ಸಮಾಜದ ಸಂಸ್ಕೃತಿ ವ್ಯಕ್ತಿಯ ಸಂಸ್ಕೃತಿ ಮೇಲೆ ನಿಂತಿರುತ್ತದೆ: ಎಚ್‌.ಎಲ್.ನಾಗರಾಜು

| Published : Jun 25 2024, 12:35 AM IST

ಸಮಾಜದ ಸಂಸ್ಕೃತಿ ವ್ಯಕ್ತಿಯ ಸಂಸ್ಕೃತಿ ಮೇಲೆ ನಿಂತಿರುತ್ತದೆ: ಎಚ್‌.ಎಲ್.ನಾಗರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಕಾನೂನು ಕಾಲೇಜು ವಿದ್ಯಾರ್ಥಿಗಳಾಗಿ ಸಮಾಜಕ್ಕೆ ಮತ್ತು ದೇಶಕ್ಕೆ ಯಾವ ಸೇವೆಯನ್ನು ನೀಡಬಹುದು ಎಂಬುದರ ಬಗ್ಗೆ ಅರಿವಿರಬೇಕು. ಜೊತೆಗೆ ಇಂತಹ ಎನ್‌ಎಸ್‌ಎಸ್‌ ಶಿಬಿರಗಳಲ್ಲಿ ಹೆಚ್ಚು ಭಾಗವಹಿಸುವಿಕೆ ಮುಖ್ಯವಾಗಬೇಕು. ಗ್ರಾಮೀಣ ಭಾಗದಲ್ಲಿರುವ ಸಮಸ್ಯೆಗಳನ್ನು ಯಾವ ರೀತಿ ಬಗೆಹರಿಸಿಕೊಡಬಹುದು ಎಂಬ ಅನುಭವ ಇಂತಹ ಶಿಬಿರದಿಂದ ಸಿಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಗ್ರಾಮೀಣ ಭಾಗದ ಜನರ ಜೀವನ ಹೇಗಿದೆ ಎಂಬುದು ನಗರ ಪ್ರದೇಶದ ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಆಗಬೇಕು, ಇದರಿಂದ ಅವರ ಜೀವನ ಶೈಲಿ ಮತ್ತು ಬದಲಾವಣೆ ಕಾಣಲು ಸಾಧ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಎಲ್.ನಾಗರಾಜು ಅಭಿಪ್ರಾಯಪಟ್ಟರು.

ತಾಲೂಕಿನ ಎಲೆಚಾಕನಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ, ಪಿಇಎಸ್‌ ಕಾನೂನು ಕಾಲೇಜಿನ ಸಹಯೋಗದಲ್ಲಿ ಮುಕ್ತಾಯಗೊಂಡ ಕಾನೂನು ಅರಿವು-ನೆರವು ಹಾಗೂ ವನಮಹೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾನೂನು ಕಾಲೇಜು ವಿದ್ಯಾರ್ಥಿಗಳಾಗಿ ಸಮಾಜಕ್ಕೆ ಮತ್ತು ದೇಶಕ್ಕೆ ಯಾವ ಸೇವೆಯನ್ನು ನೀಡಬಹುದು ಎಂಬುದರ ಬಗ್ಗೆ ಅರಿವಿರಬೇಕು. ಜೊತೆಗೆ ಇಂತಹ ಎನ್‌ಎಸ್‌ಎಸ್‌ ಶಿಬಿರಗಳಲ್ಲಿ ಹೆಚ್ಚು ಭಾಗವಹಿಸುವಿಕೆ ಮುಖ್ಯವಾಗಬೇಕು. ಗ್ರಾಮೀಣ ಭಾಗದಲ್ಲಿರುವ ಸಮಸ್ಯೆಗಳನ್ನು ಯಾವ ರೀತಿ ಬಗೆಹರಿಸಿಕೊಡಬಹುದು ಎಂಬ ಅನುಭವ ಇಂತಹ ಶಿಬಿರದಿಂದ ಸಿಗುತ್ತದೆ ಎಂದು ಸಲಹೆ ನೀಡಿದರು.

