆ ಸಮಯದಲ್ಲಿ ಮಾಜಿ ಪ್ರಧಾನಿ ರಾಜೀವ ಗಾಂಧಿಯವರು ಹೇಳಿದಂತೆ ಅವರು ಒಂದು ರುಪಾಯಿಯನ್ನು ಫಲಾನುಭವಿಗೆ ಹಾಕಿದರೆ ಅದು ಕೇವಲ 15 ಪೈಸೆ ಮುಟ್ಟತ್ತಿತ್ತು. ಸದ್ಯ ದೇಶದ ಪ್ರಧಾನಿ ಮೋದಿಯವರು ಹಾಕುವ ಪ್ರತಿ ರುಪಾಯಿನೂ ನೇರವಾಗಿ ಫಲಾನುಭವಿಯ ಖಾತೆಗೆ ಜಮೆಯಾಗುವದರ ಜೊತೆಗೆ ಆತನ ಮೊಬೈಲಿಗೆ ಸಂದೇಶ ಮುಟ್ಟವಂತಹ ತಂತ್ರಜ್ಞಾನ ದೇಶದಲ್ಲಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷ ಸಂಸದ ಈರಣ್ಣ ಕಡಾಡಿ, 23 ವಸಂತಗಳನ್ನು ಪೂರೈಸಿರುವ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯು 2024-25ನೇ ಆರ್ಥಿಕ ವರ್ಷದ ಕೊನೆಯಲ್ಲಿ 16000 ಸದಸ್ಯರನ್ನು ಹೊಂದಿದ್ದು, ಪ್ರಸಕ್ತ ₹23.50 ಲಕ್ಷ ಶೇರು ಬಂಡವಾಳ, ₹106.55 ಕೋಟಿ ದುಡಿಯುವ ಬಂಡವಾಳ, ₹13.35 ಕೋಟಿ ಗುಂತಾವಣಿಗಳು, ₹96.72 ಕೋಟಿ ಠೇವು ಹೊಂದಿದ್ದು, ₹2.76 ಕೋಟಿ ನಿವ್ವಳ ಲಾಭ ಗಳಿಕೆ ಮಾಡಿದೆ. ಜನರಿಗೆ ವಿವಿಧ ರೀತಿಯಲ್ಲಿ ಸಾಲ ನೀಡಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಹಕರಿಸುತ್ತಿದೆ ಎಂದರು.

ಸಾನಿಧ್ಯ ವಹಿಸಿ ಕಾಡಸಿದ್ದೇಶ್ವರ ಮಠ ಕನ್ನೇರಿ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಮಾತನಾಡಿ, ಹಣ ಬಹುಮುಖಿಯಾಗಿ ಕಾರ್ಯನಿರ್ವಹಿಸುತ್ತದೆ. ಮೂರ್ಖರನ್ನು ಬುದ್ಧಿವಂತನಾಗಿಸುತ್ತದೆ. ಗುಣವಂತನ್ನು ಬುದ್ಧಿ ಹೀನನಾಗಿಸುತ್ತದೆ. ದುಡ್ಡು ಜೀವನಕ್ಕೆ ಸಾಧನೆ ಹೊರತು ಸಾಧ್ಯವಲ್ಲ. ಹಣಕ್ಕೆ ದೇವರಾಗುವ ಶಕ್ತಿ ಇಲ್ಲ. ಹಣದ ವೈಶಿಷ್ಟ್ಯ ಏನೆಂದರೆ ಅದು ಚಲಾವಣೆಯಾಗುತ್ತಿರಬೇಕು. ಸಹಕಾರ ನಿಯಮವು ಅದೆ ಆಗಿದೆ ಉಳ್ಳವರು ಹಣವನ್ನು ಡಿಪಾಜಿಟ್ ಮಾಡುತ್ತಾರೆ. ಇಲ್ಲದವರು ಸಾಲ ಪಡೆಯುತ್ತಾರೆ. ಸಹಕಾರಿ ರಂಗ ಸರ್ಕಾರಕ್ಕೆ ಪರ್ಯಾಯವಾಗಿ ಕಾರ್ಯನಿರ್ಹಸುತ್ತಿವೆ ಎಂದರು.

ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಬೆಳಗಾವಿ ಜಿಲ್ಲಾ ಮದ್ಯವರ್ತಿ ಬ್ಯಾಂಕವು ಮೊದಲು ಸತ್ತ ಹಾವಾಗಿತ್ತು ನನ್ನ ಕೈಯಲ್ಲಿ ನೀಡಿದಾಗ ₹544 ಕೋಟಿ ಇದ್ದ ದುಡಿಯುವ ಬಂಡವಾಳದಿಂದ ₹6800 ಕೋಟಿ ದುಡಿಯುವ ಬಂಡವಾಳ ಮಾಡಲಾಗಿದೆ. 50 ಲಕ್ಷ ಕುಟುಂಬಗಳು ಆ ಬ್ಯಾಂಕಿನ ಆಶ್ರಯಿಸಿವೆ. ಚುನಾವಣೆಗಾಗಿ ಸೊಸಾಯಟಿಗಳಿಗೆ ಹಣ ನೀಡಿದ್ದಾರೆ ಆದರೆ 15 ತಾಲೂಕಿನ ಸೊಸಾಯಿಟಿಗಳ ಸದಸ್ಯರು ನಿಸ್ವಾರ್ಥ ಸೇವೆಯ ಅಭ್ಯರ್ಥಿಯನ್ನು ಗೆಲಿಸಿ. ಅಲ್ಪ ಸುಖಕ್ಕಾಗಿ ಆಶೆ ಪಟ್ಟರೆ ಮುಂದಿನ ದಿನಮಾನಗಳಲ್ಲಿ ಆಸ್ತಿ ಕಳೆದುಕೊಳ್ಳುತ್ತಿರಿ. ಸ್ವಾಭಿಮಾನದಿಂದ ಬದುಕಿದರೆ ಸುವರ್ಣಕರವಾದ ದಿನಗಳು ಬರುತ್ತವೆ ಎಂದರು.

ವಿಪ ಸದಸ್ಯ ಹಣಮಂತ ನಿರಾಣಿ, ಬೆಂಗಳೂರಿನ ಕ.ರಾ.ಸೌ.ಸ. ಸಹಕಾರಿ ಸಂಘದ ಅಧ್ಯಕ್ಷ ಜಿ.ನಂಜನಗೌಡ ಮಾತನಾಡಿದರು. ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಜಿಗಳು ಹಾಗೂ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿ ಆಶಿರ್ವಚನ ನೀಡಿದರು.

ವೇದಿಕೆಯ ಮೇಲೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಅಭಯ ಪಾಟೀಲ, ದುರ್ಯೋಧನ ಐಹೊಳೆ, ವಿಠ್ಠಲ ಹಲಗೇಕರ, ನಿಖಿಲ್ ಕತ್ತಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ಪಿ. ರಾಜೀವ, ಡಾ ವಿಶ್ವನಾಥ ಪಾಟೀಲ, ಹುಬ್ಬಳಿ ಮಹಾಪೌರ ಜ್ಯೋತಿ ಪಾಟೀಲ. ಮಲ್ಲಣ್ಣ ಯಾದವಾಡ, ರವಿ ಪಾಟೀಲ್. ವಿಜಯ ಮೆಟಗುಡ್, ಎಮ್ ಎಮ್ ಜೀರಲಿ, ಮಾಜಿ ಜಿಪಂ ಬಸಗೌಡ ಪಾಟೀಲ್, ಸಹಕಾರಿ ಅಧ್ಯಕ್ಷ ಬಾಳಪ್ಪ ಬೆಳಕೂಡ, ಬಿ ಬಿ ಹಂದಿಗುಂದ, ರಮೇಶ ಉಟಗಿ, ಜಯಾನಂದ ಮುನವಳ್ಳಿ. ಸಂಘದ ನಿರ್ದೇಶಕರಾದ ಪರಪ್ಪ ಮಳವಾಡ, ಬಾಳಪ್ಪ ಸಂಗಟಿ, ಸಹದೇವ ಹೆಬ್ಬಾಳ, ಶಿವಪ್ಪ ಗೋಸಬಾಳ, ಅಕ್ಕವ್ವ ಹಡಗಿನಾಳ, ಕಾಶವ್ವಾ ಹೆಬ್ಬಾಳ, ಮಲ್ಲಿಕಾರ್ಜುನ ಹುಲೆನ್ನವರ, ನಿಂಗಪ್ಪ ಮಿಡಕನಟ್ಟಿ, ಪ್ರಧಾನ ವ್ಯವಸ್ಥಾಪಕ (ಪ್ರಭಾರಿ)ಪರಪ್ಪ ಗಿರೆಣ್ಣವರ ಉಪಸ್ಥಿತರಿದ್ದರು.

ಸ್ವಾಗತ ನಿರ್ಧೇಶಕ ಸತೀಶ ಕಡಾಡಿ.ನಿರೂಪಣೆ ಸೋಮಶೇಖರ ಮಗದುಮ್.ಉಪಾಧ್ಯಕ್ಷ ಶ್ರೀಶೈಲ ತುಪ್ಪದ ವಂದಿಸಿದರು,