ರಾಮನಗರ: ಐತಿಹಾಸಿಕ ಹಿನ್ನೆಲೆಯುಳ್ಳ ರಾಮನೂರಿನಲ್ಲಿ ಶುಕ್ರವಾರ ರಾತ್ರಿ ಧ್ವನಿ ಬೆಳಕಿನ ಸಂಯೋಜನೆಯೊಂದಿಗೆ ನಡೆದ ಅಬ್ಬರದ ಮಡಿಕೇರಿ ಸ್ತಬ್ಧಚಿತ್ರ ಪ್ರದರ್ಶನ ಹಾಗೂ ಗ್ರಾಮ ದೇವ - ದೇವತೆಗಳ ಭವ್ಯ ಮೆರವಣಿಗೆ ಜನರನ್ನು ದೇವಲೋಕಕ್ಕೆ ಕರೆದೊಯ್ದಿತ್ತು.
ರಾಮನಗರ: ಐತಿಹಾಸಿಕ ಹಿನ್ನೆಲೆಯುಳ್ಳ ರಾಮನೂರಿನಲ್ಲಿ ಶುಕ್ರವಾರ ರಾತ್ರಿ ಧ್ವನಿ ಬೆಳಕಿನ ಸಂಯೋಜನೆಯೊಂದಿಗೆ ನಡೆದ ಅಬ್ಬರದ ಮಡಿಕೇರಿ ಸ್ತಬ್ಧಚಿತ್ರ ಪ್ರದರ್ಶನ ಹಾಗೂ ಗ್ರಾಮ ದೇವ - ದೇವತೆಗಳ ಭವ್ಯ ಮೆರವಣಿಗೆ ಜನರನ್ನು ದೇವಲೋಕಕ್ಕೆ ಕರೆದೊಯ್ದಿತ್ತು.
ನಗರದ ಎಲ್ಲ ರಸ್ತೆ ಮತ್ತು ವೃತ್ತಗಳಲ್ಲಿ ದೀಪಾಲಂಕಾರ ಜನರಿಗೆ ಸ್ವಾಗತ ಕೋರುತ್ತಿದ್ದರೆ, ಗ್ರಾಮ ದೇವರುಗಳ ಮೆರವಣಿಗೆಯೊಂದಿಗೆ ಸಾಗಿದ ಮೂರು ಮಂಟಪಗಳು ಪುರಾಣ ಪ್ರಸಿದ್ಧ ಕಥೆಯ ಸಾರಂಶವನ್ನು ಧ್ವನಿ ಬೆಳಕಿನ ಮೂಲಕ ಗತಕಾಲದ ವೈಭವ ಸಾರುತ್ತಿದ್ದವು.ಎದೆ ನಡುಗಿಸೋ ಶಬ್ದ, ಅದಕ್ಕೆ ತಕ್ಕಂತೆ ಬೆಳಕು, ಇವೆಲ್ಲವುಗಳಿಗೆ ಪೂರಕವಾಗಿ ನರ್ತಿಸುವ ದೇವರ ಮೂರ್ತಿಗಳು ನೆರೆದಿದ್ದ ಜನರನ್ನು ಒಮ್ಮೆ ದೇವಲೋಕಕ್ಕೆ ಕರೆದುಕೊಂಡು ಹೋಗಿತ್ತು. ಒಂದೊಂದು ಮಂಟಪಗಳಲ್ಲೂ ಒಂದೊಂದು ಕಥೆಯನ್ನು ವಿಭಿನ್ನ ರೀತಿಯಲ್ಲಿ ಜನರ ಮುಂದಿಟ್ಟು ಕಲಾವಿದರು ಮೆಚ್ಚುಗೆ ಗಳಿಸಿದರು.
