ಸಾರಾಂಶ
ಮನೆಯಲ್ಲಿನ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು ಮನೆ ಸಂಪೂರ್ಣ ಹಾನಿಯಾದ ಘಟನೆ ಉಧೋಳ ತಾಲೂಕಿನ ಶಿರೋಳ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ.
ಕನ್ನಡ ಪ್ರಭ ವಾರ್ತೆ ಮುಧೋಳ
ಮನೆಯಲ್ಲಿನ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು ಮನೆ ಸಂಪೂರ್ಣ ಹಾನಿಯಾದ ಘಟನೆ ಉಧೋಳ ತಾಲೂಕಿನ ಶಿರೋಳ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ.ಸಿಲೆಂಡರ್ ಸ್ಫೋಟವಾದ ಮನೆಯಲ್ಲಿ ಭಾಗವ್ವ ಚಿನ್ನಪ್ಪ ಮುಂಡಗನೂರು (70), ಮಾಯವ್ವ ಕುರೆನ್ನವರ (38), ಶಿವಲೀಲಾ ಮುಂಡಗನೂರು (23), ಹೇಮಾ ಮುಂಡಗನೂರು (19), ಮಂಜುನಾಥ ಮುಂಡಗನೂರು (14), ಲಕ್ಷ್ಮಿ ಮುಂಡಗನೂರು (16), ಸರೋಜಾ ಸಿದ್ದಪ್ಪ ಮುಂಡಗನೂರು(28), ಸಿದ್ದಪ್ಪ ಚಿನ್ನಪ್ಪ ಮುಂಡಗನೂರು (37), ಶಿವಾನಂದ ಮುಂಡಗನೂರು (14) ಇದ್ದರೆಂದು ಹೇಳಲಾಗುತ್ತಿದ್ದು, ಇದರಲ್ಲಿ ಯಾರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲವೆಂದು ತಿಳಿದುಬಂದಿದೆ. ಸ್ಫೋಟದ ರಭಸಕ್ಕೆ ಮನೆಯ ಮೇಲ್ಛಾವಣಿ ಸಂಪೂರ್ಣ ಕಿತ್ತುಹೋಗಿದೆ.