ಕನ್ನಡಪ್ರಭ ವಾರ್ತೆಆಲಮಟ್ಟಿ ಮಾನವೀಯ ಮೌಲ್ಯಗಳ ಆಧಾರದ ಮೇಲೆ ಧರ್ಮವನ್ನು ಮುನ್ನಡೆಸುವ ಮೂಲಕ ಸಮಾಜದಲ್ಲಿರುವ ಅಸ್ಪೃಶ್ಯತೆ, ಜಾತಿಭೇದ ಸೇರಿದಂತೆ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಬೇಕು ಎಂದು ಚಿಮ್ಮಲಗಿ ಅರಳಲೆ ಕಟ್ಟಿಮನಿ ಹಿರೇಮಠದ ಸಿದ್ಧರೇಣುಕ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆಆಲಮಟ್ಟಿ

ಮಾನವೀಯ ಮೌಲ್ಯಗಳ ಆಧಾರದ ಮೇಲೆ ಧರ್ಮವನ್ನು ಮುನ್ನಡೆಸುವ ಮೂಲಕ ಸಮಾಜದಲ್ಲಿರುವ ಅಸ್ಪೃಶ್ಯತೆ, ಜಾತಿಭೇದ ಸೇರಿದಂತೆ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಬೇಕು ಎಂದು ಚಿಮ್ಮಲಗಿ ಅರಳಲೆ ಕಟ್ಟಿಮನಿ ಹಿರೇಮಠದ ಸಿದ್ಧರೇಣುಕ ಸ್ವಾಮೀಜಿ ನುಡಿದರು.ಸಮೀಪದ ಬೇನಾಳ ಆರ್.ಎಸ್.ಗ್ರಾಮದ ದುರ್ಗಾದೇವಿ (ಮುಚಖಂಡಿ) ದೇವಸ್ಥಾನದಲ್ಲಿ, ಚಿಮ್ಮಲಗಿ ಗ್ರಾಮದ ಜನರು ಕೊಡುಗೆಯಾಗಿ ನೀಡಿದ ಕಲ್ಲಿನಿಂದ ನಿರ್ಮಿಸಿರುವ 21 ಅಡಿ ಎತ್ತರದ ದೀಪಸ್ತಂಭದ ಉದ್ಘಾಟನಾ ಸಮಾರಂಭದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು

12ನೇ ಶತಮಾನದಲ್ಲಿ ಬಸವಣ್ಣನವರು ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು. ಅವರ ಆಶಯಗಳನ್ನು ಇಂದಿನ ಸಮಾಜವೂ ಅಳವಡಿಸಿಕೊಳ್ಳಬೇಕು ಎಂದರು.ಕಾಂಗ್ರೆಸ್ ಮುಖಂಡ ರಾಮು ಜಗತಾಪ ಮಾತನಾಡಿ, ಬೇನಾಳ ಹಾಗೂ ಚಿಮ್ಮಲಗಿ ಗ್ರಾಮಗಳ ನಡುವಿನ ಧಾರ್ಮಿಕ ಹಾಗೂ ಸಾಮಾಜಿಕ ಸಂಬಂಧ ಸಾವಿರಾರು ವರ್ಷಗಳಷ್ಟು ಹಳೆಯದು. ಆಲಮಟ್ಟಿ ಜಲಾಶಯ ನಿರ್ಮಾಣದಿಂದ ಎರಡೂ ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿ, ಪುನರ್ವಸತಿ ಕೇಂದ್ರಗಳಲ್ಲಿ ನೆಲೆಸಿದರೂ, ಭಾವನಾತ್ಮಕವಾಗಿ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಲು ದುರ್ಗಾದೇವಿಯ ಮೇಲಿನ ಭಕ್ತಿಯೇ ಪ್ರಮುಖ ಕಾರಣವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಎಂಬಿಬಿಎಸ್ ಪ್ರವೇಶ ಪಡೆದ ಮಾದೇಶ ಹಲಗಿ, ಪಿಎಸೈ ಹುದ್ದೆಗೆ ಆಯ್ಕೆಯಾದ ವಿಜಯಲಕ್ಷ್ಮೀ ಚವ್ಹಾಣ ಹಾಗೂ ಸರ್ವಧರ್ಮ ಸಮಾನತೆಯ ಪ್ರವರ್ತಕ ಚಿಮ್ಮಲಗಿಯ ಕಾಶೀಮಸಾಬ್ (ಬಾಬು) ವಾಲೀಕಾರ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಮಲ್ಲನಗೌಡ ನರಸನಗೌಡರ, ಶೇಕಣ್ಣ ಸಂಗಣ್ಣವರ, ಗ್ರಾ.ಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚನಗೊಂಡ, ಹಣಮಂತ ಮಕಾಳಿ, ಅರಳದಿನ್ನಿ ಚಂದ್ರಮ್ಮ ದೇವಿ ದೇವಸ್ಥಾನದ ಧರ್ಮಾಧಿಕಾರಿ ಚಂದ್ರಶೇಖರ ಧರ್ಮರ, ತುಕಪ್ಪಗೌಡ ಬಿರಾದಾರ, ಗುತ್ತಿಗೆದಾರ ಶ್ರೀಶೈಲ ಕೊಂಬೆನ್ನವರ, ಡಾ.ಸಂತೋಷ ಬಸರಕೋಡ, ಬಿ.ಎಚ್.ಗಣಿ, ರಮೇಶ ವಂದಾಲ, ಗ್ರಾ.ಪಂ ಮಾಜಿ ಸದಸ್ಯ ಎಸ್.ಆರ್.ಬಿರಾದಾರ, ಮಹೇಶ ಆಹಾರ, ಆಹಾರ ನಿರೀಕ್ಷಕ ಎಚ್.ಕೆ.ಬಿಳೆಕುದರಿ, ಮಹೇಶ ಇಂಗಳೇಶ್ವರ, ಶರಣಪ್ಪ ಇಂಗಳೇಶ್ವರ, ಅಶೋಕ ತಳವಾರ, ರಮೇಶ ಆಲಮಟ್ಟಿ, ಬೈಲಪ್ಪ ಬಾಗೇವಾಡಿ, ಗ್ರಾ.ಪಂ ಮಾಜಿ ಸದಸ್ಯ ಬಸಲಿಂಗಪ್ಪ ತಳವಾರ, ಬಾವಾಸಾ ತಳವಾರ, ಶ್ರೀಶೈಲ ಬಡಿಗೇರ, ಮುತ್ತು ಬಡಿಗೇರ, ಮಹೇಶ ಗಾಳಪ್ಪಗೋಳ ಸೇರಿದಂತೆ ಇತರರು ಇದ್ದರು.