ಮೆರವಣಿಗೆ ನೋಡಲು ಜನರು ಮುಗಿಬಿದ್ದರು. ನೂಕುನುಗ್ಗಲಿನ ನಡುವೆಯೂ ಜನರು ವರ್ಣ ರಂಜಿತ ಮೂರು ಮಂಟಪಗಳನ್ನು ವೀಕ್ಷಿಸಲು ನಗರದಾದ್ಯಂತ ಕಾಲ್ನಡಿಗೆಯಲ್ಲೇ ತೆರಳಿ ದೇವರುಗಳ ಮೆರವಣಿಗೆ ಸೌಂದರ್ಯವನ್ನು ಕಣ್ತುಂಬಿಕೊಂಡರು.ಶುಕ್ರವಾರ ಸಂಜೆಯಿಂದ ತಡರಾತ್ರಿವರೆಗೆ ಮಿನುಗುವ ದೀಪಗಳ ಕೆಳಗೆ ಕತ್ತಲೆಯನ್ನು ಭೇದಿಸುವ ರಾಕ್ಷಸರ ಘರ್ಜನೆ, ಶಾಂತಿ ಮತ್ತು ಭದ್ರತೆಯ ಭಾವವನ್ನು ತರಲು ದೇವರು
ಮತ್ತು ದೇವತೆಗಳ ಅವತಾರಗಳು, ತ್ವರಿತ ಭಕ್ತಿಯನ್ನು ಆಹ್ವಾನಿಸುವ ದೇವತೆಗಳ ವಿಗ್ರಹಗಳು, ಮಡಿಕೇರಿ ಮೂರು ಮಂಟಪಗಳ ಮೆರವಣಿಗೆಯ ಪ್ರಮುಖ ಆಕರ್ಷಣೆಗಳಾಗಿದ್ದವು.ಸಚಿವರಿಂದ ಪೂಜೆ ಸಲ್ಲಿಸಿ ಚಾಲನೆ :
ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಐದು ಹೋಬಳಿಗಳ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನೆಲೆಸಿರುವ ಗ್ರಾಮ ದೇವರುಗಳ ಉತ್ಸವ ಮೂರ್ತಿಗಳನ್ನು ಹೂವಿನಅಲಂಕಾರದೊಂದಿಗೆ ಸಾರೋಟು ಮತ್ತು ತೆರೆದ ಟ್ರ್ಯಾಕ್ಟರ್ ಗಳಲ್ಲಿ ಮಾರುತಿ ನಗರದ ಬಳಿಗೆ ತಂದು ಮೆರವಣಿಗೆಗೆ ಅಣಿಗೊಳಿಸಲಾಯಿತು.
ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹಾಗೂ ಶಾಸಕ ಇಕ್ಬಾಲ್ ಹುಸೇನ್ ಅವರು ರಾತ್ರಿ 7.30ಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಡಿಕೇರಿಯ ಸ್ತಬ್ಧ ಚಿತ್ರಗಳು ಮತ್ತು ಗ್ರಾಮ ದೇವ ದೇವತೆಗಳ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.ಆನಂತರ ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ, ಬಮೂಲ್ ಅಧ್ಯಕ್ಷ ಡಿ. ಕೆ. ಸುರೇಶ್ ಹಾಗೂ ಶಾಸಕ ಇಕ್ಬಾಲ್ ಹುಸೇನ್ ಅವರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಈ ಮೆರವಣಿಗೆಯು ಮಾರುತಿ ನಗರದಲ್ಲಿರುವ ಕಾಂಗ್ರೆಸ್ ಭವನದಿಂದ ಪ್ರಾರಂಭಗೊಂಡು ಪೊಲೀಸ್ ಭವನ ವೃತ್ತ, ವಾಟರ್ ಟ್ಯಾಂಕ್ ವೃತ್ತ ತಲುಪಿತು. ಅಲ್ಲಿ ಮೂರು ಸ್ತಬ್ಧ ಚಿತ್ರಗಳು ಪ್ರದರ್ಶನ ನೀಡಿದವು. ಅಲ್ಲಿಂದ ಕಾಮನ ಗುಡಿ ವೃತ್ತದ ಮೂಲಕ ಎಂ. ಜಿ. ರಸ್ತೆಯಲ್ಲಿ ಸಾಗಿ ಕೆಂಗಲ್ ಹನುಮಂತಯ್ಯ ವೃತ್ತ ತಲುಪಿತು.ಐಜೂರು ವೃತ್ತದ ಮಾರ್ಗವಾಗಿ ಕೆಂಪೇಗೌಡ ವೃತ್ತ, ರಾಯರದೊಡ್ಡಿ ವೃತ್ತಕ್ಕೆ ತೆರಳಿ ಸ್ತಬ್ಧ ಚಿತ್ರಗಳು ಪ್ರದರ್ಶನ ನೀಡಿದವು.ಅಲ್ಲಿಂದ ರೋಟರಿ ಸರ್ಕಲ್ ಮಾರ್ಗವಾಗಿ ಕಾಂಗ್ರೆಸ್ ಭವನದ ಎದುರಿಗಿರುವ ಗೌಸಿಯಾ ಕಾಲೇಜು ಬಳಿಗೆ ವಾಪಸ್ಸಾಯಿತು. ರಸ್ತೆಯ ಎರಡು ಇಕ್ಕೆಲಗಳಲ್ಲಿ ಹಾಗೂ ಕಟ್ಟಡಗಳ ಮೇಲೆ ನಿಂತು ಜನರು ದೇವರ ದರ್ಶನ ಪಡೆದು ಪುನಿತರಾದರು.
