ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಧರ್ಮಮಾರ್ಗ, ರಾಜಧರ್ಮ, ನೀತಿಶಾಸ್ತ್ರದ ಮೌಲ್ಯಗಳನ್ನು ವಿಶ್ವಕ್ಕೆ ಅರುಹಿದ ಮತ್ತು ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡುವ ಮೂಲಕ ಸಹನೆ, ಸಹಿಷ್ಣುತೆ ಹಾಗೂ ಪ್ರೀತಿಯನ್ನು ಮಹಾಕಾವ್ಯ ರಾಮಾಯಣದ ಮೂಲಕ ಜನಮಾನಸದಲ್ಲಿ ಭದ್ರವಾಗಿಸಿದ ಶ್ರೇಯಸ್ಸು ಮಹಾಕವಿ ವಾಲ್ಮೀಕಿ ಮಹರ್ಷಿಗೆ ಸಲ್ಲುತ್ತದೆಂದು ವಿಧಾನ ಪರಿಷತ್ ಉಪಸಭಾಪತಿ ಡಾ.ಉಮಾಶ್ರೀ ಹೇಳಿದರು.ರಬಕವಿ-ಬನಹಟ್ಟಿ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ನಡೆದ ಮಹಾಕವಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ತುಂಬು ಗರ್ಭಿಣಿ ಸೀತಾ ಮಾತೆಗೆ ಆಶ್ರಮದಲ್ಲಿ ಆಶ್ರಯ ಕಲ್ಪಿಸಿ, ಲವ-ಕುಶರಿಗೆ ರಾಮಾಯಣ ಮಹಾಕಾವ್ಯ ಬೋಧಿಸಿದ ಮಹರ್ಷಿ ಇಡೀ ಮನುಕುಲಕ್ಕೆ ಮಾನವೀಯ ಮೌಲ್ಯಗಳನ್ನು, ಸತ್ಯ ಸಂಧತೆ, ಧರ್ಮದ ವ್ಯಾಖ್ಯಾನ ನೀಡುವ ಮೂಲಕ ಎಂದಿಗೂ ಅಜರಾಮರವಾಗಿದ್ದಾರೆಂದರು. ಈ ವೇಳೆ ವಾಲ್ಮೀಕಿ ಸಮುದಾಯದವರು ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಸರಿಪಡಿಸಲು ಮೇಲ್ಮನವಿ ಸಲ್ಲಿಸಲು ಮುಖ್ಯಮಂತ್ರಿಗಳಿಗೆ ನೀಡಿದ ಮನವಿ ಸಲ್ಲಿಸಿದರು.
ತಹಸೀಲ್ದಾರ್ ಗಿರೀಶ ಸ್ವಾದಿ, ತಾಪಂ ಇಒ ಬಸವರಾಜ ಐನಾಪುರ, ಗ್ರೇಡ್-೨ ತಹಸೀಲ್ದಾರ ಸುನೀಲಕುಮಾರ, ಡಾ.ಬಸವರಾಜ ಗೌಡರ, ಸದಾಶಿವ ಕುಂಬಾರ, ಚೇತನ ಭಜಂತ್ರಿ, ಶಶಿಧರ ಕಡಪಡಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಾನಪ್ಪ ಹುಲಜತ್ತಿ, ನೀಲಕಂಠ ಮುತ್ತೂರ, ರಾಜೇಂದ್ರ ಭದ್ರನ್ನವರ, ಹನುಮಂತ ಬರಗಲ್, ಪ್ರೊ.ಫಕೀರಪ್ಪ ತಳವಾರ, ಅಧ್ಯಕ್ಷ ಕಾಶಿರಾಯ ನಾಯಕ, ಕಾಡಪ್ಪ ಮಂಟೂರ, ಪರಸಪ್ಪ ನಾಯಕ, ಹನುಮಂತ ನಾಯಕ, ಸುರೇಶ ವಾಲಿಕಾರ, ಶ್ರೀಶೈಲ ಗಲಗಲಿ, ಮಲ್ಲು ಕಾಂಬಳೆ, ಪರಸಪ್ಪ ದೊಡಮನಿ, ಪರಸಪ್ಪ ಗುಬ್ಬಿ ಸೇರಿದಂತೆ ಅನೇಕರಿದ್ದರು.