ಸಮಾಜದ ಸಂಸ್ಕೃತಿ ವ್ಯಕ್ತಿಯ ಸಂಸ್ಕೃತಿ ಮೇಲೆ ನಿಂತಿರುತ್ತದೆ ಅದೇ ರೀತಿ ಜೊತೆಗೆ ಗ್ರಾಮೀಣ ಸಂಸ್ಕೃತಿ ಮೇಲೆ ದೇಶದ ಸಂಸ್ಕೃತಿ ನಿಂತಿರುತ್ತದೆ. ಅಧಿಕಾರ ಸಿಕ್ಕಿದೆ ಎಂದಾಕ್ಷಣ ಹೆಚ್ಚು ಅಹಂಕಾರ ಪಡಬಾರದು. ಸಮಾಜದಲ್ಲಿ ಅನಾಚಾರಗಳು, ಅತ್ಯಾಚಾರಗಳು ಹೆಚ್ಚಾಗುತ್ತಿವೆ, ಅವುಗಳನ್ನು ನಿಲ್ಲಬೇಕಾದರೆ ವಕೀಲರ ಸಂಖ್ಯೆ ಹೆಚ್ಚಾಗಬೇಕು. ಆಗ ಮಾತ್ರ ಸಮಾಜದಲ್ಲಿ ಕ್ರೌರ್ಯತೆ ನಿಂತುಹೋಗಿ ಸಮಾಜ ಸುಭೀಕ್ಷವಾಗಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಸತೀಶ್‌, ಕಾನೂನು ಕಾಲೇಜಿನ ಪ್ರಾಂಶುಪಾಲ ಜೆ.ಯೋಗೀಶ್‌, ಸಹಾಯಕ ಪ್ರಾಧ್ಯಾಪಕ ಎಂ.ಪಿ.ಪ್ರಮೋದ್‌ ಕುಮಾರ್, ಮುಖಂಡ ಅಶೋಕ್‌ಗೌಡ ಪಟೇಲ್‌ ಭಾಗವಹಿಸಿದ್ದರು.ಸರ್ಕಾರಿ ಶಾಲೆಗಳು ಅಭಿವೃದ್ದಿಗೆ ಸಂಘಸಂಸ್ಥೆಗಳ ಸಹಕಾರ ಬಹಳ ಮುಖ್ಯ: ಶಾಂತರಾಮಸ್ವಾಮಿ

ಕನ್ನಡಪ್ರಭ ವಾರ್ತೆ ಭಾರತೀನಗರಸರ್ಕಾರಿ ಶಾಲೆಗಳು ಅಭಿವೃದ್ಧಿಗೆ ಸಂಘಸಂಸ್ಥೆಗಳ ಸಹಕಾರ ಬಹಳ ಮುಖ್ಯ ಎಂದು ಬನಶಂಕರಿ ಮಹಿಳಾ ಸಮಾಜ ಹಾಗೂ ಲಕ್ಷ್ಮಿದೇವಿ ಮಹಿಳಾ ಟ್ರಸ್ಟ್‌ನ ಅಧ್ಯಕ್ಷೆ ಶಾಂತ ರಾಮಸ್ವಾಮಿ ತಿಳಿಸಿದರು.

ಯಲಾದಹಳ್ಳಿ ಹಾಗೂ ಆಲಭುಜನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗಳಿಗೆ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಬನಶಂಕರಿ ಮಹಿಳಾ ಸಮಾಜದಿಂದ ಮಕ್ಕಳಿಗೆ ಕಂಪ್ಯೂಟರ್, ಬಾಟಲ್, ಬ್ಯಾಗ್, ಪುಸ್ತಕಗಳನ್ನ ವಿತರಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ.ಖಾಸಗಿ ಶಾಲೆಗಳು ಪೋಷಕ ಗಮನ ಸೆಳೆಯುತ್ತಿದೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದವರು ಸಂಸ್ಕಾರದಿಂದ ವಂಚಿತರಾಗಲು ಸಾಧ್ಯವೇ ಇಲ್ಲ. ವಿದ್ಯಾರ್ಥಿಗಳು ಯಾವ ಕ್ಷೇತ್ರದಲ್ಲಿ ಆಸಕ್ತರಿದ್ದಾರೆ ಅದನ್ನು ಗುರುತಿಸಿ ಪ್ರೋತ್ಸಾಹ ನೀಡುವಂತೆ ಕೆಲಸವನ್ನ ಶಿಕ್ಷಕರು ಮಾಡಬೇಕಾಗಿದೆ ಎಂದರು.

ಇದೇ ವೇಳೆ ಶಾಂತರಾಮಸ್ವಾಮಿ ಅವರಿಗೆ ಶಾಲೆ ಹಾಗೂ ಗ್ರಾಮಸ್ಥರಿಂದ ಸನ್ಮಾನಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾದ ಮನೋರಮ, ಜ್ಯೋತಿ, ವಿಮಲ, ಇಂದ್ರೀರಾಸತೀಶ್, ಜಯಲಕ್ಷ್ಮಿ, ಯಲಾದಹಳ್ಳಿ ಶಾಲೆ ಮುಖ್ಯ ಶಿಕ್ಷಕ ಕೆ.ಮಂಜು, ಸಹಶಿಕ್ಷಕರಾದ ವೀರರಾಜಅರಸು, ಮಹೇಶ್, ಎಸ್‌ಡಿಎಂಸಿ ಅಧ್ಯಕ್ಷ ಸೋಮಣ್ಣ, ದೊರೆ, ಆಲಭುಜನಹಳ್ಳಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ಜಿ.ಪದ್ಮಾವತಿ, ಸಹಶಿಕ್ಷಕರಾದ ಎ.ಎನ್.ಅಶ್ವಿನಿ, ಎ.ಎಸ್.ಕವನ, ಎಸ್‌ಡಿಎಂಸಿ ಅಧ್ಯಕ್ಷ ಎ.ವಿ.ಜಗದೀಶ್ ಸೇರಿದಂತೆ ಹಲವರಿದ್ದರು.