ಶ್ರೀ ರಾಮ ಕಾಕಾಸುರನನ್ನು ಸಂಹಾರ ಮಾಡಿದ, ವಿಘ್ನ ನಿವಾರಕ ಗಣೇಶನ ಮಹಿಮೆ ಹಾಗೂ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಯಿಂದ ರಾಕ್ಷಸರ ಸಂಹಾರ ಮಾಡಿದಂತಹ ವೈವಿಧ್ಯಮಯ ಪೌರಾಣಿಕ ಥೀಮ್ ಇಟ್ಟುಕೊಂಡು ರೂಪಿಸಲಾಗಿದ್ದ ಸ್ತಬ್ಧಚಿತ್ರಗಳು ಒಂದಕ್ಕೊಂದು ಅದ್ಭುತವಾಗಿದ್ದವು.ಈ ವರ್ಣ ರಂಜಿತ ಸ್ತಬ್ಧ ಚಿತ್ರಗಳು ಹಾಗೂ ಗ್ರಾಮ ದೇವರುಗಳ ಮೆರವಣಿಗೆಗೆ ಜಾನಪದ ಕಲೆ ಮತ್ತು ಕಲಾವಿದರು ರಂಗು ತುಂಬಿದರು.ಶ್ರೀರಾಮ, ಲಕ್ಷ್ಮಣ, ಆಂಜನೇಯ ಗೊಂಬೆಗಳು,
ಹುಲಿ ವೇಷಧಾರಿ , ಯಕ್ಷಗಾನ, ಕಂಗೀಲು ಕುಣಿತ, ಕಹಳೆ, ನಗಾರಿ ,ತಮಟೆ , ವೀರಗಾಸೆ, ಕಂಸಾಳೆ, ಪಟದ ಕುಣಿತ, ಡೊಳ್ಳು ಕುಣಿತ, ಗಾರುಡಿ ಗೊಂಬೆ ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಗಳು ಭಕ್ತರ ಕಣ್ಮನ ಸೆಳೆಯಿತು.ಕೋಟ್.....
ಬಿಜೆಪಿ ಪಕ್ಷದವರಂತೆ ಕಾಂಗ್ರೆಸ್ ಎಂದೂ ದೇವರನ್ನು ರಾಜಕೀಯವಾಗಿ ಬಳಸಿಕೊಂಡಿಲ್ಲ. ಚುನಾವಣೆಗಳು ಬಂದಾಗ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇವೆ. ಬಿಜೆಪಿಗಿಂತಲೂ ಕಾಂಗ್ರಸ್ ನಲ್ಲಿ ಹೆಚ್ಚಿನ ದೇವ ಭಕ್ತರಿದ್ದಾರೆ. ಅಂತೆಯೇ ಕಾಂಗ್ರೆಸ್ ಸರ್ಕಾರ ಎಲ್ಲಾ ದೇವಸ್ಥಾನಗಳ ಅಭಿವೃದ್ಧಿಗೂ ಒತ್ತು ಕೊಡುತ್ತಿದೆ.- ರಾಮಲಿಂಗಾರೆಡ್ಡಿ, ಮುಜರಾಯಿ ಖಾತೆ ಸಚಿವರು.16ಕೆಆರ್ ಎಂಎನ್ 11,12.ಜೆಪಿಜಿ
ಮಡಿಕೇರಿಯ ಸ್ತಬ್ಧ ಚಿತ್ರಗಳು ಮತ್ತು ಗ್ರಾಮ ದೇವರುಗಳ ಆಕರ್ಷಕ ಮೆರವಣಿಗೆ.